ಕೊಂದವರುಳಿವರೇ ಕೂಡಲಸಂಗಮದೇವಾ....
ಭಾರತದ ಒಳಗೆ ಗಾಂಧೀಜಿಯನ್ನು ಕೊಲ್ಲುವ ವಿಫಲ ಯತ್ನಗಳೂ ಎಷ್ಟೇ ನಡೆಯಲಿ ಭಾರತದ ಹೊರಗೆ ನಾವು ಹೋದಾಗ ಒಂದಿಷ್ಟು ಮರ್ಯಾದೆ ಗೌರವಗಳು ಸಿಗಬೇಕಾದರೆ ನಾವು ಅಲ್ಲಿ ನಮ್ಮ ಐಡೆಂಟಿಟಿಗಾಗಿ ಗಾಂಧಿಯ ಹೆಸರನ್ನು ಹೇಳಬೇಕಾಗುತ್ತದೆಯೇ ಹೊರತು ಗಾಂಧಿಯನ್ನು ಕೊಂದವರ ಹೆಸರನ್ನಲ್ಲ.
ಹೀಗೆ ಜಗತ್ತಿನ ಜನಮಾನಸದಲ್ಲಿ ಬೇರ್ಪಡಿಸಲಾಗದಂತೆ ಬೆರೆತುಹೋಗಿರುವ ಗಾಂಧೀಜಿಯೆ ಐಡಿಯಾಲಜಿಗೆ ಮಾತ್ರವೇ ವಿಶ್ವಶಾಂತಿ ಬಾಯಾರಿಕೆಯ ವಿದೇಶಿ ಯುವಜನತೆಯನ್ನು ಭಾರತಕ್ಕೆ ಸೆಳೆಯುವ ಶಕ್ತಿ ಇರುವುದೇನೋ...
ನಿನ್ನೆ ಗುಜರಾತಿನಲ್ಲಿ, ಗಾಂಧೀಜಿ ತಮ್ಮ ಜೀವನದ ಬಹುಭಾಗವನ್ನು ಬದುಕಿದ, ಮತ್ತು ಉಪ್ಪಿನ ಸತ್ಯಾಗ್ರಹ ಸೇರಿದಂತೆ ಬಹುಮುಖ್ಯ ಚಳವಳಿಗಳನ್ನು ನಿಂತು ಮುನ್ನೆಡೆಸಿದ, ಸಾಬರಮತಿ ಆಶ್ರಮದಲ್ಲಿ ಗಾಂಧೀಜಿಯ ಮನೆ ʼಹೃದಯಕುಂಜʼದಲ್ಲಿ ಗಾಂಧೀಜಯಂತಿ ಕಾರ್ಯಕ್ರಮದ ನಂತರ ಅವರು ಸಾರ್ವಜನಿಕರನ್ನು ಭೇಟಿಮಾಡುತ್ತಿದ್ದ, ಮತ್ತು ಮಹತ್ವದ ವಿಷಯಗಳನ್ನು ಕುರಿತು ಚರ್ಚಿಸುತ್ತಿದ್ದ ಅವರ ಕೋಣೆಯಲ್ಲಿ ಜಪಾನಿನಿಂದ ಬಂದಿದ್ದ ಈ ಯುವಕ ಯುವತಿಯರು ಸಿಕ್ಕರು.
ಅವರೊಡಗಿನ ಒಂದಿಷ್ಟು ಮಾತುಗಳು ಇಲ್ಲಿ ಗಾಂಧಿಯನ್ನು ಕೊಲ್ಲುವ ಪ್ರಯತ್ನಗಳು ಎಷ್ಟು ಭರದಿಂದ ನಡೆಯುತ್ತಿವೆಯೋ ಅಷ್ಟೇ ಭರದಿಂದ ವಿದೇಶದಲ್ಲಿ ಅವರನ್ನು ಬೆಳೆಸುವ ಪ್ರಯತ್ನಗಳೂ ಆಗುತ್ತಿವೆ ಎಂಬುದನ್ನು ನನ್ನ ಅರಿವಿಗೆ ತಂದವು. ಅದೇ ಕ್ಷಣ ಬಸವಣ್ಣನವರ ವಚನದ ʼಕೊಂದವರುಳಿವರೇ ಕೂಡಲಸಂಗಮದೇವಾ..ʼ ಎಂಬ ಸಾಲು ಮನದ ಮೂಲೆಯಲ್ಲಿ ಹಾದು ಹೋಯಿತು....
ರಾಜೇಂದ್ರ ಬುರಡಿಕಟ್ಟಿ
ಅಕ್ಟೋಬರ್ ೩, ೨೦೨೫




No comments:
Post a Comment