ಅಂಗಾಗದಾನವೆಂಬ ಶ್ರೇಷ್ಠದಾನ
ವಿಶ್ವ ಅಂಗಾಗದಿನದ ವಿಶೇಷ ಉಪನ್ಯಾಸ - ಡಾ ರಾಜೇಂದ್ರ ಬುರಡಿಕಟ್ಟಿ
ಆಗಸ್ಟ್ ಹದಿಮೂರು ವಿಶ್ವ ಅಂಗಾಗ ದಾನ ದಿನ (World Organ Donation Day). ಒಬ್ಬ ವ್ಯಕ್ತಿ ತನ್ನ ಮರಣಾನಂತರ ಮಾಡುವ ತನ್ನ ಅಂಗಾಗದಾನದಿಂದ ಎಂಟು ಜನರ ಬದುಕಿಗೆ ಬೆಳಕು ಬರುತ್ತದೆಯಂತೆ. ಇಂತಹ ಒಂದು ಕಾರ್ಯಕ್ಕೆ ಬೇಕಾದದ್ದು ಬೇರೆ ಏನೂ ಅಲ್ಲ. ಕೇವಲ ಧಾರ್ಮಿಕ ಸಂಕೋಲೆಗಳಿಂದ ಬಿಡಿಸಿಕೊಂಡು ತುಸು ಪ್ರಗತಿಪರವಾಗಿ ಯೋಚಿಸುವಿಕೆ ಅಷ್ಟೆ. ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಮ್ಮ ದೇಶದ ಈಗಿನ ಜನಸಂಖ್ಯೆ ಸುಮಾರು ೧೫೦ ಕೋಟಿ. ಇದರಲ್ಲಿ ಅಂಗಾಂಗ ದಾನ ಮಾಡಿದವರ ಸಂಖ್ಯೆ ಕೇವಲ ನಾಲ್ಕು ಲಕ್ಷಕ್ಕಿಂತ ಕಡಿಮೆ! ದೇಶದಲ್ಲಿ ಕರ್ನಾಟಕ ಅಂಗಾಗದಾನದಲ್ಲಿ ಈಗ ಮೂರನೆಯ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಇದ್ದರೂ ಜಿಲ್ಲೆಗಳಲ್ಲಿ ಧಾರವಾಡ ಬಳ್ಳಾರಿ ಜಿಲ್ಲೆಗಳು ಮೊದಲ ಎರಡು ಸ್ಥಾನದಲ್ಲಿವೆ. ಅಂಗಾಗ ದಾನ ಎಂಬುದು ಎಷ್ಟು ಮುಖ್ಯವಾದದ್ದು ಅದನ್ನು ಮಾಡುವ ವಿಧಾನ ಅದರ ಪ್ರಯೋಜನ ಇತ್ಯಾದಿ ಕುರಿತು ತಿಳಿಯಲು ಈ ಲಿಂಕ್ ಒತ್ತಿ.https://youtu.be/TXqw_c1AOy8?feature=shared

No comments:
Post a Comment