Thursday, November 6, 2025

ಒಂದಾಗಲು ಬಿಡದ `ವಂದೇ ಮಾತರಂ!

ಒಂದಾಗಲು ಬಿಡದ `ವಂದೇ ಮಾತರಂ!

- ಡಾ. ರಾಜೇಂದ್ರ ಬುರಡಿಕಟ್ಟಿ

ಭಾರತದಲ್ಲಿ ಆಗಾಗ ಭೂಮಿಯ ಒಳಗಿಂದ ಮೇಲಕ್ಕೆ ಎದ್ದು ಒಂದಿಷ್ಟು ಸದ್ಧುಮಾಡುವ ಕೆಲವು ಭಾವನಾತ್ಮಕ ಸಂಗತಿಗಳಿವೆ. ಭಾರತದ ಸಾಂಸ್ಕೃತಿಕ ರಾಜಕಾರಣದ ಅತ್ಯಂತ ಪ್ರಭಾವೀ ಅಂಶಗಳೆಂದು ಪರಿಗಣಿತವಾಗಿರುವ ಇವುಗಳಲ್ಲಿ ಭಾರತದ ʼರಾಜಕೀಯ ಪ್ರಾಣಿʼ (Indian Political Animal) ʻಗೋವು́ ಒಂದಾದರೆ ಇನ್ನೊಂದು ʻಭಾರತದ ರಾಜಕೀಯ ಗೀತೆʼ (Indian Political Song) ಎಂದು ಪರಿಗಣಿತವಾಗಿರುವ ʼವಂದೇ ಮಾತರಂʼ ಇನ್ನೊಂದು.

ಈ ʻವಂದೇ ಮಾತರಂʼ ಆಗಾಗ ಹೀಗೆ ಭೂಮಿಯಿಂದ ಮೇಲೆದ್ದು ಸದ್ದುಮಾಡುವುದು ಹೊಸದೇನೂ ಅಲ್ಲದಿದ್ದರೂ ಅದರ ತೀವ್ರತೆ ಈಗ ತುಸು ಹೆಚ್ಚೇ ಇದೆ. ಇದಕ್ಕೆ ಕಾರಣ ಎಲ್ಲರಿಗೂ ತಿಳಿದದ್ದೆ. ಈ ವಂದೇ ಮಾತರಂ ಆಗಾಗ ಹೀಗೆ ಹೊರಬಂದು ಸದ್ದು ಮಾಡುವುದಕ್ಕೆ ನೆಪವಾಗುವ ಕಾರಣಗಳು ಮೇಲ್ನೋಟಕ್ಕೆ ಬೇರೆಬೇರೆಯಾಗಿ ಕಂಡರೂ ಅಂತರಾಳದಲ್ಲಿ ಅವುಗಳ ಕರುಳುಬಳ್ಳಿ ಒಂದೇ. ಅದು ಉಗ್ರ ಹಿಂದುತ್ವ. ಹಿಂದೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಈಗಿರುವ ಚಿಕ್ಕ ವಂದೇ ಮಾತರಂ ಬದಲು ಅದರ ಪೂರ್ಣಪಾಠ ಹಾಡಬೇಕೆಂಬ ನೆಪದಲ್ಲಿ ಇದು ಸುದ್ಧಿಮಾಡಿದ್ದರೆ ಇನ್ನೊಂದು ಸಲ ಶಾಲಾ ಮಕ್ಕಳಿಗೆ ಅದನ್ನು ಪೂರ್ಣವಾಗಿ ಹೇಳಿಸಬೇಕು ಎಂದು ಸುದ್ಧಿಮಾಡಿತ್ತು. ಈ ಸಲ ಇದು ಇನ್ನೊಂದು ವರಸೆಯಿಂದ ಶುರುವಾಗಿದೆ. ವಂದೇಮಾತರಂ ಗೀತೆಗೆ 150 ವರ್ಷಗಳು ತುಂಬುತ್ತಿವೆಯಂತೆ. 2006 ರಲ್ಲಿ ಈ ಗೀತೆಗೆ 125 ವರ್ಷಗಳಾಯಿತು ಎಂದು ಇವರೆಲ್ಲ ಒಂದು ಸಂಭ್ರಮದ ಆಚರಣೆ ಮಾಡಿದ್ದರು. 2006ರಲ್ಲಿ 125 ವರ್ಷ ಆದರೆ 2025-26ಕ್ಕೆ ಹೇಗೆ 150 ವರ್ಷಗಳಾಗುತ್ತವೆಯೋ ದೇವರೇ ಬಲ್ಲ! ಇದು ಭಾವನಾತ್ಮಕ ವಿಷಯವಾದ್ದರಿಂದ ಸುಮ್ಮನೆ ಹೂಂಗುಟ್ಟುತ್ತಾ ನಡೆಯಬೇಕು ಅಷ್ಟೆ. ಈ ರೀತಿಯ ಪ್ರಶ್ನೆ ಕೇಳಿದರೆ ಅವರೆಲ್ಲ ಕಿಡಿಗೇಡಿಗಳಾಗಿಬಿಡುತ್ತಾರೆ!

ಅದು ಒತ್ತಟ್ಟಿಗಿರಲಿ ಈ 150ರ ಸಂಭ್ರಮವನ್ನು ನೆಪವಾಗಿಟ್ಟುಕೊಂಡು, ಅದನ್ನು ಆರಾಧಿಸುವ ನೆಪದಲ್ಲಿ ಈಗ ರಾಷ್ಟ್ರಗೀತೆಯಾಗಿರುವ ʼಜನಗಣಮನ ಬ್ರಿಟೀಷರ ಆಗಮನಕ್ಕೆ ಸ್ವಾಗತಗೀತೆಯಾಗಿ ರಚಿತವಾಗಿರುವಂಥದ್ದು. ಅದಕ್ಕಾಗಿ ಆ ಗೀತೆಯು ವಿರಾಜಮಾನವಾಗಿರುವ ಸ್ಥಳದಿಂದ ಅದನ್ನು ಪದಚ್ಯುತಗೊಳಿಸಿ ಅಲ್ಲಿಗೆ ಈ ವಂದೇ ಮಾತರಂ ಅನ್ನು ಪ್ರತಿಷ್ಠಾಪಿಸಬೇಕುʼ ಎಂಬುದು ಇವರೆಲ್ಲ ಮನದಾಳದ ಇಚ್ಚೆ. ಹೀಗೆ ಇದನ್ನು ಇದರ ಪ್ರತಿಪಾದಕರು ನೇರವಾಗಿ ಹೇಳುತ್ತಿಲ್ಲವಾದರೂ ಅವರ ಹೊಟ್ಟೆಯ ಒಳಗೆ ಇರುವುದು ಇದೇ.

ʻವಂದೇ ಮಾತರಂʼ ಗೀತೆಯ ಆರಂಭಿಕ ನುಡಿಗಳನ್ನು ಮಾತ್ರ ಹಾಡಲು ದೇಶ ತೀರ್ಮಾನಿಸಿದ ಸಂದರ್ಭವನ್ನು ಉಲ್ಲೇಖಿಸುವ ಕೆಲವು ದೇಶಭಕ್ತರು, ಈ ಗೀತೆಯನ್ನು ʼತುಂಡರಿಸಲಾಯಿತುʼ ʼಕತ್ತರಿಸಲಾಯಿತುʼ ಇಂತಹ ಪ್ರಚೋದನಕಾರಿ ಮಾತುಗಳನ್ನೇ ಬಳಸುತ್ತಾರೆ. ಅದರ ಬದಲು ʼಸಂಕ್ಷೇಪಿಸಲಾಯಿತುʼ ʼಸಂಕ್ಷಿಪ್ತಗೊಳಿಸಲಾಯಿತುʼ ಎಂದು ಹೇಳುವುದು ಸಾಧ್ಯವಿದ್ದರೂ ಅವರು ಈ ಪದಗಳ ಬಳಕೆಯನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತಾರೆ . ಇದರಿಂದಲೇ ಅವರ ಉದ್ದೇಶ ನಮಗೆ ಅರ್ಥವಾಗುತ್ತದೆ. ಹಾಗೆ ನೋಡಿದರೆ ಕೇವಲ ವಂದೇ ಮಾತರಂ ಅನ್ನು ಮಾತ್ರ ಹೀಗೆ ಮೊಟುಕುಗೊಳಿಸಿಲ್ಲ. ಈಗ ನಮ್ಮ ರಾಷ್ಟ್ರಗೀತೆಯಾಗಿರುವ ʼಜನಗಣಮನʼ ಕೂಡ ಒಂದು ಮೊಟುಕುಗೊಳಿಸಲ್ಪಟ್ಟ ಗೀತೆಯೇ! ರವೀಂದ್ರ ನಾಥ ಠಾಕೂರರ ಐದು ನುಡಿಗಳಲ್ಲಿರುವ ಪ್ರಭಾತ ಗೀತೆಯ ಮೊದಲ ನುಡಿಯನ್ನು ಮಾತ್ರ ನಾವು ರಾಷ್ಟ್ರಗೀತೆಯಾಗಿ ಸ್ವೀಕರಿಸಿದ್ದೇವೆ. ವಂದೇಮಾತರಂ ಗೀತೆಯ ವಿಷಯದಲ್ಲಿ ಬಳಕೆಯಾಗುವ ʼಕತ್ತರಿಸಲಾಯಿತುʼ ʼತುಂಡುಮಾಡಲಾಯಿತುʼ ಮುಂತಾದ ಕಿಡಿಮಾತುಗಳು ಆ ಗೀತೆಯ ವಿಷಯದಲ್ಲಿ ಏಕೆ ಬಳಕೆಯಾಗುವುದಿಲ್ಲ ಎಂಬುದನ್ನು ನಾವು ಆಲೋಚಿಸಬೇಕು.

ಈಗ ಈಗ ಎದ್ದಿರುವ ಅಥವಾ ಎಬ್ಬಿಸಲು ಉದ್ದೇಶಿಸಿರುವ ವಂದೇ ಮಾತರಂ ಗೀತೆ ಮತ್ತು ಜನಗಣಮನ ಗೀತೆಗಳ ವಿಷಯಕ್ಕೆ ಬರೋಣ. ಈಗ ಇವರು ರಾಷ್ಟ್ರಗೀತೆಯ ಬಗ್ಗೆ ಮಾಡುತ್ತಿರುವ ಆರೋಪವೇನೂ ಹೊಸದಲ್ಲ; ಇವರು ಇದನ್ನು ಹೊಸದಾಗಿ ಸಂಶೋಧನೆ ಮಾಡಿ ಹೆಕ್ಕಿ ತೆಗೆದದ್ದೂ ಅಲ್ಲ. ಅದರ ಬಗ್ಗೆ ಈಗ ಅನೇಕ ಸಲ ಚರ್ಚೆ ವಿಮರ್ಶೆ ನಡೆದಿವೆ. ಆದರೂ ದೇಶ ಅದನ್ನು ಒಪ್ಪಿಕೊಂಡಿದೆ. ಆದರೆ ಈ ದೇಶಭಕ್ತರಿಗೆ ಆ ಗೀತೆಯನ್ನು ಕಂಡರೆ ಏಕೋ ಇರುಸುಮುರುಸು. ಹೊಟ್ಟೆ ತೊಳಸಿದಂತೆ ಆಗುತ್ತದೆ. ಅದನ್ನು ಹೀಗೆ ಸಮಯ ಸಿಕ್ಕಾಗೆಲ್ಲ ಅವರು ಹೊರಹಾಕುತ್ತಲೇ ಇರುತ್ತಾರೆ. ಸರಿ ಜನಗಣಮನ ಬ್ರಿಟೀಷರ ಆಗಮನಕ್ಕೆ ಬರೆದ ಗೀತೆ ಎಂಬುದನ್ನು ವಾದಕ್ಕೆ ಒಪ್ಪಿಕೊಳ್ಳೋಣ. ಹಾಗಾದರೆ ವಂದೇ ಮಾತರಂ ಬ್ರಿಟೀಷರನ್ನು ವಿರೋಧಿಸಲಿಕ್ಕೆ ಬರೆದ ಗೀತೆಯೇ? ಆ ಬಗ್ಗೆ ವಿವಿರವಾದ ವಿಶ್ಲೇಷಣೆಯನ್ನು ಈ ಲೇಖನದಲ್ಲಿ ಮಾಡಲಾಗಿದೆ.

ʻವಂದೇಮಾತರಂʼ ಇರುವ ಆನಂದಮಠದ ಕಥಾವಸ್ತು..

ಭಾರತದ ಸ್ವಾತಂತ್ರ್ಯ  ಚಳವಳಿಯ ಸಂದರ್ಭದಲ್ಲಿ  `ವಂದೇ ಮಾತರಂಗೀತೆ ವಹಿಸಿದ ಪಾತ್ರ ಅತ್ಯಂತ ಮಹತ್ವದ್ದುಆಗ ಅದು ಕೇವಲ ಒಂದು ಪ್ರಾರ್ಥನಾ ಗೀತೆಯಾಗಿ ಬಳಕೆಯಾಗದೆ ಯುದ್ದೋತ್ಸಾಹ ತುಂಬುವ ಒಂದು ಕ್ರಾಂತಿ ಗೀತೆಯಾಗಿಯೂ ಕೆಲಸ ಮಾಡಿತುಅದರ ಮೊದಲ ಸಾಲು  `ವಂದೇ ಮಾತರಂ'  ಬ್ರಿಟೀಷರ ವಿರುದ್ದ ಕೂಗುವ ಒಂದು ಘೋಷಣೆಯೂ ಆಯಿತುಅದನ್ನು ಘೋಷಣೆಯಾಗಿ ಕೂಗಿದವರು ಬಂಧಿಗಳಾಗಿ ಜೈಲಿಗೆ ಹೋಗಬೇಕಾಯಿತುಬೂಟಿನ ಒದೆ ತಿನ್ನಬೇಕಾಯಿತು.

ಹೀಗೆ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ನಮ್ಮ ರಾಷ್ಟ್ರದ ರಾಷ್ಟ್ರಪ್ರೇಮಿಗಳನ್ನೆಲ್ಲ ಒಂದುಗೂಡಿಸುವ ಸೂತ್ರವಾಗಿಬ್ರಿಟೀಷರ ವಿರುದ್ಧ ಸಮರವನ್ನೆ ಸಾರಲು ಒಂದು ಅಸ್ತ್ರವಾಗಿ ಪರಿಣಾಮಕಾರಿಯಾಗಿ ಕೆಲಸಮಾಡಿದ  ಗೀತೆ ಆರಂಭದಲ್ಲಿ ಯಾಕಾಗಿ ಹುಟ್ಟಿಕೊಂಡಿತುಬ್ರಿಟೀಷರ ವಿರುದ್ಧ ದಂಗೆಯೇ ಅದರ ಗುರಿಯಾಗಿತ್ತೇ ಎಂಬುದನ್ನು ನಾವು ಅರಿಯಬೇಕಾದರೆ ಅದು ಮೊಟ್ಟಮೊದಲು ಕಾಣಿಸಿಕೊಂಡಿರುವ ಬಂಕಿಮಚAದ್ರ ಚಟರ್ಜಿ ಅವರ ಬಂಗಾಳಿ ಕಾದಂಬರಿ "ಆನಂದ ಮಠವನ್ನು ಓದಬೇಕಾಗುತ್ತದೆ.

`ಆನಂದ ಮಠಕಾದಂಬರಿಯ ಹೆಸರು ಅದರಲ್ಲಿರುವ  `ವಂದೇ ಮಾತರಂಗೀತೆಯಿಂದಾಗಿ ಭಾರತದ ಎಲ್ಲ ಭಾಷೆಯ ಓದುಗರಿಗೆ ಪರಿಚಯವಿರುವಂಥದ್ದುಬ್ರಿಟೀಷ್ ಸರ್ಕಾರಲ್ಲಿ ಜಿಲ್ಲಾ ಮೆಜಿಸ್ಟ್ರೇಟರ್‌ ಆಗಿ ನಂತರ ಜಿಲ್ಲಾ ಕಲೆಕ್ಟರ್ ಹುದ್ದೆಗೇರಿದ ಬಂಕಿಮಚಂದ್ರ ಚಟರ್ಜಿ  ಕಾದಂಬರಿಯನ್ನು ಬರೆದು ಪ್ರಕಟಿಸಿದ್ದು 1882ರಲ್ಲಿ ಕೃತಿಯನ್ನು ಬ್ರಿಟೀಷ್ ಸರ್ಕಾರದ ಒಬ್ಬ ಅಧಿಕಾರಿಯಾಗಿದ್ದಾಗಲೇ ಅವರು ಬರೆದರು ಎಂಬುದನ್ನೂ ಕಾದಂಬರಿಯನ್ನಾಗಲೀ ಅದರೊಳಗಿನ  ಗೀತೆಯನ್ನಾಗಲಿ ಅವರು ತಾವು ಉದ್ಯೋಗದಲ್ಲಿದ್ದ ಬ್ರಿಟೀಷ ಸರ್ಕಾರದ ವಿರೋಧಿ ಭಾವನೆಯಿಂದ ಬರೆದಿರಲು ಸಾಧ್ಯವಿತ್ತೇ ಎಂಬುದನ್ನು ನಾವು ವಿಶೇಷವಾಗಿ ಗಮನಿಸಬೇಕು.  1857ರಲ್ಲಿ ನಡೆದ `ಭಾರತದ ಪ್ರಥಮ ಸ್ವಾತಂತ್ರ್ಯ  ಸಂಗ್ರಾಮಎಂದು ಕರೆಯಲ್ಪಡುವ `ಸಿಪಾಯಿದಂಗೆ' ಹಿನ್ನಲೆಯಲ್ಲಿ ಪ್ರಕಟವಾದ  ಕಾದಂಬರಿ ಅಲ್ಲಿಂದ ಸುಮಾರು ನೂರು ವರ್ಷಗಳ ಹಿಂದೆ 1770  ದಶಕದಲ್ಲಿ ಬಂಗಾಳದಲ್ಲಿ ಉಂಟಾದ `ಸನ್ಯಾಸಿ ವಿದ್ರೋಹ' (Sanyasi Rebilionಘಟನೆಯನ್ನು ವಸ್ತುವಾಗಿ ಒಳಗೊಂಡಿದೆಸ್ವಷ್ಟವಾಗಿ ಐತಿಹಾಸಿಕರಾಜಕೀಯಅಥವಾ ಸಾಮಾಜಿಕ ಎಂದು ವಿಭಾಗಿಸಿ ಹೇಳಲಾಗದ, ಅವೆಲ್ಲವುಗಳ ಲಕ್ಷಣಗಳನ್ನು ಒಳಗೊಂಡಿರುವ ಒಂದು ಕೃತಿ  ಕಾದಂಬರಿ.

 "ಮಾತೃಭೂಮಿ ನಮ್ಮ ತಾಯಿ ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯ.  ಇದಕ್ಕಾಗಿ ನಮ್ಮ ಪ್ರಾಣತ್ಯಾಗಕ್ಕೂ ಸಿದ್ಧರಾಗಿ ನಾವು ಹೋರಾಟ ಮಾಡಬೇಕುಎಂಬ ಪ್ರಧಾನ ಚಿಂತನೆ ಪ್ರತಿಪಾದಿತವಾಗಿರುವ  ಕಾದಂಬರಿಯ ಕಥೆಯನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು:

  1770  ದಶಕದ ಆರಂಭಿಕ ವರ್ಷಗಳಲ್ಲಿ ಬಂಗಾಳದಲ್ಲಿ ಭೀಕರ ಬರಗಾಲ ಉಂಟಾಗುತ್ತದೆ.  ಹಸಿವಿನಿಂದ ಕಳ್ಳತನದರೋಡೆ ಮಿತಿಮೀರುತ್ತವೆಮನುಷ್ಯ ಮನುಷ್ಯನನ್ನೇ ತಿನ್ನುವ ಮಟ್ಟಕ್ಕೆ ಇದರ ಭೀಕರತೆ ಇರುತ್ತದೆಇಂತಹ ಬರಗಾಲಕ್ಕೆ ತುತ್ತಾದ ಪದಚಿಹ್ನ ಎಂಬ ಗ್ರಾಮದ ಒಂದು ಕುಟುಂಬದ ತರುಣ ದಂಪತಿಗಳಾದ ಮಹೇಂದ್ರ ಮತ್ತು ಕಲ್ಯಾಣಿ ತಮ್ಮ ಚಿಕ್ಕ ಮಗುವಿನೊಂದಿಗೆ ಹೊಟ್ಟೆ ತುಂಬಿಕೊಳ್ಳುವುದಕ್ಕಾಗಿ ಊರು ಬಿಟ್ಟು ದೇಶಾಂತರ ಹೊರಡುತ್ತಾರೆಮಾರ್ಗಮಧ್ಯದ ಒಂದು ಊರಿನ ಒಂದು ಮನೆಯಲ್ಲಿ ಹೆಂಡತಿ ಮತ್ತು ಮಗುವನ್ನು ಬಿಟ್ಟು ಕಥಾನಾಯಕ ಮಹೇಂದ್ರ ಆಹಾರ ಹುಡುಕಿಕೊಂಡು ಬರಲು ಹೊರಗೆ ಹೋಗುತ್ತಾನೆ.  ಆದರೆ ಅವನು ಮರಳಿ ಬರುವ ವೇಳೆಗಾಗಲೇ ಅವನ ಹೆಂಡತಿ ಮತ್ತು ಮಗುವನ್ನು ಕಳ್ಳರು ಅಪಹರಿಸಿರುತ್ತಾರೆ ಹೆಂಡತಿ ಮತ್ತು ಮಗುವನ್ನು ಕಳೆದುಕೊಂಡ ಮಹೇಂದ್ರ ಅವರನ್ನು ಹುಡುಕುತ್ತಾ ಹೊರಟಾಗ ಮಾರ್ಗದಲ್ಲಿ ಒಬ್ಬ ಸನ್ಯಾಸಿಯ ಕೈಗೆ ಸಿಕ್ಕಿಬೀಳುತ್ತಾನೆ ಸನ್ಯಾಸಿ ಕಳ್ಳನಂತೆ ಗೋಚರಿಸಿದಾಗ ಮಹೇಂದ್ರ ಅವನಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾನೆ.  ಆಗ  ಸನ್ಯಾಸಿ ತಾನು ಯಾರು ತನ್ನ ಕೆಲಸವೇನು ಎಂಬುದನ್ನು ಪರಿಚಯ ಮಾಡಿಕೊಡುವ ಮೊದಲು ವಂದೇ ಮಾತರಂ ಗೀತೆಯ ಮೊದಲ ಸಾಲುಗಳನ್ನು ಹೇಳುತ್ತಾನೆ. (ಕಾದಂಬರಿಯಲ್ಲಿ ನಂತರ ಉಳಿದ ಸಾಲುಗಳು ಬರುತ್ತವೆ).   ಸನ್ಯಾಸಿಯಿಂದ ಅವರ ಗುಂಪಿನ ಚಟುವಟಿಕೆಗಳ ಪರಿಚಯ  ಮಹೇಂದ್ರನಿಗೆ ಆಗುತ್ತದೆ.

ಕಾಡಿನ ಮಧ್ಯೆ "ಆನಂದ ಮಠಎಂಬ ಒಂದು ಮಠವನ್ನು ಸ್ಥಾಪಿಸಿಕೊಂಡಿರುವ  ಎಲ್ಲ

ಸನ್ಯಾಸಿಗಳಿಗೆಲ್ಲ ನಾಯಕ ಸತ್ಯಾನಂದ ಠಾಕೂರ ಸತ್ಯಾನಂದ ಠಾಕೂರನ ನೇತೃತ್ವದಲ್ಲಿ ಸನ್ಯಾಸಿಗಳು ತಮ್ಮ ಜೀವನ ನಿರ್ವಹಣೆಗಾಗಿ ರಾಜನಿಗೆ ಶುಲ್ಕವಾಗಿ ರೈತರಿಂದ ಹೋಗುವ ದವಸಧಾನ್ಯಗಳ ಗಾಡಿಗಳನ್ನು ಮಾರ್ಗಮಧ್ಯ ಸಶಸ್ತ್ರಧಾರಿಗಳಾಗಿ ತಡೆದು ರಾಜಸೇವಕರನ್ನು ಹೊಡೆದು ಕೊಂದು ಲೂಟಿ ಮಾಡುತ್ತಿರುತ್ತಾರೆಆಗ ಅಲ್ಲಿದ್ದ ಮುಸ್ಲಿಂ ಅಧಿಪತ್ಯವನ್ನು ಹೇಗಾದರೂ ಮಾಡಿ ಕೊನೆಗಾಣಿಸಿ ಹಿಂದೂ ಅಧಿಪತ್ಯವನ್ನು ಸ್ಥಾಪಿಸುವುದಕ್ಕಾಗಿ ಇವರೆಲ್ಲರೂ ಹಗಲು ಇರುಳೆನ್ನದೇ ಹೋರಾಡುತ್ತಿರುತ್ತಾರೆ. (ಆಗ  ಪ್ರದೇಶವನ್ನು ಬಂಗಾಳದ ನವಾಬ ಸಿರಾಜುದ್ದೌಲ ಆಳುತ್ತಿರುತ್ತಾನೆಇದನ್ನೊಂದು ಮಹಾನ್ ರಾಷ್ಟ್ರಭಕ್ತಿಯ ಕಾರ್ಯವೆಂದು ಅವರು ತಿಳಿದಿರುತ್ತಾರೆ.

ಇವರ ಗುಂಪನ್ನು ಸೇರಿದ ಮಹೇಂದ್ರ ಅವರ ಪ್ರಭಾವಕ್ಕೆ ಒಳಗಾಗಿಹೆಂಡತಿ ಮಕ್ಕಳ ಮುಖವನ್ನು ನೋಡುವದೂ ನಿಷಿದ್ಧವೆಂಬ ಅವರ ವೃತಕ್ಕೂ ಒಪ್ಪಿಕೊಂಡು ಗುಂಪಿನಲ್ಲಿ ಸೇರಿಕೊಂಡು ಅವರ ಎಲ್ಲ ಕೊಲೆದರೋಡೆ ಕಾರ್ಯಗಳಲ್ಲಿ ಭಾಗಿಯಾಗಿ ಅನೇಕ ವಿದ್ರೋಹದ ಕಾರ್ಯಗಳನ್ನು ಎಸಗುತ್ತಾನೆಕೊನೆಗೆ ಅಲ್ಲಿದ್ದ ಮುಸ್ಲಿಂ ಅಧಿಪತ್ಯವನ್ನು ಪತನವಾಗುತ್ತದೆಆದರೆ ಹಿಂದೂ ಅಧಿಪತ್ಯ ಅಥವಾ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದಿಲ್ಲಬದಲಾಗಿ ಬ್ರಿಟಿಷ್ ಅಧಿಪತ್ಯ ಸ್ಥಾಪನೆಯಾಗಿಬಿಡುತ್ತದೆ!  ಹಿಂದೂ ಅಧಿಪತ್ಯ ಸ್ಥಾಪನೆಯಾಗದಿದ್ದರೂ ಪರವಾಗಿಲ್ಲ ಮುಸ್ಲಿಂ ಅಧಿಪತ್ಯ ಪತನವಾಯಿತಲ್ಲ ಎಂಬ ಸಮಾಧಾನದೊಂದಿಗೆ ಮತ್ತು ಬ್ರಿಟೀಷ್ ಆಡಳಿತ ಹಿಂದೂ ರಾಷ್ಟ ನಿರ್ಮಾಣಕ್ಕೆ ಬುನಾದಿ ಹಾಕಿಕೊಡುತ್ತದೆ ಎಂಬ ಆಶಯದೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

 ʻಆನಂದಮಠʼ ಹೇಳುವ ರಾಷ್ಟ್ರ ಯಾವುದು?

ʻಆನಂದ ಮಠʼವನ್ನು ಕೇವಲ ಒಂದು ಸಾಹಿತ್ಯ ಕೃತಿಯಾಗಿ ನೋಡುವುದಾದರೆ ಮತ್ತು ಅದರಲ್ಲಿ ಬರುವ ʻವಂದೇ ಮಾತರಂʼ ಗೀತೆಯನ್ನು ಕೇವಲ ಸಾಹಿತ್ಯ ಕೃತಿಯೊಂದರ ಸಾಂದರ್ಭಿಕ ಗೀತೆಯಾಗಿ ನೋಡುವುದಾದರೆ ಅದರಲ್ಲಿ ಬರುವ ಅನೇಕ ಆಕ್ಷೇಪಾರ್ಹ ಅಂಶಗಳು ಗಂಭೀರವೆನಿಸದೇ ಕ್ಷಮಾರ್ಹವಾದವುಗಳೆನಿಸುತ್ತವೆಯಾಕೆಂದರೆ  ಕಾದಂಬರಿ ಕೂಡ ಸಾಮಾನ್ಯವಾಗಿ ಇತರ ಸಾಹಿತ್ಯ ಕೃತಿಗಳಂತೆ ಕೆಲವು ಬೇಕುಗಳನ್ನು ಒಳಗೊಂಡಿಲ್ಲ ಮತ್ತು ಬೇಡಗಳನ್ನು ಒಳಗೊಂಡಿದೆ.  ಆದರೆ  ಗೀತೆಯೂ ಸೇರಿದಂತೆ  ಕಾದಂಬರಿಯನ್ನು ಒಂದು ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸುವ ಕೃತಿಯೆಂದು ವಿಶೇಷ ಸಾರ್ವಜನಿಕ ಗೌರವಕ್ಕೆ ಅರ್ಹವಾದದ್ದು ಎಂದು ಪರಿಗಣಿಸುವಾಗ ಸಾಕಷ್ಟು ಸಕಾರಣಯುಕ್ತ ಆಕ್ಷೇಪಗಳು ತಲೆಯೆತ್ತುತ್ತವೆ.  ಯಾವುದೋ ಒಂದು ಸಂದರ್ಭದಲ್ಲಿ ಯಾವುದೋ ಉದ್ದೇಶಕ್ಕಾಗಿ ಬರೆದ ಗೀತೆಯೊಂದನ್ನು ಇನ್ಯಾವುದೋ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನೋ ನಾಡಗೀತೆಯನ್ನೋ ಮಾಡಲು ಹೊರಟಾಗ ಏನೆಲ್ಲ ಸಮಸ್ಯೆಗಳು ತಲೆದೋರುತ್ತವೆ ಎಂಬುದನ್ನು ಕೆಲವು ವರ್ಷಗಳ ಹಿಂದೆ ನಡೆದ ಕುವೆಂಪು ಅವರ ಬರೆದ ಕನ್ನಡ ನಾಡಗೀತೆಯ ವಿವಾದ ತೋರಿಸಿಕೊಟ್ಟಿದೆ. 

 ಭಾರತದಲ್ಲಿ ರವೀಂದ್ರನಾಥ ಠಾಕೂರರ  "ಜನಗಣಮನರಾಷ್ಟ್ರಗೀತೆ ಆಗುವುದಕ್ಕಿಂತ ಮೊದಲು  ʻವಂದೇ ಮಾತರಂʼ ಗೀತೆ ಅದರ ಸ್ಥಾನಮಾನವನ್ನೇ ಹೊಂದಿದ್ದು ಸರಿಯಷ್ಠೆ.   ನಂತರವೂ  ಗೀತೆಯ ಬಗೆಗಿನ ಗೌರವ ಅಷ್ಟೇನೂ ಕಡಿಮೆ ಆಗಲಿಲ್ಲ.  ಈಗಲೂ ಇದು ರಾಷ್ಟ್ರಗೀತೆಯ ನಂತರದ ಅತ್ಯಂತ ಗೌರವದ ಸ್ಥಾನಮಾನವನ್ನೇ ಹೊಂದಿದೆ.  (ರಾಷ್ಟ್ರೀಯ ಧ್ವಜಾರೋಹಣ ಸಂದರ್ಭಗಳಲ್ಲಿ ಆಚರಿಸಲಾಗುವ ವಿಧಿ ವಿಧಾನಗಳಲ್ಲಿ  ವಂದೇ ಮಾತರಂ ಗೀತೆಯನ್ನು ಹೇಳುವುದು ಕೂಡ ಸೇರಿದೆ)

ಆದರೆ ʻವಂದೇ ಮಾತರಂʼ ಗೀತೆ ಹಾಗೂ ʻಆನಂದ ಮಠʼ ಕಾದಂಬರಿ ಪ್ರತಿಪಾದಿಸುವ ಮೌಲ್ಯಗಳಾವುವು ಮೌಲ್ಯಗಳು ಭಾರತ ಸಂವಿಧಾನದ ಪ್ರಧಾನ ಆಶಯಗಳಿಗೆ ಪೂರಕವಾಗಿವೆಯೇ ಅಥವಾ ಮಾರಕವಾಗಿವೆಯೇ ಎಂಬುದು ತುಂಬಾ ಅವಶ್ಯವಾಗಿ ಗಮನಿಸಬೇಕಾದ ಅಂಶ.   ಅಂಶದ ಪರಿಗಣನೆಯಿಂದಲೇ ʻವಂದೇ ಮಾತರಂʼ ಗೀತೆ  ಜಾತ್ಯತೀತಧರ್ಮನಿರಪೇಕ್ಷಪ್ರಜಾಸತ್ತಾತ್ಮಕ ಸಂವಿಧಾನವನ್ನೊಳಗೊಂಡ ಬಹುಸಂಸ್ಕೃತಿಯ ನಾಡಾದ ಭಾರತದಲ್ಲಿ  ವಿಶೇಷ ಗೌರವಕ್ಕೆ ಪಾತ್ರವಾಗುವ ಅರ್ಹತೆ ಪಡೆದಿದೆಯೋ ಇಲ್ಲವೋ ಎಂಬುದು ನಿರ್ಣಯವಾಗುತ್ತದೆ.   ಹಿನ್ನಲೆಯಲ್ಲಿ ವಂದೇ ಮಾತರಂ ಆಗಾಗ ರಣಕಹಳೆಯಂತೆ ಮೊಳಗುವ ಆನಂದ ಮಠ ಕಾದಂಬರಿಯ ಮೌಲ್ಯಗಳನ್ನು ಗಮನಿಸೋಣ.

 ಮೊದಲೇ ಉಲ್ಲೇಖಿಸಿದಂತೆ ʻರಾಷ್ಟ್ರದ ರಕ್ಷಣೆ ನಮ್ಮ ಹೊಣೆ;  ಅದರ ರಕ್ಷಣೆಗಾಗಿ ಪ್ರಾಣಾರ್ಪಣೆಗೂ ಸಿದ್ಧರಾಗಿ ಹೋರಾಟ ಮಾಡಬೇಕುʼ ಎಂಬುದನ್ನುಏರುದನಿಯಲ್ಲಿ ಸಾರುವ  ಕೃತಿಯಲ್ಲಿ ಪ್ರಸ್ತಾಪವಾಗಿರುವ ʻನಮ್ಮ ರಾಷ್ಟ್ರʼ ಯಾವುದು?  ಈಗ ನಾವು ಒಪ್ಪಿಕೊಂಡಿರುವ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕುಚ್ದಿಂದ ಕೋಹಿಮಾದವರೆಗೆ ಹಬ್ಬಿ ಹರಡಿರುವ ವಿಶಾಲ ಭಾರತವೆ?  ಅಥವಾ ಈಗಿನ ಪಾಕಿಸ್ತಾನಬಾಂಗ್ಲಾದೇಶಗಳನ್ನೂ ಒಳಗೊಂಡಿದ್ದ ಆಖಂಡ ಭಾರತವೆ? (ಹೀಗೇ ʻಅಖಂಡ ಭಾರತʼ ಎಂಬುದು ವಾಸ್ತವವಾಗಿ ಇರಲಿಲ್ಲಅಷ್ಟೇ ಏಕೆ ಬ್ರಿಟೀಷರು ಭಾರತಕ್ಕೆ ಬರುವವರೆಗೆ ಈಗಿನ ರಾಷ್ಟ್ರದ ಕಲ್ಪನೆಯೇ ನಮಗಿರಲಿಲ್ಲ ಎಂಬುದು ಬೇರೆ ಚರ್ಚೆಯ ವಿಷಯ). ಇವು ಯಾವುವೂ ಅಲ್ಲಕೃತಿಯ ರಚನಾಕಾರರಾದ ಬಂಕಿಮಚಂದ್ರರ ಪ್ರಕಾರ ಕಥೆಯ ವಿನ್ಯಾಸದಂತೆ ಇಲ್ಲಿ ರಾಷ್ಟ್ರ ಎಂದರೆ  ಬಂಗಾಳದ ನವಾಬ ಸಿರಾಜುದ್ಧೌಲನ ಆಡಳಿತಕ್ಕೆ ಒಳಪಟ್ಟಿದ್ದ ಒಂದಿಷ್ಟು ಹಳ್ಳಿಗಳನ್ನು ಒಳಗೊಂಡ ಒಂದು ಚಿಕ್ಕಪ್ರದೇಶ ಮಾತ್ರ!   ಸ್ವತಃ ಲೇಖಕರೇ,  ಮಗಧಕಾಶಿಕಾಶ್ಮೀರ ಎಷ್ಟೋ ದೇಶಗಳು ಇವೆ.  ಅವುಗಳಲ್ಲೆಲ್ಲ ಬಂಗಾಳ ದೇಶದ ಸ್ಥಿತಿಯೇ ಚಿಂತಾಜನಕ ಎನ್ನುತ್ತಾರೆ.  (ಏಕೆಂದರೆ ಅಲ್ಲಿ ಮುಸ್ಲಿಂ ಆಳ್ವಿಕೆ ಇದೆ ಎಂಬುದು ಅವರು ಕೊಡುವ ಸಮಜಾಯಿಸಿ).  ಹೀಗೆ  ಕೃತಿ ಅನೇಕರು ತಿಳಿದಿರುವಂತೆ ಈಗಿನ ನಮ್ಮ ಭಾರತದ ರಾಷ್ಟ್ರದ ಕಲ್ಪನೆಯನ್ನು ಖಂಡಿತಾ ಕೊಡುವುದಿಲ್ಲರಾಷ್ಟ್ರದ ಕಲ್ಪನೆಯನ್ನೇ ಕೊಡುವುದಿಲ್ಲ ಅಂದ ಮೇಲೆ ರಾಷ್ಟ್ರೀಯ ಭಾವನೆಯನ್ನು ಪ್ರತಿಪಾದಿಸುತ್ತದೆ ಎನ್ನುವುದರಲ್ಲಿ  ಯಾವ ಅರ್ಥವೂ ಇಲ್ಲ.

ದ್ವೇಷದಿಂದ ದೇಶಕಟ್ಟುವ ಕೆಲಸ:

ʻಆನಂದಮಠʼ ಪ್ರತಿಪಾದಿಸುವ ಇನ್ನೊಂದು ಮುಖ್ಯ ಅಂಶ ಉಗ್ರ ಹಿಂದೂವಾದಅಲ್ಲಿ ʻರಾಷ್ಟ್ರʼ ಎಂದರೆ ಅದು ʻಹಿಂದೂ ರಾಷ್ಟ್ರʼರಾಷ್ಟ್ರಭಕ್ತಿ ಎಂದರೆ ಧರ್ಮಭಕ್ತಿರಾಷ್ಟ್ರಕ್ಕೂ ಧರ್ಮಕ್ಕೂ ವ್ಯತ್ಯಾಸವಿದೆ ಎಂದು ಇದು ಪರಿಗಣಿಸುವುದಿಲ್ಲಕೃತಿಯಲ್ಲಿ ʻತಾಯಿʼ ಎಂದರೆ ಹತ್ತು ಕೈಗಳ ಹಿಂದೂ ದೇವತೆ ದುರ್ಗೆ ದುರ್ಗೆಯ ಆರಾಧಕರು ಮಾತ್ರ ಅಲ್ಲಿ ದೇಶಭಕ್ತರುಉಳಿದವರು ದೇಶದ್ರೋಹಿಗಳುಇದು  ಕೃತಿಯ ಬಹುಮುಖ್ಯ ತಾತ್ವಿಕತೆಕೃತಿಯಲ್ಲಿ  ಸನ್ಯಾಸಿಗಳು ರಾಜನಿಗೆ ಹೋಗಬೇಕಾದ ಸಂಪತ್ತನ್ನು ಮಾತ್ರ ಲೂಟಿ ಮಾಡುತ್ತಿದ್ದರೆ ಅದು ಪ್ರಭುತ್ವದ ಮೇಲಿನ ದ್ವೇಷ ಎಂದು ಪರಿಗಣಿಸಲು ಸಾಧ್ಯವಿತ್ತುಆದರೆ  ಸನ್ಯಾಸಿಗಳು ವಂದೇ ಮಾತರಂ ಗೀತೆಯನ್ನು ಹೇಳುತ್ತಾ ಅಲ್ಲಿನ ಅಮಾಯಕ ಅಸಹಾಯಕ ಅನ್ಯ ಕೋಮಿನ ಮನೆಗಳಿಗೆ ಬೆಂಕಿಹಚ್ಚುವ ಅತ್ಯಂತ ಅಮಾನವೀಯ ಕೆಲಸವನ್ನು ಮಾಡುತ್ತಾರೆ ಮಾತ್ರವಲ್ಲ ಅದನ್ನು ದೇಶಕಟ್ಟುವ ಕೆಲಸವೆಂದೇ ಅವರು ಭಾವಿಸುತ್ತಾರೆಕಾದಂಬರಿಯಲ್ಲಿ ನಿರೂಪಕ (ಲೇಖಕ) ಕೊಡುವ ಈ ವಿವರಣೆಗಳನ್ನು ನೋಡಿ:

“ಸಂತಾನ ಸೇನಾಪತಿಗಳು ಗ್ರಾಮಗ್ರಾಮಕ್ಕೂ ತಮ್ಮ ಅನುಚರರನ್ನು ಕಳುಹಿಸಲಾರಂಭಿಸಿದರು. ಅನುಚರರು ಗ್ರಾಮಗಳಿಗೆ ಹೋಗಿ ಎಲ್ಲಿ ಹಿಂದೂ ಜನರು ಕಂಡರೂ ಅವರನ್ನು ಕುರಿತು, ವಿಷ್ಣುಪೂಜೆಯನ್ನು ಮಾಡುವಿರಾ? ಎಂದು ಕೇಳುವರು. ಹೀಗೆ ಕೇಳುತ್ತಾ ಕೇಳುತ್ತಾ ಇಪ್ಪತ್ತು ಮೂವತ್ತು ಜನರು ಗುಂಪುಗೂಡಿಕೊಂಡು ಮುಸಲಮಾನರ ಗ್ರಾಮಗಳ ಮೇಲೆ ಬಿದ್ದು ಅವರ ಮನೆಗೆ ಬೆಂಕಿಹಾಕುವರು. ಮುಸಲಮಾನರು ಪ್ರಾಣರಕ್ಷಣೆಯಲ್ಲಿ ವ್ಯಸ್ತರಾಗಿರುವಾಗ ಅವರ ಸರ್ವಸ್ವವನ್ನೂ ಸಂತಾನರು ಹೊತ್ತುಕೊಂಡು ಹೋಗಿ ವಿಷ್ಣುಭಕ್ತರಿಗೆ ಹಂಚಿಕೊಡುವರು.”

“ಸಾವಿರಾರು ಮಂದಿ ಬಂದು ಭವಾನಂದ ಜೀವಾನಂದರ ಪಾದಪದ್ಮಗಳಿಗೆರಳಿ ದಳಬದ್ಧರಾಗಿ ದಿಕ್ಕುದಿಕ್ಕಿನಲ್ಲಿಯೂ ಮುಸಲಮಾನರನ್ನು ನಾಶಮಾಡಲು ಹೊರಟರು. ಎಲ್ಲಿ ಸರಕಾರದ ನೌಕರರು ಕಂಡರೂ ಹಿಡಿದು ಹೊಡೆಯುವರು. ಕೆಲವರನ್ನು ವಧೆಮಾಡುವರು. ಸರ್ಕಾರದ ಹಣ ಎಲ್ಲಿಯೇ ಕಂಡರೂ ಹೊಡೆದು ಬಡಿದು ಮನಗೆ ತಂದು ಹಾಕಿಕೊಳ್ಳುವರು. ಮುಸಲಮಾನರ ಗ್ರಾಮ ಸಿಕ್ಕಿದರೆ ಸುಟ್ಟು ಬೂದಿ ಮಾಡುವರು.” ಹೀಗೆ ಒಂದು ಕೋಮಿನ ಜನರ ಮನೆಗಳನ್ನು ಸುಡಲು ಕೃತಿಯಲ್ಲಿ ಸ್ಪೂರ್ತಿಗೀತೆಯಾಗಿ ಬಳಕೆಯಾದ  ನಮ್ಮ ವಂದೇ ಮಾತರಂ ದ್ವೇಷದಿಂದ ದೇಶಕಟ್ಟುವುದನ್ನು ಪ್ರತಿಪಾದಿಸುತ್ತದೆ.

ಸ್ವಾತಂತ್ರ್ಯ ಹೋರಾಟ ಕಾಲಘಟ್ಟದಲ್ಲಿ:

ಹೀಗೆ ಮೂಲದಲ್ಲಿ ಈಗ ನಾವು ಅಂದುಕೊಂಡಿರುವಂತಹ ರಾಷ್ಟ್ರೀಯ ಭಾವನೆಯನ್ನು ಎಳ್ಳಷ್ಟೂ ಪ್ರತಿಪಾದಿಸದಿರುವ  ಗೀತೆ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಕಂಡುಕೊಂಡ ತಿರುವು ಮಾತ್ರ ಅತ್ಯಂತ ಆಶ್ಚರ್ಯಕರವಾದದ್ದುಯಾವ ಗೀತೆಯ ಆರಂಭಿಕ ಸಾಲುಗಳು ಪದೇ ಪದೇ ಪುನರುಕ್ತಿಯಾಗುತ್ತವೆಯೋ ಅಂತಹ ಆನಂದಮಠ ಕಾದಂಬರಿ ವಸಾಹತು ಪೂರ್ವದಲ್ಲಿ ಪ್ರತಿಪಾದಿಸಿದ ಉಗ್ರ ಮುಸ್ಲಿಂ ವಿರೋಧಿ ನೆಲೆಯಿಂದ ಅದು ಮುಸ್ಲಿಂ ಸ್ನೇಹಿ ನೆಲೆಗೆ ಹಾಗೇ ಬ್ರಿಟೀಷ್ ಸ್ನೇಹಿ ನೆಲೆಯಿಂದ ಬ್ರಿಟೀಷ್ ವಿರೋಧಿ ನೆಲೆಗೆ ಬಂದುನಿಂತಿತುವಸಾಹತುಪೂರ್ವದಲ್ಲಿ ಬ್ರಿಟೀಷ್ ಆಡಳಿತವನ್ನು ಸ್ವಾಗತಿಸಿದ ಇದೇ ಗೀತೆ  ಕಾಲಘಟ್ಟದಲ್ಲಿ ಅದರ ವಿರೋಧಿ ನೆಲೆಗೆ ಬಂದು ಅದೇ ಬ್ರಿಟೀಷರನ್ನು ಓಡಿಸುವ ರಣಮಂತ್ರವಾಗಿಬಿಟ್ಟಿತುಇಡೀ ಭಾರತೀಯರ ಆತ್ಮಸ್ಥೈರ್ಯವನ್ನು ಉಕ್ಕಿಸುವ ಒಂದು ಧ್ಯೇಯಮಂತ್ರವಾಯಿತುಸಾಹಿತ್ಯ ರಚನೆಯೊಂದರ ಶಕ್ತಿ ಅಂದರೆ ಇದೇ ಇರಬೇಕು!

ಇದರ ಜೊತೆ ರಾಷ್ಟ್ರದ ಪರಿಕಲ್ಪನೆಯೂ ವಿಸ್ತಾರವಾಗಿಬಿಟ್ಟಿತುವಸಾಹತು ಪೂರ್ವದಲ್ಲಿ ರಾಷ್ಟ್ರ ಅಂದರೆ ಬಂಗಾಳದ ನವಾಬನ ಆಡಳಿತದ ಒಂದು ಚಿಕ್ಕ ಪ್ರಾಂತ್ಯ ವಾಗಿದ್ದ  ಗೀತೆಗೆ ಈಗ ರಾಷ್ಟ ಅಂದರೆ ಈಗಿನ ಭಾರತಪಾಕಿಸ್ತಾನಬಾಂಗ್ಲಾದೇಶ ಒಳಗೊಂಡ ಒಂದು ವಿಶಾಲ ಭೂಖಂಡ ಎಂಬ ಅರ್ಥ ಹೊಮ್ಮತೊಡಗಿತುಬ್ರಿಟೀಷರ ಆಡಳಿತದ ವಿರುದ್ಧ ಮೊಳಗತೊಡಗಿದ ಒಕ್ಕೊರಲಿನ  ʻವಂದೇ ಮಾತರಂʼ ಒಂದು ರಾಷ್ಟ್ರೀಯ ಕೂಗಾಗಿ (National Cryಪರಿಣಮಿಸತೊಡಗಿತು ನಡುವೆಯೇ  ಗೀತೆಯಲ್ಲಿ ಪ್ರತಿಪಾದಿತವಾದ ಉಗ್ರ ಹಿಂದುತ್ವದ ಅಂಶಗಳು ಅನೇಕ ಧರ್ಮ ಜಾತಿಗಳಿಗೆ ಸೇರಿದ ಜನರನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಒಗ್ಗೂಡಿಸುವಲ್ಲಿ ಒಂದು ವಿಘ್ನವಾಗಿ ಕಾಡತೊಡಗಿದವು ಹಾಗಾಗಿಯೇ 1937ರ ಕಾಂಗ್ರೇಸ್ ಅಧಿವೇಶನ  ಗೀತೆಯ ಮೊದಲ ಎರಡು ನುಡಿಗಳನ್ನು ಮಾತ್ರ `ರಾಷ್ಟ್ರೀಯ ಗೀತೆ' (National Song)  ಆಗಿ ಸ್ವೀಕರಿಸಿತು ಎರಡು ನುಡಿಗಳು ಯಾವುದೇ ಧರ್ಮ ಜಾತಿಗಳ ಬಗ್ಗೆ ಮಾತಾಡದೆ ಕೇವಲ ಮಾತೃಭೂಮಿಯ ಸೌಂದರ್ಯದ ಬಗ್ಗೆ ಇರುವುದು  ಆಯ್ಕೆಯಲ್ಲಿ ಪರಿಗಣಿತವಾದ ಬಹುಮುಖ್ಯವಾದ ಅಂಶ!

ರಾಷ್ಟ್ರಗೀತೆಯಾಗುವಲ್ಲಿ ಸೋತದ್ದೇಕೆ?:

1937  ಕಾಂಗ್ರೇಸ್ ಅಧಿವೇಶನದ ಸಂದರ್ಭದಲ್ಲಿಯೇ  ಗೀತೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿತುಅನೇಕ ಹಿಂದುತ್ವವಾದಿ ರಾಷ್ಟ್ರನಾಯಕರು  ʻವಂದೇ ಮಾತರಂʼನ ಪೂರ್ಣಪಾಠ ರಾಷ್ಟ್ರಗೀತೆಯಾಬೇಕೆಂಬ ಅಭಿಲಾಷೆಯುಳ್ಳವರಾಗಿದ್ದರುಆದರೆ ಅಷ್ಟರೊಳಗೆ  ʻಗೀತೆಯಲ್ಲಿರುವುದು ರಾಷ್ಟ್ರಭಕ್ತಿಯಲ್ಲ; ಬದಲಾಗಿ ಒಂದು ಧರ್ಮಭಕ್ತಿʼ ಎಂಬ ತಿಳಿವಳಿಕೆ ಸಾಕಷ್ಟು ಜನರಿಗೆ ಉಂಟಾಯಿತುಸ್ವಾತಂತ್ರ್ಯ ಹೋರಾಟ ಎನ್ನುವುದು ಒಂದು ಧರ್ಮದವರು ಮಾಡಬೇಕಾದ ಹೋರಾಟವಲ್ಲ ಮತ್ತು ರಾಷ್ಟ್ರ ಎನ್ನುವುದು ಸ್ವಾತಂತ್ರ್ಯ  ಸಿಕ್ಕರೆ ಒಂದು ಧರ್ಮದವರು ಮಾತ್ರ ಇರಬೇಕಾದ ಸ್ಥಳವಲ್ಲ ಎಂಬ ಚರ್ಚೆ ಮುನ್ನೆಲೆಗೆ ಬಂದದ್ದು  ಗೀತೆ ರಾಷ್ಟ್ರಗೀತೆ ಆಗುವಲ್ಲಿ ಸಾಕಷ್ಟು ಹಿನ್ನಡೆಯುಂಟಾಯಿತುರವೀಂದ್ರನಾಥ ಠಾಕೂರ ಅಂತಹ ಬಹುದೊಡ್ಡ ಸಾಂಸ್ಕೃತಿಕ ನಾಯಕರು  ಗೀತೆ ರಾಷ್ಟ್ರಗೀತೆಯಾಗುವ ಪ್ರಸ್ತಾಪವನ್ನು ತಿರಸ್ಕರಿಸಿದಾಗ ಸಮಸ್ಯೆ ಮತ್ತಿಷ್ಟು ಸಂಕೀರ್ಣವಾಯಿತು ಗೀತೆಯನ್ನು ಒಂದು ಸಾಹಿತ್ಯ ರಚನೆಯಾಗಿ ಬಹುವಾಗಿ ಮೆಚ್ಚಿಕೊಂಡಿದ್ದ ಠಾಕೂರರು `ಭಾರತದ ಎಲ್ಲ ಜನಸಮುದಾಯವನ್ನು ಇದು ಪ್ರತಿನಿಧಿಸುವುದಿಲ್ಲಎಂಬ ಕಾರಣದಿಂದ  ಪ್ರಸ್ತಾಪವನ್ನು ತಿರಸ್ಕರಿಸುತ್ತಾರೆ.  ಕಾಂಗ್ರೆಸ್ ಇದರ ಮೊದಲ ಎರಡು ನುಡಿಗಳನ್ನು ಮಾತ್ರ ಆಯ್ದುಕೊಂಡು ಉಳಿದವನ್ನು ಬಿಟ್ಟ ವರ್ಷವೇ ಅಂದರೆ ೧೯೩೭ರಲ್ಲಿಯೇ ಅವರು ಸುಭಾಸ್ಚಂದ್ರ ಭೋಸ್ ಅವರಿಗೆ ಬರೆದ ಪತ್ರದಲ್ಲಿ  ಗೀತೆಯನ್ನು ಕುರಿತು ಹೇಳುವ ಮಾತು ಹೀಗಿದೆ:

"The core of Vande Mataram is a hymn to goddess Durga: this is so plain that there can be no debate
about it. Of course Bankimchandra does show Durga to be inseparably united with Bengal in the end, but no Mussulman [Muslim] can be expected patriotically to worship the ten-handed deity as 'Swadesh' [the nation]. 
 

ಮುಂದೆ 1950ರಲ್ಲಿ ಜನಗಣಮನ ರಾಷ್ಟçಗೀತೆಯಾಗಿ (National Anthem)  ಆಯ್ಕೆಯಾದ ಸಭೆಯಲ್ಲಿ  ಗೀತೆಯನ್ನು `ರಾಷ್ಟ್ರಗೀತೆಗೆ ಸಮಾನವಾದ ಗೌರವದ' `ರಾಷ್ಟ್ರೀಯ ಗೀತೆ' ಯಾಗಿ (National Song ʻಮೊಟಕುಗೊಳಿಸಲ್ಪಟ್ಟ ವಂದೇ ಮಾತರಂʼ ಆಯ್ಕೆಯಾಗಿದ್ದು ಕೂಡ ಅದರಲ್ಲಿನ ತಾತ್ವಿಕ ಅಂಶಗಳಿಂದಲ್ಲಬದಲಾಗಿ ಅದು ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ವಹಿಸಿದ ಪಾತ್ರ ಮತ್ತು ಉಂಟುಮಾಡಿದ ಐತಿಹಾಸಿಕ ಪ್ರಭಾವಗಳಿಂದ!  ವಿಷಯದಲ್ಲಿ ಅಂತಿಮ ನಿರ್ಣಯವಾಗಿ ಸ್ವೀಕರಿಸಲ್ಪಟ್ಟ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾಬಾಬು ರಾಜೇಂದ್ರ ಪ್ರಸಾದರ  "Vande Mataram, which has played a historic part in the struggle for Indian freedom, shall be honoured equally with Jana Gana Mana and shall have equal status with it"ಎಂಬ ಅಧ್ಯಕ್ಷೀಯ ನುಡಿಯಲ್ಲಿನ ಮಾತು ಇದನ್ನು ಸ್ಪಷ್ಟಪಡಿಸುತ್ತದೆ.

ಮತ್ತೆ ಕೋಮುವಾದದ ವಿವಾದದ ಸುಳಿಯಲ್ಲಿ:

ಬಹಳ ದಿನಗಳ ಕಾಲ ತಣ್ಣಗಾಗಿದ್ದ  ಗೀತೆ ಮತ್ತೆ 2006 ರಲ್ಲಿ ವಿವಾದಕ್ಕೆ ಗುರಿಯಾಯಿತು ಗೀತೆ ರಚನೆಯಾಗಿ 125 ವರ್ಷ ತುಂಬಿದ ನೆನಪಿಗಾಗಿ ಅದನ್ನು ದೇಶದ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳು ಹಾಡುವಂತಾಗಬೇಕು ಎಂಬ ಪ್ರಸ್ತಾಪ ಲೋಕಸಭೆಯಲ್ಲಾಗಿದ್ದು  ವಿವಾದಕ್ಕೆ ಕಾರಣ.  ಕೊನೆಗೂ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಅದನ್ನು ಕಡ್ಡಾಯಗೊಳಿಸುವ ವಿಚಾರವನ್ನು ಕೈಬಿಟ್ಟಿತು ಎಂಬುದು ಸಮಾಧಾನಕರ ಸಂಗತಿಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ  ಮೊದಲು ಉತ್ತರ ಪ್ರದೇಶ ಸರ್ಕಾರದ ಈ ಬಗೆಯ ನಿರ್ಣಯಕ್ಕೂ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂಬುದೂ ಕೂಡ ಒಂದು ಮಹತ್ವದ ಮತ್ತು ಉಲ್ಲೇಖನೀಯ ಅಂಶ.

ಈಗ ದೇಶದಲ್ಲಿ ಬಲಪಂಥೀಯ ಉಗ್ರಗಾಮಿತನ ಹೆಚ್ಚಾದಂತೆಲ್ಲ  ಗೀತೆಗೆ ಇನ್ನಷ್ಟು ಮಾನ್ಯತೆ ಸಿಗಬೇಕು ಎಂದು ಹಲವು ಸಂಘಟನೆಗಳು ಒತ್ತಾಯಿಸುತ್ತಿವೆಅಂಥ ಒತ್ತಾಯಗಳಲ್ಲಿ ಮುಖ್ಯವಾದದ್ದು 1937ರಲ್ಲಿ ತುಂಡುಮಾಡಿ ಸ್ವೀಕರಿಸಿದ ವಂದೇ ಮಾತರಂ ಜಾಗೆಯಲ್ಲಿ ಅದಕ್ಕೂ ಮೊದಲಿದ್ದ  ಗೀತೆಯ ಸಂಪೂರ್ಣ ಪಾಠವನ್ನು ದೇಶದ ಅಭಿಮಾನದ ಸಂಕೇತವಾಗಿ ಮತ್ತೆ ಸ್ವೀಕರಿಸಬೇಕು ಎಂಬುದು ಮುಖ್ಯವಾದದ್ದು ಹಿನ್ನಲೆಯಲ್ಲಿಯೇ ರಾಜಕೀಯ ಪಕ್ಷವೊಂದು ತನ್ನ ಅನುಯಾಯಿಗಳಿಗೆ ತನ್ನ ಅಧಿಕಾರ ಇರುವ ಕಡೆಗಳಲೆಲ್ಲ ರಾಷ್ಟç ಸ್ವಾತಂತ್ಯ ದಿನಾಚರಣೆ ಮತ್ತು ಪ್ರಜಾರಾಜ್ಯೋತ್ಸವಗಳ ದ್ವಜಾರೋಹಣ ಸಂದರ್ಭದಲ್ಲಿ ನಿಯಮದಂತೆ ಹೇಳಲಾಗುವ ಎರಡು ನುಡಿಗಳ  ಗೀತೆಯ ಬದಲು ಇಡೀ ಗೀತೆಯನ್ನು ಹಾಡಿಸುವಂತೆ ಅಲ್ಲಿನ ಆಡಳಿತದ ಮೇಲೆ ಕೆಲವು ವರ್ಷಗಳ ಹಿಂದೆ ಒತ್ತಡ ತಂದಿತ್ತು!  ಅನೇಕ ಶಾಲಾ-ಕಾಲೇಜುಗಳ ಮುಖ್ಯಸ್ಥರಿಗೆ ಅಲ್ಲಿನ ಆಡಳಿತ ಮಂಡಳಿಯಿಂದ ಇಂಥ ಅಸಂಬದ್ದ ಒತ್ತಡಗಳು ಬಂದರೂ ಅವು ನಿರೀಕ್ಷಿತ ಫಲಿತಾಂಶ ಕೊಡಲಿಲ್ಲ.

ಸಂವಿಧಾನ ಮತ್ತು ವಂದೇ ಮಾತರಂ:

ಭಾರತದ ಸಂವಿಧಾನ ಪ್ರಪಂಚದ ಬಹುಮುಖ್ಯವಾದ ಸಂವಿಧಾನಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆಸಮಾನತೆಸಹೋದರತೆಸರ್ವಧರ್ಮ ಸಮಭಾವ ಇವುಗಳನ್ನು ಬಹುಮುಖ್ಯ ಆಶಯಗಳನ್ನಾಗಿ ಸ್ವೀಕರಿಸಿದೆ ದೇಶದ ನಾಗರಿಕರು ಅವರು ಯಾವುದೇ ಜಾತಿ-ಧರ್ಮಗಳಿಗೆ ಸೇರಿದವರಾಗಿರಲಿ ಸಮಾನರು ಎಂದು ಅದು ಸಾರುತ್ತದೆಆದರೆ  ಗೀತೆ ಕೇವಲ ಒಂದು ಧರ್ಮದ ಅದರಲ್ಲಿಯೂ ಒಂದು ದೇವತೆಯ ಆರಾಧನೆಯನ್ನು ಮಾತ್ರ ಹೇಳುತ್ತದೆಹೀಗಿರುವಾಗ  ಗೀತೆಯನ್ನು ಎಲ್ಲರ ಪರವಾಗಿ ಸ್ವೀಕರಿಸಲು ಹೇಗೆ ಸಾಧ್ಯಅನ್ಯ ಧರ್ಮೀಯರ ಕಥೆ ಒಂದೆಡೆ ಇರಲಿ  ಗೀತೆ ʻತಾಯಿʼ ಎಂದು ಹೇಳುವ ಹತ್ತು ಕೈಗಳ ಭಯಂಕರ ಸ್ವರೂಪಿಣಿಯಾದ ದುರ್ಗೆಯನ್ನು ಕಲ್ಪಿಸಿಕೊಂಡರೆ ಅನೇಕ ಹಿಂದೂಗಳಿಗೇ ಭಯವುಂಟಾಗುತ್ತದೆಯೇ ಹೊರತು ಪ್ರೀತಿಯಲ್ಲ. ತಾಯಿಯ ಮುಖವನ್ನು ನೋಡಿದರೆ, ಕಲ್ಪಿಸಿಕೊಂಡರೆ ಮಕ್ಕಳಿಗೆ ಪ್ರೀತಿ ಉಂಟಾಗಿ ಓಡಿ ಹೋಗಿ ಅಮ್ಮನನ್ನು ಅಪ್ಪಿಕೊಳ್ಳಬೇಕೇ ಅಥವಾ ಭಯಭೀತಿಗಳು ಉಂಟಾಗಿ ಕನಸಿನಲ್ಲಿ ಮೂತ್ರಮಾಡಿಕೊಳ್ಳಬೇಕೆ?

ಶಾಲೆಗಳಲ್ಲಿ ಮಕ್ಕಳು  ಗೀತೆಯ ಪೂರ್ಣಪಾಠವನ್ನು ಹಾಡಬೇಕು ಎಂದು ಕೆಲವು ವರ್ಷಗಲ ಹಿಂದೆ ಈ ʼದೇಶಭಕ್ತರುʼ ನಿರೀಕ್ಷಿಸಿದ್ದು (ಅದು ಆಗಲಿಲ್ಲ ಆ ಮಾತು ಬೇರೆ) ಎಷ್ಟು ಕೆಟ್ಟ ಆಲೋಚನೆ ಆಗಿತ್ತೋ ಈಗ ಅದನ್ನು, ಅಂದರೆ ಅದರ ಪೂರ್ಣಪಾಠವನ್ನು ರಾಷ್ಟ್ರಗೀತೆಯ ಸ್ಥಾನಕ್ಕೆ ಏರಿಸುವುದೂ ಕೂಡ ಒಂದು ದುಷ್ಟ ಆಲೋಚನೆ ಎಂದೇ ಹೇಳಬೇಕು. ಯಾವುದೇ ಜಾತಿ-ಧರ್ಮದಕ್ಕೆ ಸೇರಿದವರಾಗಿರಲಿ ಯಾವ ಭೇದಭಾವಗಳಿಲ್ಲದೆ ಭಾರತ ಸಂವಿಧಾನಕ್ಕೆ ಬದ್ದರಾಗಿ ಪರಸ್ಪರ ಪ್ರೀತಿ ವಿಶ್ವಾಸ ಗೌರವಗಳಿಂದ ಒಂದಾಗಿ ಬದುಕುವುದನ್ನು ಕಲಿತು ಒಂದಾಗಿ ಬಾಳಬೇಕಾದ ಜನರ ಮನಸ್ಸುಗಳ ಮಧ್ಯೆ ಒಂದಾಗಲು ಬಿಡದ  `ಭೇದಭಕ್ತಿಗೀತೆʼಯ ಬೀಜವನ್ನು ಬಿತ್ತುವ ಕೆಲಸ ಅನವಶ್ಯಕ ಮಾತ್ರವಲ್ಲಅತ್ಯಂತ ಅಪಾಯಕಾರಿ ಕೂಡ ಹೌದು.

ಸಾರಾಂಶದಲ್ಲಿ ಹೇಳುಬೇಕೆಂದರೆ ನಮಗೆ ವೈಚಾರಿಕತೆಯ ಸ್ಪಷ್ಟತೆ ಇರುವುದೇ ಆದರೆ ನಾವು ಭಾರತ ಸಂವಿಧಾನವನ್ನು ಒಪ್ಪಿಕೊಳ್ಳಬೇಕು ಇಲ್ಲವೇ ವಂದೇಮಾತರಂʼ ಗೀತೆಯನ್ನು ಒಪ್ಪಿಕೊಳ್ಳಬೇಕುಎರಡನ್ನೂ ಒಪ್ಪಿಕೊಳ್ಳುತ್ತೇವೆ ಎಂದರೆ ಅದು ಖಂಡಿತಾ ಎಡಬಿಡಂಗಿತನವಾಗುತ್ತದೆ.

***** 

ಡಾ. ರಾಜೇಂದ್ರ ಬುರಡಿಕಟ್ಟಿ

06-11-2025


No comments:

Post a Comment