Monday, October 6, 2025

ವಾಲ್ಮೀಕಿ ಎಂಬ ಋಷಿ ವಾಸ್ತವದಲ್ಲಿ ಇದ್ದನೇ?


ವಾಲ್ಮೀಕಿ ಎಂಬ ಋಷಿ ವಾಸ್ತವದಲ್ಲಿ ಇದ್ದನೇ?

ಇಂಥದ್ದೊಂದು ಪ್ರಶ್ನೆ ಬಹಳಷ್ಟು ಜನರಿಗೆ ಬಾಲಿಷವಾಗಿ ಕಂಡರೂ ಕಂಡೀತು. ಏಕೆಂದರೆ ವಾಲ್ಮೀಕಿ ಎಂಬ ಹೆಸರು ಭಾರತದಲ್ಲಿ ಯಾರಿಗೆ ತಾನೆ ಗೊತ್ತಿಲ್ಲ? ಆಬಾಲವೃದ್ಧರಿಗೆಲ್ಲ ಈ ಹೆಸರು ಪರಿಚಿತ. ಅಂಥದ್ದರಲ್ಲಿ ಇಂಥದ್ದೊಂದು ಪ್ರಶ್ನೆ ಬಾಲಿಷವಾಗಿ ತೋರುವುದರಲ್ಲಿ ಆಶ್ಚರ್ಯವೇನೂ ಇರಲಾರದು. ಆದರೆ ಭಾವನಾತ್ಮಕ ಅಂಶಗಳೇ ಬೇರೆ ಸಂಶೋಧನಾತ್ಮಕ ಸತ್ಯಗಳೇ ಬೇರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗುವುದಾದರೆ ಇಂಥದ್ದೊಂದು ಪ್ರಶ್ನೆ ಖಂಡಿತಾ ಬಾಲಿಷ ಅನ್ನಿಸಲಾರದು.

ವಾಲ್ಮೀಕಿಯ ಜಯಂತಿ ಬಂತೆಂದರೆ ಬಹುತೇಕ ಭಾಷಣಕಾರರು ಹೇಳಿ ಹೇಳಿ ಸವೆದುಹೋಗಿರುವ ಒಂದು ಮಾತನ್ನು ಇತ್ತೀಚಿನವರೆಗೂಹೇಳುತ್ತಲೇ ಬಂದಿದ್ದರು ಅದೇನೆಂದರೆ ವಾಲ್ಮೀಕಿ ಬೇಡ ಸಮುದಾಯಕ್ಕೆ ಸೇರಿದ ವ್ಯಕ್ತಿ. ಆರಂಭದಲ್ಲಿ ಕೊಲೆ ದರೋಡೆ ಇತ್ಯಾದಿ ಮಾಡುತ್ತಿದ್ದ. ಮುಂದೆ ಬದಲಾಗಿ ಮಹಾ ಋಷಿಯಾದ ಎಂಬುದೇ ಆ ಮಾತು. ಈಗ ಎಲ್ಲ ಸಮುದಾಯದವರೂ ಸಂಘಟಿತರಾಗಿರುವಂತೆ  ಬೇಡರೂ ಸಂಘಟಿತರಾಗಿದ್ದಾರೆ. ಅವರು ಈ ಮಾತನ್ನು ತಮ್ಮ ಸಮುದಾಯಕ್ಕೆ ಮಾಡುವ ಅವಮಾನವೆಂದು ಪರಿಗಣಿಸಿದ್ದಾರೆ. ವಾಲ್ಮೀಕಿ ಹೀಗೆ ದರೋಡೆಕೋರನಾಗಿದ್ದ ಎಂಬ ಬಗ್ಗೆ ಆಧಾರವಿಲ್ಲದೇ ಮಾತನಾಡುವುದನ್ನು ಅವರು ಗಂಭೀರವಾಗಿ ಪರಿಗಣಿಸಿ ಹೀಗೆ ಮಾತನಾಡಿದವರ ಮೇಲೆ ಮೊಕದ್ಧಮೆ ದಾಖಲಿಸುವ ಕೆಲಸಗಳೂ ಉತ್ತರ ಭಾರತದಲ್ಲಿ ಕೆಲವೆಡೆ ನಡೆದ ಮೇಲೆ ಹೀಗೆ ಪುಂಗೀ ಊದುವವರ ಸಂಖ್ಯೆ ಹಟತ್ತಾಗಿ ನಿಂತುಬಿಟ್ಟಿದೆ!

ಈ ಮಧ್ಯೆ  ಕೆಲವು ಸಂಶೋಧಕರು, “ವಾಲ್ಮೀಕಿ ಮೂಲತಃ ಬೇಡ ಸಮುದಾಯದವನಲ್ಲ. ಆತ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಶಿಶು, ಬಾಲ್ಯದಲ್ಲಿ ಪರಿತ್ಯಕ್ತನಾಗಿ ಬೇಡ ಸಮುದಾಯದಲ್ಲಿ ಬೆಳೆದ” ಎಂಬ  ವಾದವೊಂದನ್ನು ತೇಲಿಬಿಟ್ಟರು. ಇದಕ್ಕೂ ಬಲವಾದ ಆಧಾರಗಳಿರಲಿಲ್ಲ. ಇದು ಸತ್ಯವಾಗಿರುವುದಕ್ಕಿಂತ ಹೆಚ್ಚಾಗಿ, “ದೊಡ್ಡ ಸಾಧನೆಯೊಂದನ್ನು ಮಾಡುವುದು ಸಮಾಜದಲ್ಲಿ ಉತ್ತಮ ಕುಲವೆಂದು ಕರೆದುಕೊಂಡಿರುವ ಕುಲದಲ್ಲಿ ಹುಟ್ಟಿದವರಿಗೆ ಮಾತ್ರ ಸಾಧ್ಯ” ಎಂಬುದನ್ನು ಪರೋಕ್ಷವಾಗಿ ಸಾಧಿಸಲು ಮಾಡಿದ ಕುತಂತ್ರ ಎಂದು ವ್ಯಾಪಕ ಟೀಕೆಗೆ ಒಳಗಾಯಿತು. ಹೀಗೆ ವಾಲ್ಮೀಕಿ ಕುರಿತು ಅನೇಕ ಭಾವನಾತ್ಮಕ ಅಂಶಗಳು ಇರುವಾಗ ಅವನ್ನೆಲ್ಲ ಬದಿಗಿಟ್ಟು ವಾಲ್ಮೀಕಿ ಮತ್ತು ಆತನಿಂದ ರಚಿತವಾಗಿದೆ ಎಂದು ಹೇಳಲಾಗುವ ರಾಮಾಯಣ ಹಾಗೂ ಅದರೊಟ್ಟಿಗೆ ಉಲ್ಲೇಖಿಸಲ್ಪಡುವ ಮಹಾಭಾರತ ಇವುಗಳ ಕುರಿತು ಬೌದ್ಧಿಕ ವಲಯದಲ್ಲಿ ಏನೆಲ್ಲ ಚರ್ಚೆಗಳು ಆಗಿವೆ ಅವು ನಮ್ಮ ಅರಿವನ್ನು ವಿಸ್ತರಿಸಲು ಎಷ್ಟರ ಮಟ್ಟಿಗೆ ನೆರವಾಗಿವೆ ಎಂಬುದನ್ನು ಈ ಲೇಖನದಲ್ಲಿ ತಕ್ಕಮಟ್ಟಿಗೆ ಚರ್ಚೆಗೆ ಎತ್ತಿಕೊಳ್ಳಲಾಗಿದೆ.

ರಾಮಾಯಣ ಮಹಾಭಾರತಗಳ ʼರಾಮಾಯಣ!ʼ

ಕನ್ನಡವೂ ಸೇರಿದಂತೆ ಬಹುತೇಕ ಎಲ್ಲ ಭಾಷೆಗಳ ಸಾಹಿತ್ಯವನ್ನು ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸಿದ ಎರಡು ಮುಖ್ಯವಾದ ಪ್ರಾಚೀನ ಸಂಸ್ಕೃತ ಮಹಾಕಾವ್ಯಗಳೆಂದರೆ ಒಂದು ರಾಮಾಯಣ ಇನ್ನೊಂದು ಮಹಾಭಾರತ. ರಾಮಾಯಣವನ್ನು ವಾಲ್ಮೀಕಿ ಎಂಬ ಋಷಿ ಹಾಗೆಯೇ ಮಹಾಭಾರತವನ್ನು ವ್ಯಾಸ ಎಂಬ ಋಷಿ ರಚಿಸಿದರು ಎಂದು ಹೇಳಲಾಗುತ್ತದೆ. ಆದರೆ ಈ ಅಭಿಪ್ರಾಯಕ್ಕೆ ಖಚಿತತೆಯ ಕೊರತೆ ಈಗಲೂ ಇದೆ. ಈ ಕೃತಿಗಳು ನಿಜವಾಗಿಯೂ ಇವರಿಂದ ರಚಿತವಾಗಿವೆಯೇ ಎಂಬ ಬಗ್ಗೆ ಅಷ್ಟೇ ಏಕೆ ಈ ʻವಾಲ್ಮೀಕಿʼʻ ಮತ್ತುʻವ್ಯಾಸʼ ಎಂಬುವು ನಿಜವಾಗಿಯೂ ವ್ಯಕ್ತಿಗಳ ಹೆಸರುಗಳಾಗಿದ್ದವೇ ಎಂಬ ಬಗ್ಗೆಯೇ ದೊಡ್ಡ ವಿದ್ವಾಂಸರುಗಳು ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ʻವಾಲ್ಮೀಕಿʼ ಎಂಬ ಪದ ʻವಲ್ಮೀಕʼದಿಂದ ಹುಟ್ಟಿದ್ದು. ʻವಲ್ಮೀಕʼ ಎಂದರೆ ಹುತ್ತ ಎಂದರ್ಥ. ʻವ್ಯಾಸʼ ಎಂಬ ಪದಕ್ಕೆ ʼವಿಸ್ತಾರʼ ʻವಿಸ್ತೀರ್ಣʼ ಎಂಬ ಅರ್ಥಗಳಿವೆ.

ಹಾಗಾಗಿ ಇವು ವಾಸ್ತವದಲ್ಲಿ ಅನ್ವರ್ಥನಾಮಗಳಾಗಿರಬಹುದೇ ಹೊರತು ನಿರ್ದಿಷ್ಟ ವ್ಯಕ್ತಿಗಳಿಗಿದ್ದ ಅಂಕಿತನಾಮಗಳಾಗಿರಲಾರವು ಎಂಬುದು ಬಹಳಷ್ಟು ವಿದ್ವಾಂಸರ ಅಭಿಮತ. ನಿಜವಾಗಿಯೂ ಇವು ಯಾರ ಹೆಸರೂ ಆಗಿರಲಿಲ್ಲ ಎಂದು ಸ್ವತಃ ಕುವೆಂಪು ಅವರ ಗುರುಗಳೂ ಹೆಸರಾಂತ ವಿದ್ವಾಂಸರೂ ಆಗಿದ್ದ ಟಿ ಎಸ್‌ ವೆಂಕಣ್ಣಯ್ಯ ಅವರು ಅಭಿಪ್ರಾಯಪಡುವುದಾಗಿ ಮಹಾಕಾವ್ಯಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದ ಕನ್ನಡದ ಹಿರಿಯ ಕವಿ ಡಾ ಜಿ ಎಸ್‌ ಶಿವರುದ್ರಪ್ಪ ಅಭಿಪ್ರಾಯಪಡುತ್ತಾರೆ.

ಈ ಕಾವ್ಯಗಳ ಬಗ್ಗೆ ವಿದ್ವಾಂಸರಲ್ಲಿ ಏನೇ ಭಿನ್ನಾಭಿಪ್ರಾಯಗಳಿರಲಿ ಸಂಶಯಗಳಿರಲಿ ಆ ಎರಡೂ ಮಹಾಕಾವ್ಯಗಳು ನಮ್ಮೆದುರು ಇರುವುದಂತೂ ನಿಜ. ಅವುಗಳ ಹುಟ್ಟಿನ ಬಗ್ಗೆ ಹೇಳುತ್ತಾ ವೇದ ಉಪನ್ನಿಷತ್ತಿನ ಗಂಭೀರ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಕಷ್ಟ ಎಂಬ ಸನ್ನಿವೇಶದಲ್ಲಿ ಸರಳವಾಗಿ ಜನರಿಗೆ ತಲುಪಿಸುವ ಕಾರ್ಯಕ್ಕಾಗಿ ಮಹಾಕಾವ್ಯಗಳ ರಚನೆಯಾಯಿತು. ಇದರ ಭಾಗವಾಗಿ ಮೊದಲೇ ಜನರ ಹೃದಯಗಳನ್ನು ಗೆದ್ದಿದ್ದ ವೀರಾಧಿವೀರ ರಾಜರು ಮುಂತಾದವರನ್ನು ದೈವೀಕರಿಸುವ ಕಾರ್ಯ ನಡೆಯಿತು. ಇದರ ಉತ್ಪನ್ನಗಳೇ ಈ ಮಹಾಕಾವ್ಯಗಳು ಎನ್ನಲಾಗುತ್ತದೆ.

ರಾಮಾಯಣ ಮತ್ತು ಮಹಾಭಾರತದ ಗಾತ್ರ ಮತ್ತು ಕಾಲದ ಬಗ್ಗೆ ಕೂಡ ಸಾಕಷ್ಟು ಗೊಂದಲಗಳಿವೆ. ವಾಸ್ತವದಲ್ಲಿ ಈಗ ನಾವು ಯಾವುದನ್ನು ವಾಲ್ಮೀಕಿ ರಾಮಾಯಣ ಎಂದು ಕರೆಯುತ್ತೇವೆಯೋ ಮತ್ತು ಯಾವುದನ್ನು ವ್ಯಾಸಭಾರತ ಎಂದು ಕರೆಯುತ್ತೇವೆಯೋ ಅವೆರಡೂ ತಮ್ಮಷ್ಟಕ್ಕೆ ತಾವು ಬೃಹತ್‌ ಗ್ರಂಥಗಳೇ ಆಗಿವೆ. ಆದರೆ ಅವುಗಳನ್ನೇ ಪರಸ್ಪರ ಹೋಲಿಸಿ ಹೇಳುವುದಾದರೆ ಗಾತ್ರದಲ್ಲಿ ರಾಮಾಯಣಕ್ಕಿಂತ ಮಹಾಭಾರತ ದೊಡ್ಡದು. ಈಗಿರುವ ವಾಲ್ಮೀಕಿ ರಾಮಾಯಣದಲ್ಲಿ ಸುಮಾರು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳಿವೆ ಎಂದು ಹೇಳಲಾಗುತ್ತದೆ. ಆದರೆ ವ್ಯಾಸಮಹಾಭಾರತದಲ್ಲಿನ ಶ್ಲೋಕಗಳ ಸಂಖ್ಯೆ ಸುಮಾರು ಒಂದು ಲಕ್ಷ! ಅಂದರೆ ರಾಮಾಯಣಕ್ಕಿಂತ ಸುಮಾರು ನಾಲ್ಕುಪಟ್ಟು ದೊಡ್ಡದು!

ಹೀಗೆ ಈಗ ರಾಮಾಯಣಕ್ಕಿಂತ ಮಹಾಭಾರತ ಬಹಳಷ್ಟು ದೊಡ್ಡದಿರುವುದು ನಿಜವಾದರೂ  ಆರಂಭದಲ್ಲಿ ಅದು ಈ ಸ್ವರೂಪದಲ್ಲಿ ಇರಲಿಲ್ಲ, ಆರಂಭದಲ್ಲಿ ಅದು ಕೇವಲ ಎಂಟು ಸಾವಿರ ಶ್ಲೋಕಗಳ ʼಒಂದು ಚಿಕ್ಕಕಾವ್ಯವಾಗಿತ್ತು ಮತ್ತು ಆಗ ಅದನ್ನು ʻಜಯʼ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಈ ಜಯಕ್ಕೆ ಕಾಲಾನುಕ್ರಮದಲ್ಲಿ ಆಯಾ ಕಾಲದ ಕವಿಗಳು  ತಮ್ಮ ತಮ್ಮ ಹಿತಾಸಕ್ತಿ ಮತ್ತು ಕಾಲದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮದೇ ಆದ ಶ್ಲೋಕಗಳನ್ನು ಸೇರಿಸುತ್ತಾ ಹೋದ ಪರಿಣಾಮವಾಗಿ ಅದು ʼಭಾರತʼ ಆಗಿ ಬೆಳೆಯಿತು ಮತ್ತೂ ಬೆಳೆಯುತ್ತಾ ಹೋಗಿ ಇಂದಿನ ಬೃಹತ್‌ ʻಮಹಾಭಾರತʼವಾಗಿ ನಮ್ಮೆದುರಿಗೆ ನಿಂತಿದೆ.  ಹೀಗಾಗಿ ಈ ಎರಡೂ ಕಾವ್ಯಗಳಲ್ಲಿ ಯಾವುದು ದೊಡ್ಡದು ಎಂಬುದಕ್ಕೆ ʻಅದಕ್ಕಿಂತ ಇದು ದೊಡ್ಡದು; ಇದಕ್ಕಿಂತ ಅದು ದೊಡ್ಡದುʼ ಎಂಬುದೇ ಸರಿಯಾದ ಉತ್ತರ!

ಈ ಕಾವ್ಯಗಳ ಗಾತ್ರದ ಬಗ್ಗೆ ಇದ್ದಂತೆ ಕಾಲದ ಬಗ್ಗೆಯೂ ಇಂಥದ್ದೇ ಚರ್ಚೆಗಳು ವಿದ್ವಾಂಸರ ವಲಯದಲ್ಲಿ ಬಹಳಷ್ಟು ನಡೆದಿವೆ. ಈ ಕಾವ್ಯಗಳ ರಚನೆಯ ಕಾಲವನ್ನು ಕೆಲವರು ಕ್ರಿ.ಪೂ. ೩೦೦ಕ್ಕೆ ಹಿಂದಕ್ಕೆ ತಳ್ಳಿದರೆ ಕೆಲವರು ಕ್ರಿ.ಶ. ೭೦೦ಕ್ಕೆ ಮಂದೆ ಎಳೆಯುತ್ತಾರೆ. ಅಂದರೆ ಸರಿಸುಮಾರು ಒಂದು ಸಾವಿರ ವರ್ಷಗಳ ಧೀರ್ಘ ಅವಧಿಯನ್ನು ಈ ಕಾವ್ಯಗಳು ʻರಚನೆಯ ಎಳೆದಾಡುವ ಕಾಲʼವನ್ನಾಗಿ ಹೊಂದಿವೆ. ಕೆಲವರು ರಾಮಾಯಣ ಮೊದಲು ರಚಿತವಾಗಿ ನಂತರ ಮಹಾಭಾರತ ರಚಿತವಾಗಿದೆಯೆಂದು ವಾದಿಸಿದರೆ ಇನ್ನು ಕೆಲವರು ಮಹಾಭಾರತವೇ ಮೊದಲು ರಚಿತವಾಗಿ ನಂತರ ರಾಮಾಯಣ ರಚಿತವಾಗಿದೆಯೆಂದೂ ವಾದಿಸುತ್ತಾರೆ. 

ಇವೆರಡಕ್ಕೂ ಸಾಕಷ್ಟು ಆಧಾರಗಳೂ ಇವೆ. ಈ ವಿವಾಧವನ್ನು ತಿಳಿಗೊಳಿಸುವಂತೆ ಇರುವ ಕನ್ನಡ ʻವಚನಭಾರತʼ ಬರೆದ ಹಿರಿಯ ವಿದ್ವಾಂಸ ಎ ಆರ್‌ ಕೃಷ್ಣಶಾಸ್ತ್ರೀ ಅವರ ಈ ಅಭಿಪ್ರಾಯ ಗಮನಿಸಿ: “ ರಾಮನ ಕಥೆ ಪ್ರಾಚೀನವಾದದ್ದು. ಆದರೆ ರಾಮಾಯಣವು ಮಾತ್ರ ಭಾರತವು ಹುಟ್ಟಿ ಅದು ʼಮಹಾಭಾರತʼವಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಮಧ್ಯೆ ಯಾವಾಗಲೋ ಹುಟ್ಟಿರಬೇಕೆಂದೂ, ರಾಮಾಯಣವು ಹುಟ್ಟಿದ ಮೇಲೆ, ʻಭಾರತʼದ ಬೆಳವಣಿಗೆ ಮುಗಿದು ಅದು ಇಂದಿನ ʻಮಹಾಭಾರತʼದ ಸ್ವರೂಪವನ್ನು ತಾಳಿತೆಂದೂ ಸಾಧಾರಣವಾಗಿ ಎಲ್ಲರೂ ಒಪ್ಪುತ್ತಾರೆ. ಆದ್ದರಿಂದಲೇ, ರಾಮಾಯಣಕ್ಕಿಂತ ಭಾರತ ಹಳೆಯದು; ಭಾರತಕ್ಕಿಂತ ರಾಮಾಯಣ ಹಳೆಯದು.”

ರಚನೆಯ ಕಾಲಾವಧಿಯ ದೃಷ್ಟಿಯಿಂದ ನೋಡಿದರೆ ಈ ಮಹಾಕಾವ್ಯಗಳು ಈಗಿನ ಕಾವ್ಯಗಳಂತೆ ಐದೋ ಹತ್ತೋ ವರ್ಷಗಳಲ್ಲಿ ಬರೆಯಲ್ಪಟ್ಟಿರಲಿಕ್ಕಿಲ್ಲ ಎಂಬುದಂತೂ ಸತ್ಯ. ವ್ಯಾಸನಾಗಲೀ ವಾಲ್ಮೀಕಿಯಾಗಲೀ ಈ ಕಾವ್ಯಗಳನ್ನು ಸ್ವತಂತ್ರವಾಗಿ ತಾವೆ ರಚಿಸಿರಲಿಕ್ಕಿಲ್ಲ. ಆ ಕಾಲಘಟ್ಟದಲ್ಲಿ ಜನಪದರ ಬಾಯಲ್ಲಿ ಹರಿದಾಡುತ್ತಿದ್ದ ಕಥೆಗಳಿಗೆ ಒಂದು ಚೌಕಟ್ಟು ರಚಿಸಿಕೊಟ್ಟು ಅವನು ಲಿಖಿತರೂಪಕ್ಕೆ ಇಳಿಸಿದರೆಂದೂ ಈ ಕಾವ್ಯಗಳು ಕಾಲಾನುಕ್ರಮದಲ್ಲಿ ಬೆಳೆಯುತ್ತಾ ಈ ಸ್ಥಿತಿಗೆ ಬಂದು ತಲುಪಿವೆಯೆಂದೂ ಅನೇಕ ವಿದ್ವಾಂಸರ ಅಭಿಪ್ರಾಯ

ರಾಮಾಯಣಗಳ ಮೂರು ಗುಂಪುಗಳು

ಇನ್ನು ರಾಮಾಯಣಕ್ಕೆ ವಿಷಯವನ್ನು ಕೇಂದ್ರೀಕರಿಸುವುದಾದರೆ ಭಾರತದಲ್ಲಿ ಸುಮಾರು ಮೂರು ನೂರಕ್ಕೂ ಹೆಚ್ಚು ರಾಮಾಯಣಗಳು ಇವೆಯೆಂದು ಒಂದು ಅಂದಾಜಿದೆ. ಎ ಕೆ. ರಾಮಾನುಜನ್‌ ಅವರ ʼತ್ರೀ ಹಂಡ್ರಡ್‌ ರಾಮಾಯಣಾಸ್‌ʼ ಎಂಬ ಕೃತಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಎಲ್ಲ ರಾಮಾಯಣಗಳನ್ನು ಅಧ್ಯಯನದ ದೃಷ್ಟಿಯಿಂದ ಮೂರು ವಿಭಾಗಗಳಾಗಿ ವಿಂಗಡಿಸುವರು. ಅವೆಂದರೆ ವೈದಿಕ ರಾಮಾಯಣಗಳು, ಜೈನ ರಾಮಾಯಣಗಳು ಮತ್ತು ಬೌದ್ಧ ರಾಮಾಯಣಗಳು.

ವೈದಿಕ ರಾಮಾಯಣಗಳು ವೇದ ಉಪನ್ನಿಷತ್ತುಗಳಲ್ಲಿ ಹೇಳಲಾಗುವ ಜ್ಞಾನವನ್ನು ಜನಸಾಮಾನ್ಯರಿಗೆ ತಿಳಿಸಲಿಕ್ಕಾಗಿ ರಚಿತವಾಗಿರುವಂಥವು. ಸ್ವರ್ಗ, ನರಕ, ಮುಕ್ತಿ, ಅದನ್ನು ಪಡೆಯುವ ಬಗೆ, ಜೀವಾತ್ಮ ಪರಮಾತ್ಮ ಇಂತಹ ಸಂಗತಿಗಳು ಇಲ್ಲಿ ಪ್ರತಿಪಾದಿಸಲ್ಪಟ್ಟಿವೆ. ಈ ರಾಮಾಯಣಗಳ ಪ್ರತಿನಿಧಿಯಾಗಿ ವಾಲ್ಮೀಕಿ ರಾಮಾಯಣವನ್ನು ಗುರುತಿಸಲಾಗುತ್ತದೆ. ಇನ್ನು ಜೈನ ರಾಮಾಯಣಗಳು ಜೈನಧರ್ಮದ ತತ್ವಗಳನ್ನು ಪ್ರತಿಪಾದಿಸಲು ರಚಿತವಾಗಿರುವಂಥವು. ಈ ರಾಮಾಯಣಗಳ ಪ್ರಕಾರ ರಾಮ, ಲಕ್ಷ್ಮಣ, ಹನುಮಂತ ಎಲ್ಲರೂ ಜೈನರು. ಸುಗ್ರೀವ, ವಾಲಿ ಇವರು ಕಪಿಗಳಲ್ಲ. ಬದಲಾಗಿ ಕಪಿಧ್ವಜರು! ಇಲ್ಲಿ ರಾವಣನನ್ನು ವಧಿಸಿದವನು ರಾಮನಲ್ಲ; ಲಕ್ಷ್ಮಣ! ಸೀತೆ ಮಂಡೋದರಿಯ ಗರ್ಭಸಂಜಾತೆ! ರಾವಣನು ಸೀತೆಯನ್ನು ಅಪಹರಿಸುವುದು ರಾಮನ ವೇಷದಿಂದ! ಇಲ್ಲಿ ರಾವಣನೂ ಅಹಿಂಸಾವ್ರತಿ. ಆ ಧರ್ಮದ ತತ್ವ ಪ್ರತಿಪಾದನೆಗಾಗಿ ಇಲ್ಲಿ ರಾಮ ಲಕ್ಷ್ಮಣ ರಾವಣ ಎಲ್ಲರೂ ಅಹಿಂಸಾವ್ರತಿಗಳಾಗಿ ಚಿತ್ರಿತರಾಗಿದ್ದಾರೆ.

ಇನ್ನು ಬೌದ್ಧ ಪರಂಪರೆಯ ರಾಮಾಯಣಗಳು ಉಳಿದೆರಡರಂತೆ ಭಾರತದಲ್ಲಿ ಹುಲುಸಾಗಿ ಬೆಳೆಯಲಿಲ್ಲ. ಕನ್ನಡ ಪರಿಸರದಲ್ಲಂತೂ ಅವು ಬೆಳೆಯಲೇ ಇಲ್ಲ. ಇದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಕನ್ನಡ ಪರಿಸರದಲ್ಲಿ ಬೌದ್ಧ ಮತಾವಲಂಬಿಯಾದ ಯಾವ ದೊಡ್ಡ ರಾಜರೂ ಆಳ್ವಿಕೆ ಮಾಡಲಿಲ್ಲ. ಹಾಗಾಗಿ ರಾಜಾಶ್ರಯ ದೊರೆಯಲಿಲ್ಲ. ಇದಕ್ಕೆ ಇನ್ನೊಂದು ಕಾರಣ ಈ ಬೌದ್ಧ ರಾಮಾಯಣಗಳ ತತ್ವಗಳನ್ನು ಜನ ಅಷ್ಟಾಗಿ ಆಗ ಒಪ್ಪಿಕೊಳ್ಳಲಿಲ್ಲ. ಇವು ತುಂಬಾ ಭಿನ್ನವಾದ ಕಥಾಹಂದರವನ್ನು ಹೊಂದಿದ್ದು ಇದಕ್ಕೆ ಕಾರಣ.

 ಬೌದ್ಧ ರಾಮಾಯಣಗಳ ಪ್ರತಿನಿಧಿಯೆಂದು ಗುರುತಿಸಲಾಗುವ, ʻದಶರತ ಜಾತಕʼ ಕಥೆಯಲ್ಲಿ ಗಮನ ಸೆಳೆಯುವ ಅಂಶವೆಂದರೆ ರಾಮ ಮತ್ತು ಸೀತೆ ಮೊದಲು ಅಣ್ಣತಂಗಿಯರಾಗಿದ್ದು ಮುಂದೆ ಮದುವೆಯಾಗಿ ದಂಪತಿಗಳಾಗಿ ಬದುಕುತ್ತಾರೆ. ಹಿಂದೆ ಸಮಾಜದಲ್ಲಿ ಆಸ್ತಿ ಮತ್ತಿತರ ಕಾರಣಗಳಿಂದ ಅಣ್ಣತಂಗಿಯರ ಮದುವೆಗಳು ನಡೆಯುತ್ತಿದ್ದದ್ದನ್ನದು ಅನೇಕ ಅಧ್ಯಯನಗಳು ಕೂಡ ದೃಢಪಡಿಸಿವೆ.  ಅಷ್ಟೇ ಏಕೆ ಋಗ್ವೇದದಲ್ಲಿಯೇ ಬರುವ ಯಮ-ಯಮಿಯರ ಸಂವಾದವೂ ಇಂಥದ್ದೊಂದು ಪದ್ಧತಿ ಚಾಲ್ತಿಯಲ್ಲಿ ಇದ್ದ ಬಗ್ಗೆ ನಮಗೆ ಸೂಚನೆಯನ್ನು ನೀಡುತ್ತದೆ. ಆದರೆ ಈ ಬಗೆಯ ಸತ್ಯವನ್ನು ಒಪ್ಪಿಕೊಳ್ಳಲು ನಮ್ಮ ಜನರ ಕಿವಿಗಳು ತಯಾರಿರಲಿಲ್ಲವಾದ್ದರಿಂದ ಬೌದ್ಧರಾಮಾಯಣಗಳು ಇಲ್ಲಿ ಜನಪ್ರೀಯತೆ ಗಳಿಸುವಲ್ಲಿ ವಿಫಲವಾದವೆಂದೇ ಹೇಳಬೇಕು

ಕನ್ನಡ ರಾಮಾಯಣಗಳು

ಕನ್ನಡದಲ್ಲಿ ಬೆಳೆದು ಬಂದ ವೈದಿಕ ರಾಮಾಯಣ ಮತ್ತು ಜೈನರಾಮಾಯಣ ಪರಂಪರೆಗೆ ಕ್ರಮವಾಗಿ ತೊರವೆ ನರಹರಿಯ ʼತೊರವೇ ರಾಮಾಯಣʼ ಮತ್ತು ನಾಗಚಂದ್ರನ “ರಾಮಚಂದ್ರಚರಿತ ಪುರಾಣʼ ಇವುಗಳನ್ನು ಶ್ರೇಷ್ಠ ಮತ್ತು ಪ್ರಾತಿನಿಧಿಕ ಕಾವ್ಯಗಳೆಂದು ಗುರುತಿಸಲಾಗುತ್ತದೆ.  ಆಧುನಿಕ ಕನ್ನಡದಲ್ಲಿ ಕೂಡ ಕುವೆಂಪು ಮಾಸ್ತಿ ಮುಂತಾದವರು ರಾಮಾಯಣವನ್ನು ಬರೆದಿದ್ದಾರೆ. ಇವರಿಬ್ಬರೂ ತಮ್ಮ ಕಾವ್ಯಗಳಿಗೆ ಆಧಾರವಾಗಿ ಇಟ್ಟುಕೊಂಡಿರುವುದು ವೈದಿಕ ರಾಮಾಯಣ ಪರಂಪರೆಯ ವಾಲ್ಮೀಕಿ ರಾಮಾಯಣವನ್ನಾದರೂ  ನಮ್ಮ ಕಾಲಕ್ಕೆ ತಕ್ಕಂತೆ ಅದರಲ್ಲಿ ಹತ್ತು ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.

ಮಾಸ್ತಿ ವೆಂಕಟೇಶ ಅಯ್ಯಂಗಾರರು ರಾಮಾಯಣಕ್ಕೆ ಅನೇಕರು ಇಲ್ಲಸಲ್ಲದ ಅನೇಕ ಸಂಗತಿಗಳನ್ನು ಸೇರಿಸಿ ಅದನ್ನು ಕುಲಗೆಡಿಸಿಬಿಟ್ಟಿದ್ದಾರೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿ ಅದನ್ನು ಶುದ್ಧೀಕರಿಸುವುದಕ್ಕಾಗಿ ತಾವು ಈ ಕಾವ್ಯ ಬರೆಯುತ್ತಿರುವುದಾಗಿ ತಮ್ಮ ʼಶ್ರೀರಾಮಪಟ್ಟಾಭಿಷೇಕʼದಲ್ಲಿ ಹೇಳುತ್ತಾರೆ. ಈ ಕಾರಣದಿಂದ ರಾಮಾಯಣದಲ್ಲಿ ಬರುವ ಹಲವು ಸಂಶಯಾಸ್ವದ ಘಟನೆಗಳನ್ನು ಅವರು ತಮ್ಮ ಕಾವ್ಯದಿಂದ ಹೊರಹಾಕಿದ್ದಾರೆ. ಅವುಗಳಲ್ಲಿ ಒಂದು ಉದಾಹರಣೆ ಕೊಡುವುದಾದರೆ ಹನುಮಂತನು ಲಂಕೆಗೆ ಬೆಂಕಿಕೊಟ್ಟು ಅದನ್ನು ಸುಟ್ಟುಹಾಕುವುದು. ಅವರ ಪ್ರಕಾರ ಯಾರೋ ರಂಜನೆಗಾಗಿ ರಾಮಾಯಣಕ್ಕೆ ಸೇರಿಸಿದ ಘಟನೆಯಿದು!

ಕುವೆಂಪು ಅವರ ಮಹಾಕಾವ್ಯ ʼಶ್ರೀ ರಾಮಾಯಣ ದರ್ಶನಂʼ ಹತ್ತು ಹಲವು ಕಾರಣಕ್ಕಾಗಿ ಈ ಕಾಲದ ಒಂದು ಮಹತ್ವದ ಕೃತಿಯಾಗಿ ರೂಪುಗೊಂಡಿದೆ. ಇಪ್ಪತ್ತನೆಯ ಶತಮಾನದ ಯುಗಧರ್ಮವಾದ ವಿಶ್ವಶಾಂತಿಯನ್ನು ಪ್ರತಿಪಾದಿಸುವ ಕಾರಣಕ್ಕಾಗಿ ಇದು ಈ ʻಶತಮಾನದ ಕಾವ್ಯʼ ಎಂಬ ಗೌರವಕ್ಕೆ ಪಾತ್ರವಾಗಿದೆ. ಇದು ಕೂಡ ವಾಲ್ಮೀಕಿ ರಾಮಾಯಣದಿಂದ ಪ್ರಭಾವಿತವಾಗಿರುವ ಕೃತಿಯಾದರೂ ಕಾಲಕ್ಕೆ ತಕ್ಕಂತೆ ಜನಕ್ಕೆ ತಕ್ಕಂತೆ ಹೊಸದಾಗಿ ಮುರಿದು ಕಟ್ಟಿರುವ ಮಹಾಕಾವ್ಯ. ಈ ಕಾವ್ಯದ ಆರಂಭದಲ್ಲಿ ಕವಿಕೊಡುವ ವಾಲ್ಮೀಕಿಯ ಚಿತ್ರಣವನ್ನು ನೀಡಿ ಈ ಲೇಖನವನ್ನು ಮುಗಿಸುತ್ತೇನೆ.

ಶ್ರೀರಾಮ ಕಥೆಯನ್ನು ಮಹರ್ಷಿ ನಾರದ ವೀಣೆಯಿಂದ ಕೇಳಿ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು ಆತ್ಮಸುಖಿಯಾಗಿ ತಮಸಾ ನದಿ ದಂಡೆಗೆ ಸ್ನಾನಕ್ಕೆಂದು  ಬರುವ ವಾಲ್ಮೀಕಿ ಅಲ್ಲಿನ ಮೆಟ್ಟಿಲುಗಳನ್ನು ಇಳಿದು ಇನ್ನೇನು ಸ್ನಾನಕ್ಕೆ ತೊಡಗಬೇಕು ಎನ್ನುವಷ್ಟರಲ್ಲಿ ಅವನಿಗೆ ಹಕ್ಕಿಯೊಂದು ನರಳುತ್ತಾ ಕಿರುಚುವ ಧ್ವನಿ ಕೇಳುತ್ತದೆ. ಹೋಗಿ ನೋಡುತ್ತಾನೆ. ಪರಸ್ಪರ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಅನಂದಿಸುತ್ತಿರುವ ಒಂದು ಕ್ರೌಂಚಪಕ್ಷಿಗಳ ಗಂಡುಹೆಣ್ಣು ಜೋಡಿಯಲ್ಲಿ ಗಂಡು ಪಕ್ಷಿಗೆ ಮಾಂಸದ ಆಸೆಯಿಂದ ಬೇಡನೊಬ್ಬ ಬಾಣಬಿಟ್ಟು ಅದನ್ನು ಕೆಳಗುರುಳಿಸಿರುತ್ತಾನೆ. ಇದನ್ನು ಕಂಡ ಹೆಣ್ಣುಹಕ್ಕಿ ಭೀಕರವಾಗಿ ಆಘಾತಕ್ಕೊಳಗಾಗಿ ಅಲ್ಲಿ ನರಳುತ್ತಿರುತ್ತದೆ. ವಾಲ್ಮೀಕಿ ಘಟನೆ ಸ್ಥಳಕ್ಕೆ ಹೋದಕೂಡಲೇ ಏನು ಮಾಡುತ್ತಾನೆ ಗೊತ್ತೆ?

ಮಾಂಸದಾಸೆಗೆ ಖುಷಿಯಿಂದ ಬಂದು ಬಿದ್ದ ಹಕ್ಕಿಯನ್ನು ತೆಗೆದುಕೊಳ್ಳಲು ಮುಂದಾದ ನಿಷಾಧನಿಗೆ ಶಾಪ ಕೊಡುವುದಿಲ್ಲ. ಶಿಕ್ಷೆಯನ್ನೂ ವಿಧಿಸುವುದಿಲ್ಲ. ಬದಲಾಗಿ ಕರೆದು ಅವನಿಗೆ ಬುದ್ಧಿ ಹೇಳುತ್ತಾನೆ. ತನ್ನ ಜೀವನ ವೃತ್ತಾಂತವನ್ನೇ ಉದಾಹರಣೆ ಕೊಟ್ಟು ನಾನು ಕೂಡ ಹಿಂದೊಮ್ಮೆ, “ಕೊಲೆಯ ಕಲೆಯಲ್ಲಿ ಕೋವಿದನಾಗಿ ಮಲೆತಿರ್ದೆನಯ್‌ / ನಾರದ ಮಹಾಋಷಿಯ ದಯೆ ಕಣಾ ಕರುಣೆಯಂ ಕಲಿತೆನ್!”‌ ಎಂದು ಹೇಳಿ ಅವನ ಮನಸ್ಸನ್ನು ಪರಿವರ್ತನೆ ಮಾಡುತ್ತಾನೆ.

 ಗಾಯಗೊಂಡು ಬಿದ್ದ ಗಂಡು ಪಕ್ಷಿಯನ್ನು ಆರೈಕೆ ಮಾಡಿ ಬಿಡುತ್ತಾನೆ ಆಗ ಆ ಗಂಡು ಹಕ್ಕಿ ಹೆಣ್ಣುಹಕ್ಕಿಯನ್ನು ಸೇರುತ್ತದೆ. ಆಗ ಮರಳಿಬಂದ  ಸಂಗಾತಿಯನ್ನು ಕಂಡು ಹೆಣ್ಣುಹಕ್ಕಿಯ ದುಃಖ ಅಳಿದು ಅದೂ ಸಂತೋಷಪಡುತ್ತದೆ. ಕುವೆಂಪು ಮೂಲ ಕಾವ್ಯದಲ್ಲಿರುವ ವಾಲ್ಮೀಕಿಯನ್ನು ಇಲ್ಲಿ ಹೇಗೆ ಬದಲಾಯಿಸಿದ್ದಾರೆ ಗಮನಿಸಬೇಕು. ಈ ಘಟನೆಯ ಮೂಲಕ ಕುವೆಂಪು ಕಟ್ಟಿಕೊಡುವ ತಾತ್ವಿಕತೆ ಏನೆಂದರೆ, “ಮನುಷ್ಯರು ತಪ್ಪುಗಳನ್ನು ಮಾಡುವುದು ತಿಳಿವಳಿಕೆಯ ಕೊರತೆಯಿಂದ. ಇದಕ್ಕೆ ಪರಿಹಾರ ಶಿಕ್ಷಣವೇ ಹೊರತು ಶಿಕ್ಷೆಯಲ್ಲ” ಎಂಬುದು. ಈ ಕಾರಣದಿಂದಲೇ ಕುವೆಂಪು ಅವರ ವಾಲ್ಮೀಕಿ ಶಿಕ್ಷೆಯ ಬದಲು ಶಿಕ್ಷಣ ಕೊಡಲು ಮುಂದಾಗುತ್ತಾನೆ. ಆ ಮೂಲಕ ಮಾದರಿ ವ್ಯಕ್ತಿಯಾಗಿ ನಮ್ಮ ಮನಸ್ಸನ್ನು ಗೆಲ್ಲುತ್ತಾನೆ.

ಹೀಗೆ ರಾಮಾಯಣವನ್ನು ರಚಿಸಿದನೆಂದು ಹೇಳಲಾಗುವ ವಾಲ್ಮೀಕಿ ನಿತ್ಯವೂ ಪರಿವರ್ತನೆಗೆ ಒಳಗಾಗುವ ಒಂದು ವ್ಯಕ್ತಿತ್ವ. ಒಂದು ಕೃತಿಯ ರಚನಕಾರನೇ ಆ ಕೃತಿಯಲ್ಲಿ ಒಂದು ಪಾತ್ರವಾಗಿ ಬರುವುದೂ ರಾಮಾಯಣದದ ಒಂದು ವೈಶಿಷ್ಟ್ಯ. ಹೀಗೆ ರಾಮಾಯಣವನ್ನೂ ಅದರ ಕರ್ತೃ ಎನ್ನಲಾಗುವ ವಾಲ್ಮೀಕಿಯನ್ನೂ ಕಾಲಕ್ಕೆ ತಕ್ಕಂತೆ ಪರಿವರ್ತಿಸಿಕೊಳ್ಳುವುದೇ ನಾವು ವಾಲ್ಮೀಕಿಗೆ ಮಾತ್ರವಲ್ಲ ನಮ್ಮ ಬಹುಮುಖ್ಯ ಸಾಂಸ್ಕೃತಿಕ ಪಠ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಿಗೆ ಕೊಡುವ ನಿಜವಾದ ಗೌರವ. ಆ ಕೆಲಸವನ್ನು ನಾವೆಲ್ಲ ಮಾಡೋಣ.

ರಾಮನಿಗಷ್ಟೇ ಏಕೆ ವಾಲ್ಮೀಕಿಗೂ ಉಂಟು ಮಂದಿರ!


ಅಂದಹಾಗೆ ರಾಮನಿಗಾಗಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಿರುವುದು ಸಾಂಸ್ಕೃತಿಕಕ್ಕಿಂತ ರಾಜಕೀಯ ಕಾರಣಕ್ಕಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ರಾಮಾಯಣದ ಕರ್ತೃ ಎನ್ನಲಾಗುವ ವಾಲ್ಮೀಕಿಗೂ ಅಷ್ಟೇ ಭವ್ಯವಾದ ಮಂದಿರವೊಂದು ಭಾರತದಲ್ಲಿ ಇರುವುದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಇದು ಇರುವುದು ಈಗಿನ ಪಂಜಾಬ್‌ ರಾಜ್ಯದಲ್ಲಿ. ʼವಾಲ್ಮೀಕಿ ತೀರ್ಥʼ ಎಂದು
ಕರೆಯಲಾಗುವು ಈ ಸ್ಥಳ ಭಾರತ ಪಾಕಿಸ್ತಾನದ ಅಟಾರಿ ವಾಘಾ ಗಡಿಗೆ ಸಮೀಪವಿದೆ. ಅಲ್ಲಿ ನಿರ್ಮಾಣವಾಗಿರುವ ಈ ಮಂದಿರದ ಸ್ಥಳದಲ್ಲಿಯೇ ವಾಲ್ಮೀಕಿ ಆಶ್ರಮ ಇತ್ತೆಂದೂ ತುಂಬು ಗರ್ಭಿಣಿಯಾದ ಹೆಂಡತಿಯನ್ನು ಕಾಡಿಗೆ ಅಟ್ಟಿ ಶ್ರೀರಾಮ ಕೈತೊಳೆದುಕೊಂಡಮೇಲೆ ಸೀತೆ ಇಲ್ಲಿಯೇ ಆಶ್ರಯ ಪಡೆದಳೆಂದೂ ಜನರ ನಂಬಿಕೆ. ಲವ ಕುಶರು ಇಲ್ಲಿಯೇ ಹುಟ್ಟಿದರೆಂದು ಹೇಳುವುದಕ್ಕೆ ಸಾಕ್ಷಿ ಎಂಬಂತೆ ಮಂದಿರದ ಹತ್ತಿರವೇ ಲವಕುಶಮಂದಿರವೂ ಇದೆ. ಪ್ರಶಾಂತ ವಾತಾವರಣದಲ್ಲಿರುವ ಈ ಮಂದಿರ ನೋಡಲು ತುಂಬಾ ಸುಂದರವಾಗಿದೆ. ಆ ಕಡೆ ಹೋದರೆ ಒಂದು ಸಲ ನೋಡಿಬನ್ನಿ.

ಕೊನೆಯ ಮಾತು: ಈ ಲೇಖನದ ತಲೆಬರೆಹವಾಗಿ ಕೇಳಲಾದ ಪ್ರಶ್ನೆ ʼವಾಲ್ಮೀಕಿ ಎಂಬ ಋಷಿ ವಾಸ್ತವದಲ್ಲಿ ಇದ್ದನೇʼ ಎಂಬುದಕ್ಕೆ ಉತ್ತರವೇನೆಂದರೆ ʻಇದ್ದʼ ಅಂದುಕೊಂಡರೆ ಇದ್ದ; ʻಇಲ್ಲʼ ಅಂದುಕೊಂಡರೆ ಇಲ್ಲ ಅಷ್ಟೆ!

ಡಾ ರಾಜೇಂದ್ರ ಬುರಡಿಕಟ್ಟಿ

೦೭-೧೦-೨೦೨೫

(ವಾಲ್ಮೀಕಿ ಜಯಂತಿ ದಿನ)

Sunday, October 5, 2025

Dwarka – The Divine Land!

Dwarka – The Divine Land!

According to the Mahabharata, Sri Krishna, the divine incarnation who lived among men, was cursed with three fates: 1) He must meet death at the hands of an ordinary man. 2) His own Yadava clan must fight amongst themselves and perish. 3) His golden city, Dwarka, must submerge into the sea. All three curses eventually came true, marking the end of the Dwapara Yuga and the beginning of the Kali Yuga.

Thus, the ancient city of Dwarka, richly described in the Bhagavata and the Mahabharata, is believed to have submerged in the sea. A reconstructed city now exists on the western coast of present-day Gujarat, along the Arabian Sea. Located just about 100 kilometers from Karachi (now in Pakistan), this ancient city holds a highly significant place in India’s devotional traditions. 


Today, the sacred land of Dwarka is divided into two parts: Gomati Dwarka – the modern city. Bet Dwarka – an island believed to be the site of Krishna’s original golden city. Gomati Dwarka lies at the point where the Gomati River meets the Arabian Sea. Its most famous temple is the Dwarkadhish Temple, a vital pilgrimage center for devotees. Nearby, one can also find the Swaminarayan Temple and the original Rukmini Temple. Pilgrims usually bathe in the sacred waters of Gomati Ghat before seeking darshan (divine audience) of Lord Dwarkadhish. 

The small hanging bridge over the Gomati River, known as Sudama Setu, is a beautiful architectural attraction. Sitting by the seashore during sunset, the gentle breeze not only soothes the body and mind but also fills one with a peaceful serenity. After exploring the places around Gomati Dwarka, one can proceed to Bet Dwarka, located around 30 km away. Formerly only accessible by boat, a grand hanging bridge named “Sudarshan Setu” was recently built (just 2-3 years ago), providing road connectivity to the island.

Bet Dwarka is believed to be the original golden city that submerged into the ocean at the end of the Dwapara Yuga. In the Kali Yuga, a new temple dedicated to Dwarkadhish was built here as well, attracting thousands of devotees. While spiritual seekers receive divine bliss from Dwarkadhish’s darshan, worldly travelers are mesmerized by the majestic Sudarshan Setu and the vast blue Arabian Sea. On the way from Gomati Dwarka to Bet Dwarka, one can visit three major spots: Rukmini Devi Temple, Nageshwar Jyotirlinga and Gopi Talav.

Rukmini Devi Temple, dedicated to Rukmini, Krishna's chief consort, this temple features ancient stone carvings and classic architectural beauty. Many legends, including Krishna and Rukmini’s marriage and the curse by sage Durvasa, are associated with this place – stories widely referenced in Indian scriptures. 

Nageshwar Jyotirlinga, One of the twelve Jyotirlingas in India and a highly revered shrine. Local belief says that Shiva and Parvati appeared here in the form of serpents as Nageshwara and Nagini, displaying their divine play. A massive Shiva idol here is extremely impressive — larger than the similar statues found in Visakhapatnam (Andhra Pradesh) and Shivamogga (Karnataka).

Gopi Talav (Gopi Lake)

The name “Talav” means pond or lake. This site has two important mythological associations: In one, Sri Krishna's famous Ras Leela with 16,000 gopis (cowherd maidens) is said to have taken place before the Mahabharata war. The gopis, feeling spiritually fulfilled after their dance with Krishna, requested to merge with the sacred soil. With Krishna’s consent, they voluntarily gave up their lives in this lake. The soil here is soft and yellowish-white, similar to sandalwood paste, and is called Gopi Chandan, often used by devotees for applying tilak on their foreheads.

In another version, after the Mahabharata war, Arjuna became overly proud of his valor, believing the victory was solely due to his strength. To humble him, Krishna entrusted him with the responsibility of escorting the widows of the fallen Kaurava warriors, including Bhānumati, wife of Duryodhana, to Dwarka for their safety. As Arjuna was leading the women, just a short distance from present-day Bet Dwarka, a group of tribal people attacked. Surprisingly, Arjuna could not protect the women. Realizing they might fall into the hands of their enemies, the women — valuing honour over life — chose to sacrifice themselves by jumping into the lake. Today, this lake and the nearby Gopinath Temple offer a peaceful, yet poignant reminder of that story.

I had always longed to visit this ancient city so vividly described in our Puranas. Over the past two days, I had the fortune of visiting all these sacred places and feel truly blessed. I was accompanied by Akash, a young friend and Marketing Manager from Mumbai who hails from Madhya Pradesh. His presence helped ease the loneliness I might have otherwise felt.

Despite not being particularly religious or a devoted believer, and having a rational, even atheistic mindset, I still found immense peace and joy in Dwarka. That being the case, for true believers and devoted pilgrims, there is no doubt that a visit to Dwarka will be a deeply divine, joyous, and spiritually fulfilling experience.

Dr. Rajendra Buradikatti
Dwarka, Gujarat
28-09-2025

A Momentous Visit to Mahatma's Birthplace

Apart from the period of the Mahabharata war, the ancient and mythological city of Dwarka is deeply associated with Lord Krishna’s life during the pre-war and post-war times. After visiting the city, I boarded a private bus the next morning from Dwarka to Somnath, beginning my journey to Porbandar — a place I had long wished to visit.

My main purpose in visiting Porbandar was to see the ancestral house where Mahatma Gandhi was born and raised. However, I was also eager to explore other notable places in and around the town. So, I had set aside half a day for this visit. I planned to explore Porbandar till the afternoon, then proceed to the famous Somnath temple. After visiting the temple, I intended to travel a few more kilometres to Veraval, from where I had to catch a night train to Gandhinagar, the capital of Gujarat. Therefore I left Dwarka at eight in the morning and reached Porbandar around ten.

Three Memorials that Captivated a Dancer’s Heart

My first stop was the museum dedicated to Dr. Savita Didi Mehta, the famous Manipuri dancer who once served as the principal of Aryakanya Gurukul in Porbandar. Dance was the breath of her life; along with her own accomplishments, she had trained many disciples and enriched the art form. The museum displays not only her personal and professional belongings but also rare items reflecting the art, literature, culture, and lifestyle of Saurashtra and Gujarat.

Just as I was about to leave, the young curator — upon learning that I had come all the way from Karnataka — said, “We have a ten-minute documentary about Dr. Savita Didi’s life and achievements. If you have time, I can show it to you.” I was the first visitor of the day, arriving amid light drizzle. She kindly took me into the small gallery and screened the documentary just for me. I thanked both the legendary dancer and the young woman who introduced her to me.


Nearby was the Bharat Mandir, another site worth visiting. It’s a large, pillar-filled hall with no interior walls. Its uniqueness lies in the paintings of great figures from Indian history and mythology depicted on its pillars — sages, kings, saints, and spiritual leaders from ancient and medieval India.

Naturally, I looked to see if anyone from South India was represented, but was disappointed not to find Basavanna, Akka Mahadevi, Thiruvalluvar, or any South Indian kings. History here, it seems, means North Indian history, and religion and culture mean North Indian religion and culture. After a walk around the temple and taking a photo near the statues of a few freedom fighters outside, I left.
Opposite stood the Nehru Planetarium, which was closed that day. Having already seen several planetariums — including at Anand Bhavan in Prayagra and one in Kolkata— I didn’t mind. I took a photo from outside and moved on.

The Grand “Hari Mandir” of Wealthy Devotion

Next, I went to the massive Hari Mandir on the outskirts of town. It’s as magnificent as any large temple elsewhere in India — a place that makes you realize that “devotion is not the poor man’s privilege; it’s the rich man’s luxury.” As I entered amid steady rain, the sounds of bhajans filled the air. Inside, hundreds of devotees, along with musical instruments, were singing devotional songs in unison before the idol of Lord Hari. In a nearby hall, special Navaratri prayers and bhajans were being held.

After listening for a while and offering my respects, I left the temple premises to visit Gandhiji’s birthplace, which was my primary goal in Porbandar. When I asked my guide to take me there, he said, “That memorial remains open all day, sir. Let’s visit Sudama Mandir nearby first.” I agreed.

“Sudama Mandir” — A Temple Turned Dog Shelter
The Sudama Mandir, named after Krishna’s friend Sudama, lies in the heart of the city, about 150 km from Dwarka. By the time we headed there, the drizzle had turned into heavy rain. Since I hadn’t brought an umbrella, I had to buy one — and amusingly, within five minutes of purchase, the rain eased up! Perhaps my umbrella scared it away, I thought.

The temple itself is old and poorly maintained. One section is functional, with idols and ongoing worship, but another adjoining building is dilapidated. Stray dogs lay sleeping everywhere, and the place was quite filthy. The only pleasing sight was a beautiful statue in the garden depicting Krishna embracing Sudama lovingly. I took a photo and left, carefully avoiding the beggars at the entrance — which was no small feat! Because of the weather, I skipped some other nearby sites and headed directly to Kirti Mandir, Gandhi’s birthplace — the true purpose of my visit.

“Kirti Mandir” — The Home Where Bapu Was Born

As you may know, Kirti Mandir is the ancestral home where Mahatma Gandhi was born and raised. Having read his Autobiography in my youth, I was deeply moved by his descriptions of his parents, the Kathiawad region, and his early moral struggles — stealing money, seeking forgiveness, and caring for his ailing father. So, visiting this home was something I eagerly looked forward to. Even as I arrived in light rain, workers were busy erecting a canopy in the courtyard — preparations for the upcoming Gandhi Jayanti event. From afar, the building looks more like a temple than a house, with a tall, gopuram-like structure.

Inside are a few household items, clothing, and photos from Gandhi’s childhood. One room marks the exact spot where Gandhi was born, with a plaque outside identifying it. The experience of walking through those rooms felt profound and humbling. Upstairs are several empty rooms — narrow wooden staircases lead to them. With thoughtful restoration, this could easily become a museum like Kuvempu’s house in Kuppali in Karnataka.

Kasturba’s Home — A Place Full of Sentiment

Behind Kirti Mandir, connected by a narrow lane, stands another house — the birthplace of Kasturba Gandhi. Many visitors overlook it, but it is historically significant. In his autobiography, Gandhi candidly describes his marital relationship, admitting he wasn’t always the best husband. They had their share of quarrels — once, in anger, he even dragged her by the hair and threw her out, a story that still lingers painfully in memory.

The caretaker at Kasturba’s home kindly guided me through every room. The spot where she was born is marked with a swastika symbol, and a portrait of her hangs on the wall. The house, like Gandhi’s, is a multi-storied structure with small, windowless rooms but clever ventilation for natural light. There are wall niches for lamps and hidden compartments for valuables — and, remarkably, an ancient rainwater harvesting system where small channels carry rainwater to a courtyard well. Seeing the depth of that well amazed me!

Since there was no place for writing a note in the visitor book here, I just left my name. But at Gandhi’s house, I wrote a few lines expressing my joy and fulfillment before bowing again to the statues of Gandhi and Kasturba.

The Gujarati Meal Experience

By then, it was lunchtime. My auto driver asked, “Shall I take you to the bus stand, or do you want to see anything else?” I decided to have lunch first and then go. At a nearby hotel, I ordered a Gujarati thali. Being a vegetarian, I usually have trouble finding suitable food in India’s eastern coastal regions, where non-vegetarian dishes dominate. But in the western coastal states — Gujarat, Rajasthan, Punjab — vegetarian food is plentiful.

I expected a simple meal with two chapatis and rice, but the waiter kept serving more — six rotis in total — each time with fresh vegetable palya (sabji). I couldn’t bear to waste food, so I struggled to finish everything! When he finally asked, “Shall I bring the rice now?” I exclaimed, “Oh God, no more!” and left with a smile.


At the Porbandar bus stand, I still had half an hour before my bus to Somnath.I wandered around, admiring wall murals depicting major events from Gandhi’s life. Despite the light rain, my half-day visit to Porbandar had filled me with immense satisfaction.

Dr. Rajendra Buradikatti
03–10–2025



 

Friday, October 3, 2025

ಸುರಿವ ಮಳೆಯಲ್ಲಿʻಸುಧಾಮಪುರಿʼಯ ಸುತ್ತಾಟ!

ಸುರಿವ ಮಳೆಯಲ್ಲಿ ʻಸುಧಾಮಪುರಿʼಯ ಸುತ್ತಾಟ!

ಮಹಾಭಾರತ ಯುದ್ಧಾವಧಿ ಬಿಟ್ಟರೆ ಯುದ್ಧಪೂರ್ವ ಮತ್ತು ಯುದ್ಧೋತ್ತರ ಅವಧಿಯ ಶ್ರೀಕೃಷ್ಣನ ಬದುಕಿನೊಂದಿಗೆ ಬೆಸೆದುಕೊಂಡಿರುವ ಪ್ರಾಚೀನ ಪೌರಾಣಿಕ ನಗರ ದ್ವಾರಕಾ. ಅದನ್ನು ನೋಡಿಕೊಂಡು ಮರುದಿನ ಬೆಳಿಗ್ಗೆ ದ್ವಾರಕಾದಿಂದ ಸೋಮನಾಥಕ್ಕೆ ಹೊರಡುವ ಖಾಸಗೀ ಬಸ್‌ ಹತ್ತಿಕೊಂಡು ನಾನು ಬಹಳ ದಿನದಿಂದ ನೋಡಬೇಕೆಂದು ನಿರೀಕ್ಷೆ ಮಾಡಿದ್ದ ಪೋರಬಂದರಿಗೆ ಹೊರಟೆ. ಅಲ್ಲಿ ಮುಖ್ಯವಾಗಿ ಗಾಂಧೀಜಿಯವರು ಹುಟ್ಟಿಬೆಳೆದ ಅವರ ಪೂರ್ವಜರ ಮನೆಯನ್ನು ನೋಡುವುದು ನನ್ನ ಮುಖ್ಯ ಉದ್ದೇಶವಾಗಿತ್ತಾದರೂ ಅದರ ಜೊತೆ ನೋಡತಕ್ಕ ಇತರೆ ಸ್ಥಳಗಳನ್ನೂ ಅಲ್ಲಿ ನೋಡಬೇಕೆಂಬುದು ನನ್ನ ಆಸೆಯಾಗಿತ್ತು. ಅದಕ್ಕಾಗಿ ನಾನು ಅರ್ಧದಿನವನ್ನು ಗೊತ್ತುಮಾಡಿಕೊಂಡಿದ್ದೆ. ಮಧ್ಯಾಹ್ನದ ವರೆಗೂ ಪೋರಬಂದರ್‌ ನೋಡಿ ಮಧ್ಯಾಹ್ನದ ಮೇಲೆ ಅಲ್ಲಿಂದ ಪ್ರಸಿದ್ಧ ಸೋಮನಾಥ ದೇವಸ್ಥಾನಕ್ಕೆ ಹೋಗಿ ಅದನ್ನು ನೋಡಿಕೊಂಡು ಅಲ್ಲಿಂದ ಎಂಟು ಹತ್ತು ಕಿಲೋಮೀಟರ್‌ ದೂರದಲ್ಲಿರುವ ವೈರಾವಲ್‌ಗೆ ಹೋಗಿ ಅಲ್ಲಿಂದ ಗುಜರಾತ್‌ ರಾಜಧಾನಿ ಗಾಂಧೀನಗರಕ್ಕೆ ಹೊರಡುವ ರೈಲನ್ನು ನಾನು ರಾತ್ರಿ ಹಿಡಿಯಬೇಕಿತ್ತು.  ಬೆಳಿಗ್ಗೆ ಎಂಟಕ್ಕೆ ಧ್ವಾರಕಾ ಬಿಟ್ಟ ನಾನು ಪೋರಬಂದರಿಗೆ ತಲುಪುವಾಗ ಬೆಳಗಿನ ಹತ್ತುಗಂಟೆಯಾಗಿತ್ತು.

ನೃತ್ಯಗಾರ್ತಿಯ ಮನಸೆಳೆಯುವ ಮೂರು ಮಂದಿರಗಳು

ಪೋರಬಂದರಿನಲ್ಲಿ ಬಸ್‌ ಇಳಿದ ಕೂಡಲೇ ನಾನು ಮೊದಲು ನೋಡಲು ಹೋದದ್ದು ತಮ್ಮ ಕಿರಿಯ ವಯಸ್ಸಿನಲ್ಲಿಯೇ ಪೋರಬಂದರನ ಆರ್ಯಕನ್ಯಾ ಗುರುಕುಲದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ, ಭಾರತದ ಪ್ರಸಿದ್ಧ ಮುಣಿಪುರಿ ನೃತ್ಯಗಾರ್ತಿ ಡಾ ಸವಿತಾ ದೀದಿ ಮೆಹತಾ ಅವರ ನೆನಪಿನಲ್ಲಿರುವ ವಸ್ತುಸಂಗ್ರಹಾಲಯವನ್ನು. ನೃತ್ಯವನ್ನು ತಮ್ಮ ಜೀವನದ ಉಸಿರಾಗಿ ಹೊಂದಿದ್ದಾ ಸವಿತಾ ದೀದಿ ತಮ್ಮ ಸಾಧನೆಯ ಜೊತೆಜೊತೆಗೆ ಅನೇಕ ನೃತ್ಯಗಾರರನ್ನು ತಯಾರುಮಾಡಿ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಂಡವರು. 

ಅವರ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಅನೇಕ ಸಲಕರಣೆಗಳ ಜೊತೆಜೊತೆಗೆ ಗುಜರಾತಿನ ಅದರಲ್ಲೂ ಸೌರಾಷ್ಟ್ರ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜನಜೀವನಶೈಲಿಯನ್ನು ಪರಿಚಯಿಸುವ ಅಪರೂಪದ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿದ್ದಾರೆ. ಇವೆಲ್ಲವನ್ನೂ ನೋಡಿಕೊಂಡು ನಾನು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಆ ವಸ್ತುಸಂಗ್ರಹಾಲಯದ ಉಸ್ತುವಾರಿ ಯುವತಿ ನನ್ನನ್ನು ಮಾತನಾಡಿಸಿದಳು. ನಾನು ದೂರದ ಕರ್ನಾಟಕದಿಂದ ಬಂದಿರುವುದನ್ನು ತಿಳಿದ ಅವಳು, “ಡಾ ಸವಿತಾ ದೀದಿ ಅವರ ಜೀವನ ಮತ್ತು ಸಾಧನೆಯನ್ನು ತಿಳಿಸುವ ಹತ್ತು ನಿಮಿಷದ ಸಾಕ್ಷಚಿತ್ರವಿದೆ. ತಮಗೆ ಸಮಯವಿದ್ದರೆ ತೋರಿಸುತ್ತೇನೆ” ಎಂದಳು. ಬೆಳ್ಳಂಬೆಳಗ್ಗೆ ಆಕೆ ಮ್ಯೂಜಿಯಂ ಬಾಗಿಲು ತೆರೆಯುತ್ತಿದ್ದಂತೆ ಚಿಟಿಚಿಟಿ ಮಳೆಯಲ್ಲಿ ಮೊದಲ ಯಾತ್ರಿಕನಾಗಿ ನಾನು ಒಳಗೆ ಕಾಲಿಟ್ಟಿದ್ದೆ. ಅಲ್ಲಿ ನನ್ನನ್ನು ಬಿಟ್ಟರೆ ಇನ್ನೂ ಯಾರೂ ಬಂದಿರಲಿಲ್ಲ. ಆದರೂ ಆಕೆ ಆ ಸಾಕ್ಷಚಿತ್ರ ನೋಡಲು ಮಾಡಿದ ಗ್ಯಾಲರಿಗೆ ನನ್ನನ್ನು ಕರೆದುಕೊಂಡು ಹೋಗಿ ನನ್ನೊಬ್ಬನಿಗೇ ಅದನ್ನು ತೋರಿಸಿದಳು. ಆ ಪ್ರಸಿದ್ಧ ನೃತ್ಯಗಾರ್ತಿಗೆ ಮತ್ತು ಅದನ್ನು ಪರಿಚಯಮಾಡಿಸಿದ ಈ ಯುವತಿಗೆ ಧನ್ಯವಾದ ಸಲ್ಲಿಸಿ ಹೊರಗೆ ಬಂದೆ.

ಸವಿತಾ ದೀದಿ ವಸ್ತುಸಂಗ್ರಹಾಲಯಕ್ಕೆ ಹತ್ತಿರದಲ್ಲಿಯೇ ಇರುವ ಮತ್ತೊಂದು ನೋಡತಕ್ಕ ಸ್ಥಳವೆಂದರ ಅದು ಭಾರತ ಮಂದಿರ. ಇದೊಂದು ದೊಡ್ಡ ಹಾಲ್‌ ಇರುವ ಬಹಳಷ್ಟು ಕಂಬಗಳಿರುವ ಆದರೆ ನಡುವೆ ಎಲ್ಲಿಯೂ ಗೋಡೆಗಳಿಲ್ಲದ ಒಂದು ಮಂದಿರ. ಇದರ ವಿಶೇಷತೆ ಎಂದರೆ ಭಾರತದ ಜನಜೀವನದ ಭಾಗವಾಗಿರುವ, ಇಲ್ಲಿನ ಪುರಾಣ ಇತಿಹಾಸಗಳಲ್ಲಿ ಬರುವ ಅನೇಕ ಮಹಾನ್‌ ವ್ಯಕ್ತಿಗಳ ಚಿತ್ರಗಳನ್ನು ಇಲ್ಲಿನ ಕಂಬಗಳಲ್ಲಿ ಬರೆಸಿರುವುದು. ಪುರಾಣದ ಋಷಿಮುನಿಗಳು, ಇತಿಹಾಸದ ರಾಜರು ಹಾಗೆಯ ಪ್ರಾಚೀನ ಮತ್ತು ಮಧ್ಯಕಾಲೀನ ಭಾರತದ ಧಾರ್ಮಿಕ ಪುರುಷರು ಮಹಿಳೆಯರು ಚಿತ್ರಿತರಾಗಿರುವ ಈ ಮಂದಿರದಲ್ಲಿ ದಕ್ಷಿಣ ಭಾರತದ ಯಾರಾದರೂ ಇದ್ದಾರೆಯೇ ಎಂದು ಸಹಜವಾಗಿ ಹುಡುಕಾಡಿದೆ. ಆದರೆ ಆ ವಿಷಯದಲ್ಲಿ ತುಸು ನಿರಾಶೆಯಾಯಿತು.


ಬಸವಣ್ಣ, ಅಕ್ಕಮಹಾದೇವಿ, ತಿರುವಳ್ಳರ್‌, ಅವರಂತಹ ಸಂತರಾಗಲೀ ವಿಜಯನಗರ ಸೇರಿದಂತೆ ಯಾವುದೇ ಪ್ರಸಿದ್ಧ ರಾಜರಾಗಲಿ ಅಲ್ಲಿ ನನಗೆ ಕಾಣಲಿಲ್ಲ. ಇತಿಹಾಸ ಎಂದರೆ ಅದು ಉತ್ತರ ಭಾರತದ ರಾಜರ ಇತಿಹಾಸ. ಧರ್ಮ-ಸಂಸ್ಕೃತಿ ಅಂದರೆ ಅದು ಉತ್ತರ ಭಾರತದ ಧರ್ಮ-ಸಂಸ್ಕೃತಿ ಎಂಬ ತಿಳಿವಳಿಕೆ ಇದಕ್ಕೆ ಕಾರಣ ಇದ್ದರೂ ಇದ್ದೀತು. ಭಾರತ ಮಂದಿರದಲ್ಲಿ ಒಂದು ಸುತ್ತುಹಾಕಿಕೊಂಡು ಹೊರಗಡೆ ಆವರಣದಲ್ಲಿ ನಿಲ್ಲಿಸಿರುವ ಕೆಲವು ಸ್ವಾತಂತ್ರ್ಯಹೋರಾಟಗಾರರ ಮೂರ್ತಿಗಳ ಹತ್ತಿರ ನಿಂತು ಒಂದು ಪೋಟೋ ಹೊಡೆದುಕೊಂಡು ಹೊರಬಂದೆ. ಭಾರತ ಮಂದಿರದ ಎದುರಿಗೇ ನೆಹರೂ ತಾರಾಮಂದಿರ ಇತ್ತು. ಅದಕ್ಕೆ ಅಂದು ರಜೆಯ ದಿನವಾಗಿದ್ದರಿಂದ ತೆರೆದಿರಲಿಲ್ಲ. ತಾರಾಮಂದಿರಗಳನ್ನು ನಾನು ಈಗಾಗಲೇ ಕೋಲ್ಕತ್ತಾ, ಪ್ರಯಾಗ್‌ರಾಜ್‌ ನ ನೆಹರೂ ಅವರ ಮನೆ ʼಆನಂದಭವನʼ ಮುಂತಾದ ಅನೇಕ ಕಡೆ ನೋಡಿದ್ದೆನಾದ್ದರಿಂದ ಅದು ತಪ್ಪಿದ್ದಕ್ಕೆ ಬೇಸರವೇನೂ ಆಗಲಿಲ್ಲ. ಹೊರಗಿನಿಂದಲೇ ಒಂದು ಹಾಜರಿಫೋಟೋ ಹೊಡೆದುಕೊಂದು ಅಲ್ಲಿಂದ ಹೊರಟೆ.

ʻಶ್ರೀಮಂತ ಭಕ್ತಿʼಯ ಶ್ರೀಹರಿಮಂದಿರ!

ಭಾರತ್‌ ಮಂದಿರ, ತಾರಾಮಂದಿರ ವಸ್ತುಸಂಗ್ರಹಾಲಯ ಇವುಗಳನ್ನು ನೋಡಿಕೊಂಡು ಊರಿನ ಹೊರಭಾಗದಲ್ಲಿ ಕಟ್ಟಲಾಗಿರುವ ಬೃಹತ್‌ ಹರಿಮಂದಿರಕ್ಕೆ ಹೋದೆ. ಭಾರತದ ಬಹುತೇಕ ಕಡೆ ಹರಿಮಂದಿರಗಳು ಹೇಗೆ ಇವೆಯೋ ಇಲ್ಲಿಯೂ ಅದು ಹಾಗೇ ಭವ್ಯವಾಗಿದೆ. ಭಕ್ತಿ ಎಂಬುದು ಬಡವರದ್ದಲ್ಲ ಅದು ಶ್ರೀಮಂತರದ್ದು ಎನ್ನುವುದನ್ನು ನೋಡಬೇಕೆನಿಸಿದರೆ ನೀವು ಯಾವುದಾರೂ ಒಂದು ಹರಿಮಂದಿರಕ್ಕೆ ಹೋಗಿ ನೋಡಬೇಕು! ನಾನು ಅಲ್ಲಿಗೆ ಹೋದಾಗ ಜಿಟಿಜಿಟಿ ಮಳೆ ಇನ್ನೂ ಬಿಟ್ಟಿರಲಿಲ್ಲ. ಹರಿಮಂದಿರದ ಆವರಣವನ್ನು ಪ್ರವೇಶಿಸುತ್ತಿದ್ದಂತೆ ದೊಡ್ಡದಾದ ಭಜನೆ ಧ್ವನಿವರ್ದಕದಲ್ಲಿ ಕೇಳಿಬರುತ್ತಿತ್ತು.

ಒಳಹೋಗಿ ನೋಡಿದಾಗ ಹರಿಯ ಮೂರ್ತಿ ಇರುವ ಬೃಹತ್‌ ಆದ ಸಭಾಮಂಟಪದಲ್ಲಿ ನೂರಾರು ವಟುಗಳು ಸಾಮೂಹಿಕವಾಗಿ ವಾಧ್ಯಗಳ ಸಮೇತ ಭಜನೆಯಲ್ಲಿ ತೊಡಗಿದ್ದರು. ಹಾಗೆ ಅದನ್ನೆಲ್ಲ ನೋಡಿಕೊಂಡು ಶ್ರೀಹರಿಗೆ ಒಂದು ನಮಸ್ಕಾರವನ್ನೂ ಹಾಕಿ ಆ ಕಟ್ಟಡದ ಪಕ್ಕದ ಇನ್ನೊಂದು ಕಟ್ಟಡದಲ್ಲಿ ನವರಾತ್ರಿಯ ಅಂಗವಾಗಿ ನಡೆಯುತ್ತಿದ್ದ ವಿಶೇಷ ಪೂಜೆ ಮತ್ತು ಭಜನೆ ನಡೆಯುತ್ತಿದ್ದದ್ದನ್ನೂ ನೋಡಿಕೊಂಡು ಒಂದಿಷ್ಟು ಹೊತ್ತು ಅದನ್ನು ಆಲಿಸಿ ಆವರಣದಲ್ಲಿ ಒಂದು ಸುತ್ತುಹಾಕಿ ಹೊರಬಂದೆ. ನಾನು ಮುಖ್ಯವಾಗಿ ಪೋರಬಂದರಿನಲ್ಲಿ ಗಾಂಧೀಜಿ ಅವರು ಹುಟ್ಟಿಬೆಳೆದ ಮನೆಯನ್ನು ನೋಡಬೇಕಾಗಿತ್ತು.

ಅಲ್ಲಿಗೆ ಕರೆದೊಯ್ಯಲು ನನ್ನ ಮಾರ್ಗದರ್ಶಕನಿಗೆ ಹೇಳಿದಾಗ ಆತ ʻಆ ಮಂದಿರ ದಿನವಿಡಿ ತೆರೆದಿರುತ್ತದೆ ಸಾರ್‌ ಹತ್ತಿರದಲ್ಲಿಯೇ ಸುಧಾಮ ಮಂದಿರ ಇದೆ ಅದನ್ನು ನೋಡಿಕೊಂಡು ಹೋಗೋಣʼ ಎಂದು ಹೇಳಿದ. ʼಸರಿ ಎಂದು ಅತ್ತ ಹೇಳಿದ ಕಡೆಗೇನೇ ಹೊರಟೆವು.

ಬೀದಿನಾಯಿಗಳ ಆವಾಸವಾಗಿರುವ ʻಸುಧಾಮ ಮಂದಿರ!”

ʻಸುಧಾಮಮಂದಿರʼ ಪೌರಾಣಿಕ ಕೃಷ್ಣನ ಸ್ನೇಹಿತನಾದ ಸುಧಾಮನ ಹೆಸರಿನಲ್ಲಿರುವ ಮಂದಿರ. ಕೃಷ್ಣನ ದ್ವಾರಕೆಗೂ ಇಲ್ಲಿಗೂ ಸುಮಾರು ಒಂದು ನೂರಾ ಐವತ್ತು ಕಿಲೋಮೀಟರ್‌ ದೂರ. ನಾನು ಪೋರಬಂದರಿನಲ್ಲಿ ಇಳಿಯುತ್ತಿದ್ದಂತೆ ಸಣ್ಣದಾಗಿ ಶುರುವಾದ ಮಳೆ ಬರುಬರುತ್ತಾ ಬಿರುಸಾಗತೊಡಗಿತು.  ಈ ಸುಧಾಮ ಮಂದಿರಕ್ಕೆ ಹೊರಡುವಾಗಲಂತೂ ಜೋರಾಗಿಯೇಬಿಟ್ಟಿತು. ಮಳೆಗಾಲವಲ್ಲದ ಕಾರಣ ಛತ್ರಿರಹಿತನಾಗಿ ಹೋಗಿದ್ದ ನನಗೆ ಅನಿವಾರ್ಯವಾಗಿ ಅಲ್ಲಿ ಛತ್ರಿಯೊಂದನ್ನು ಕೊಳ್ಳಬೇಕಾಗಿ ಬಂತು. ಆಶ್ಚರ್ಯವೆಂದರೆ ನಾನು ಛತ್ರಿ ಕೊಂಡು ಐದು ನಿಮಿಷಕ್ಕೇ ಮಳೆ ಸಣ್ಣದಾಗತೊಡಗಿತಾದರೂ ಸಂಪೂರ್ಣ ನಿಲ್ಲಲಿಲ್ಲ. ನನ್ನ ಛತ್ರಿಗೆ ಹೆದರಿರಬೇಕು ಅಂದುಕೊಂಡು ಸುಧಾಮ ಮಂದಿರದ ಕಡೆ ಹೊರಟೆ.

ಸುಧಾಮ ಮಂದಿರ ಒಂದು ಹಳೆಯ ಕಟ್ಟಡ. ಪಟ್ಟಣದ ಹೃದಯ ಭಾಗದಲ್ಲಿರುವ ಈ ಮಂದಿರ ಸ್ವಚ್ಛತೆಯ ದೃಷ್ಟಿಯಿಂದ ಬಹಳ ಕೆಟ್ಟದ್ದಾಗಿದೆ. ಬಹುಶಃ ಆತ ಹುಟ್ಟಿ ಬೆಳೆದಿರಬಹುದಾದ ಮನೆಯೂ ಇದು ಆಗಿದ್ದೀತು. ಎದರು ಬದರು ಇರುವ ಎರಡು ಕಟ್ಟಡಗಳಲ್ಲಿ ಒಂದರಲ್ಲಿ ಮಾತ್ರ ಮೂರ್ತಿಯಿದ್ದು ಪೂಜೆ ಇತ್ಯಾದಿ ನಡೆಯುತ್ತಿವೆ. ಅದರ ಮುಂದಿರುವ ಕಟ್ಟಡ ಹಾಳುಬಿದ್ದಿದೆ. ನಾನು ಹೋದಾಗ ಅಲ್ಲಿ ಎಲ್ಲೆಂದರಲ್ಲಿ ನಾಯಿಗಳು ಮಲಗಿಕೊಂಡಿದ್ದವು. ಗಲೀಜು ಕೂಡ ಸಾಕಷ್ಟು ಇತ್ತು. ಈ ದುರ್ಗತಿಯ ಸ್ಥಿತಿಯ ಕಟ್ಟಡವನ್ನು ನೋಡಿ ಹೊರಬರುವಾಗ ಅಲ್ಲಿ ಕಟ್ಟಡದ ಮುಂದಿನ ಹೂತೋಟದಲ್ಲಿ ಸ್ಥಾಪಿತವಾಗಿರುವ, ಕೃಷ್ಣನ್ನು ಪ್ರೀತಿಯಿಂದ ತನ್ನ ಗೆಳೆಯ ಸುಧಾಮನನ್ನು ಅಪ್ಪಿಕೊಂಡಿರುವ ಒಂದು ಆಕರ್ಷಕವಾದ ಮೂರ್ತಿ ಮಾತ್ರ ಖುಷಿಕೊಟ್ಟಿತು. ಅಲ್ಲೊಂದು ಫೋಟೋ ತೆಗೆದುಕೊಂಡು ಹೊರಟೆ. ಸುಧಾಮ ಮಂದಿರದ ಮುಂದೆ ಕಾಡುವ ಬಿಕ್ಷುಕರನ್ನು ತಪ್ಪಿಸಿಕೊಂಡು ಹೊರಡುವುದೂ ಒಂದು ಸಾಹಸವೇ ಎನ್ನಬೇಕು!

ಮಳೆಯ ಕಾರಣದಿಂದ ಮೈಕೈ ಬಿಚ್ಚಿ ತಿರುಗಾಡುವ ವಾತಾವರಣವೇ ಇಲ್ಲದ ಕಾರಣ ಅನುಕೂಲವಿದ್ದಿದ್ದರೆ ನೋಡಬಹುದಾಗಿದ್ದ ಕೆಲವು ಸ್ಥಳಗಳನ್ನು ರದ್ದುಪಡಿಸಿ ನಾನು ಗಾಂಧೀಜಿಯವರು ಹುಟ್ಟಿಬೆಳೆದ ಮನೆಯನ್ನು ನೋಡಲು ಹೊರಟೆ. ಅದು ನನ್ನ ಪೋರಬಂದರ್‌ ಭೇಟಿಯ ಪುಮುಖ ಉದ್ದೇಶವೇ ಆಗಿದ್ದರಿಂದ ಅದನ್ನು ನಾನು ತಪ್ಪಿಸಿಕೊಳ್ಳುವಂತೆಯೇ ಇರಲಿಲ್ಲ. ಮಧ್ಯಾಹ್ನ ಮೂರು ಗಂಟೆಗೆ ನಾನು ಅಲ್ಲಿಂದ ಸೋಮನಾಥಕ್ಕೆ ಸೋಮನಾಥಮಂದಿರವನ್ನು ನೋಡಲು ಬೇರೆ ಹೊರಡುವುದು ನಿಗಧಿಯಾಗಿತ್ತು.

ನನ್ನ ಮಾರ್ಗದರ್ಶಕ ಪೋರಬಂದರಿನ ಕೆಲವು ದೊಡ್ಡ ರಸ್ತೆಗಳನ್ನು ಹಾದು ಚಿಕ್ಕ ರಸ್ತೆಗಳಿಗೆ ಪ್ರವೇಶಿಸಿ ಒಳಗೆ ಒಳಗೆ ಹೋಗುತ್ತಾ ಅತ್ಯಂತ ಚಿಕ್ಕದಾದ ಮುಡಕಿಯಂತಹ ದಾರಿಗಳ ಮೂಲಕ ಸುತ್ತೂಬಳಸಿ ಮಾರುಕಟ್ಟೆಯ ಮಧ್ಯದ ಒಂದು ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಬಂದು, ʼಅದೋ ಅಲ್ಲಿ ಕಾಣುತ್ತೆ ನೋಡಿ ಎತ್ತರವಾದ ಒಂದು ಕಟ್ಟಡ. ಅದೇ ಗಾಂಧೀಜಿ ಅವರು ಹುಟ್ಟಿದ ಮನೆ ಕೃತಿಮಂದಿರ. ಅಲ್ಲಿಗೆ ಆಟೋ ಹೋಗೋದಿಲ್ಲ. ನಾನು ಇಲ್ಲಿಯೇ ಕಾಯುತ್ತಿರುತ್ತೇನೆ ನೀವು ಹೋಗಿ ಬನ್ನಿʼ ಎಂದು ನನ್ನನ್ನು ಇಳಿಸಿದ. ಅವನು ತೋರಿಸಿದ ಕಟ್ಟಡ ಸ್ವಲ್ಪವೇ ದೂರದಲ್ಲಿದ್ದರೂ ಅದಕ್ಕೆ ಹೋಗಲು ಇದ್ದದ್ದು ಆಟೋ ಕೂಡ ಹೋಗಲಾರದಷ್ಟು ಕಿರಿದಾದ ದಾರಿ! ಇವನು ನನ್ನನ್ನು ಕರೆತಂದದ್ದು ಯಾವುದೋ ಬೇರೆ ದಾರಿಯಿರಬೇಕು. ಆ ಕಟ್ಟಡಕ್ಕೆ ಬರಲು ವಿಶಾಲವಾದ ದಾರಿ ಬೇರೆ ಕಡೆಯಿಂದ ಇರಬಹುದು ಎಂಬುದು ನನ್ನ ಎಣಿಕೆಯಾಗಿತ್ತು. ಆದರೆ ಅಲ್ಲಿ ಹೋಗಿ ನೋಡಿದಾಗ ಆ ಮನೆಗೆ ಹೋಗಲು ನಾನು ಹೋದ ಕಿರಿದಾದ ದಾರಿಯೇ ಇದ್ದದ್ದರಲ್ಲಿ ದೊಡ್ಡದಾಗಿತ್ತು!

ಬಾಪು ಹುಟ್ಟಿ ಬೆಳದ ʻಕೃತಿಮಂದಿರʼ

ಕೃತಿಮಂದಿರʼ ಮೊದಲೇ ಹೇಳಿದಂತೆ ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರು ಹುಟ್ಟಿಬೆಳೆದ ಅವರ ಪೂರ್ವಜರ ಮನೆ. ನನ್ನ ಯೌವನದ ಆರಂಭಿಕ ದಿನಗಳಲ್ಲಿ ಗಾಂಧೀಜಿಯವರ ಆತ್ಮಕಥೆಯನ್ನು ಓದಿದ್ದ ನನಗೆ ಅವರು ಆರಂಭದ ಪುಟಗಳಲ್ಲಿ ಕೊಡುವ ಅವರ ಪೂರ್ವಜರ ವಿವರಗಳು ತಂದೆ ತಾಯಿಗಳ ಗುಣಸ್ವಭಾವಗಳು ಕಾಥೇವಾಡ ಪ್ರದೇಶದ ವಿವರಣೆ ಇತ್ಯಾದಿ ತುಂಬಾ ಮನಸ್ಸಿಗೆ ನಾಟಿದ್ದವು. ಅವರು ತಮ್ಮ ತಾಯಿಯ ಧಾರ್ಮಿಕ ಸ್ವಭಾವ ಅವರ ದೈನಿಂದಿನ ಜೀವನಶೈಲಿ ಇತ್ಯಾದಿಗಳನ್ನು ಕಟ್ಟಿಕೊಟ್ಟ ಬಗೆ ಬಹಳ ಹಿಡಿಸಿದ್ದವು. ಬಾಲ್ಯದಲ್ಲಿ ಅವರು ಮದುವೆಯಾದದ್ದು ಕಾಮಾಸಕ್ತಿಯಿಂದ ರೋಗ ಮತ್ತು ವೃದ್ಧಾಪ್ಯದಿಂದ ನರಳುವ ತಂದೆಯನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ದಕ್ಕೆ ಅವರು ಪಡುವ ಪಾಶ್ಚಾತ್ತಾಪ ಮನಸ್ಸನ್ನು ಕರಗಿಸಿತ್ತು. ಅಪ್ಪನ ಜೇಬಿನಿಂದ ದುಡ್ಡು ಕದ್ದದ್ದು ಅದನ್ನು ಹೇಳಲಾಗದೆ ಹಾಳೆಯಲ್ಲಿ ಬರೆದು ಅಪ್ಪನಿಂದ ಕ್ಷಮೆ ಕೇಳಿದ್ದು ಈ ಘಟನೆಗಳು ಇವತ್ತಿಗೂ ನನ್ನ ಮನಸ್ಸಿನಿಂದ ಹೊರಹೋಗಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಅವರು ಆರಂಭಿಕ ಜೀವನವನ್ನು ಕಳೆದ ಈ ಮನೆಯನ್ನು ನೋಡಲು ನಾನು ಸಹಜವಾಗಿಯೇ ತೀವ್ರಾಸಕ್ತನಾಗಿದ್ದೆ ಎಂದು ಬೇರೆ ಹೇಳಬೇಕಾಗಿಲ್ಲ.

ನಾನು ಕೃತಿಮಂದಿರಕ್ಕೆ ಹೋದಾಗ ಮಳೆ ಸಣ್ಣದಾಗಿ ಹನುಕುತ್ತಲೇ ಇತ್ತು. ಈ ಮನೆಯು ಆ ಕಾಲದ ಅನುಕೂಲಸ್ಥರ ಮನೆಯೇ ಆಗಿದ್ದು ಸಾಕಷ್ಟು ದೊಡ್ಡದಿದೆ. ಮನೆಯ ಸುತ್ತಮುತ್ತ ಮುಂಭಾಗದಲ್ಲಿ ಜಾಗೆ ಇಲ್ಲವಾದರೂ ಮುಂಬಾಗಿಲನ್ನು ದಾಟಿದ ಮೇಲೆ ಮುಖ್ಯಮನೆಯ ಮುಂಭಾಗದಲ್ಲಿ ಚಾವಣಿ ಇಲ್ಲದ ದೊಡ್ಡ ಹಜಾರದಂತಹ ವಿಶಾಲವಾದ ಸ್ಥಳವಿದೆ. ಅಲ್ಲಿಕೆಲವು ಕೆಲಸಗಾರರು ತಾತ್ಕಾಲಿಕ ಪೆಂಡಾಲ್‌ ಹಾಕುತ್ತಿದ್ದರು. ನಾನು ಹೋದಾಗ ಶಾಮಿಯಾನಿನ ಮೇಲೆ ತಾಡಪಲ್ಲುಗಳನ್ನು ಎಳೆಯುತ್ತಿದ್ದರು. ಅವೆಲ್ಲವೂ ಇನ್ನೆರಡು ಮೂರು ದಿನಗಳಲ್ಲಿ ನಡೆಯಲಿರುವ ಗಾಂಧೀ ಜಯಂತಿಯ ಕಾರ್ಯಕ್ರಮಕ್ಕಾಗಿ ಅವರು ಮಾಡುತ್ತಿರುವ ವ್ಯವಸ್ಥೆ ಎಂದು ಅರ್ಥವಾಗಲು ನನಗೆ ಬಹಳ ಹೊತ್ತು ಬೇಕಾಗಲಿಲ್ಲ. ಆದರೂ ಅಲ್ಲಿನ ಕೆಲಸಗಾರರನ್ನು ಖಾತರಿಗಾಗಿ ಕೆಳಿದೆ. ಅವರೂ ʼಹೌದುʼ ಎಂದರು.

ಕೃತಿಮಂದಿರವನ್ನು ನಾವು ದೂರದಿಂದ ನೋಡಿದರೆ ಅದು ಮನೆಯೆಂದು ನಮಗೆ ಅನ್ನಿಸುವುದಿಲ್ಲ. ಸಾಮಾನ್ಯವಾಗಿ ಯಾವುದೋ ದೇವಸ್ಥಾನವೇನೋ ಅನ್ನಿಸುತ್ತದೆ. ಏಕೆಂದರೆ ಅದಕ್ಕೆ ದೇವಸ್ಥಾನಕ್ಕೆ ಇರುವಂತೆ ಎತ್ತರವಾದ ಗೋಪುರದಂತಹ ರಚನೆಯಿದೆ. ಮನೆಯ ಆವರಣದಲ್ಲಿ ಚಪ್ಪಲಿ ಬಿಟ್ಟು ನಾನು ಅಲ್ಲಿನ ಒಂದು ಕೊಠಡಿಯಲ್ಲಿ ಸಂಗ್ರಹಿಸಲಾದ ಕೆಲವು ವಸ್ತುಗಳನ್ನು ವೀಕ್ಷಿಸಿದೆ. ಅಷ್ಟೇನೂ ಮಹತ್ವದ ದಾಖಲೆಗಳು ಅಲ್ಲಿಲ್ಲ. ಅವರ ಕೆಲವು ಗೃಹಬಳಕೆಯ ವಸ್ತುಗಳು ಕೆಲವು ಬಟ್ಟೆಬರೆ ಇತ್ಯಾದಿ ಮಾತ್ರ ಅಲ್ಲಿರುವುದು. ಇನ್ನು ಅವರ ಕುಟುಂಬದ, ವಿಶೇಷವಾಗಿ ಗಾಂಧೀಜಿಯವರ ಬಾಲ್ಯಜೀವನಕ್ಕೆ ಸಂಬಂಧಿಸಿದ ಕೆಲವು ಭಾವಚಿತ್ರಗಳು ಆಕರ್ಷಕವಾಗಿವೆ. ಅದರ ಪಕ್ಕದಲ್ಲಿನ ಕೊಠಡಿಯಲ್ಲಿ ಕಛೇರಿಯಿದ್ದು ಅಲ್ಲಿಗೆ ಭೇಟಿ ನೀಡಿದ ನೆನಪಿಗಾಗಿ ಗಾಂಧೀಜಿಯವರ ಜೀವನಕ್ಕೆ ಸಂಬಂಧಿಸಿದ ಯಾವುದಾದರೂ ವಸ್ತುಗಳನ್ನು ನಾವಲ್ಲಿ ಕೊಳ್ಳಬಹುದಾದ ವ್ಯವಸ್ಥೆ ಇದೆ.

ಕೆಳಭಾಗದಲ್ಲಿ ಮನೆಯ ಮಧ್ಯಭಾಗದಲ್ಲಿ ಗಾಂಧೀಜಿ ಮತ್ತು ಕಸ್ತೂರ್ಬಾ ಅವರ ಜೋಡಿ ಪ್ರತಿಮೆಗಳನ್ನು ಇಡಲಾಗಿದ್ದು ಅಲ್ಲಿ ನೆನಪಿಗಾಗಿ ನಾವು ಸುಂದರವಾದ ಒಂದು ಫೋಟೋ ತೆಗೆದುಕೊಳ್ಳಬಹುದು. ಇನ್ನು ಮನೆಯ ಹೊರ ಆವರಣದ ಸುತ್ತಲೂ ಗಾಂಧೀಜಿಯವರ ಬದುಕಿನ ವಿವಿಧ ಮಹತ್ವದ ಘಟನೆಗಳನ್ನು ಬಿಂಬಿಸುವ ಕೆಲವು ಮಹತ್ವದ ಫೋಟೋಗಳನ್ನು ಹಾಕಲಾಗಿದೆ. ಕೆಳಮನೆಗೆ ಮನೆಯ ಬಲಬಾಗದಲ್ಲಿ ಪ್ರವೇಶವಿರುವ ಬಾಗಿಲಿನಿಂದ ಪ್ರವೇಶಿಸಿದರೆ ಅಲ್ಲಿ ಮಹಾತ್ಮಅವರು ಹುಟ್ಟಿದ ಕೋಣೆಯಿದೆ. ಅಲ್ಲಿ ಅವರು ಹುಟ್ಟಿದ ಸ್ಥಳವನ್ನು ಗುರುತುಮಾಡಿದ್ದಾರೆ.  ಕೊಠಡಿಯ ಹೊರಗೆ ಮಹಾತ್ಮಾಗಾಂಧಿ ಈ ಕೊಠಡಿಯಲ್ಲಿಯೇ ಹುಟ್ಟಿದರು ಎಂದು ಬೋರ್ಡನ್ನು ಕೂಡ ಹಾಕಿದ್ದಾರೆ. ಒಳಗೆ ಹೋಗಿ ಸುತ್ತಾಡಿ ಬರುವುದೇ ಒಂದು ವಿಶಿಷ್ಟ ಅನುಭವ.

ಇಷ್ಟನ್ನು ನೋಡಿಕೊಂಡು ನಾವು ಮನೆಯ ಮೇಲ್ಮಹಡಿಗಳಿಗೆ ಏರಬಹುದು. ಮನೆಯು ಬಹಳ ಹಳೆಯ ಕಾಲದ್ದಾಗಿದ್ದು ಅದು ನಮ್ಮಲ್ಲಿರುವಂತೆಯೇ ಅಗಲವಿಲ್ಲದ ಕಿರಿದಾದ ಕಟ್ಟಿಗೆಯ ಮೆಟ್ಟಿಲುಗಳನ್ನು ಹೊಂದಿದೆ. ಮೇಲಿನ ಎರಡು ಮೂರು ಮಹಡಿಗಳಲ್ಲಿ ಅನೇಕ ಕೊಠಡಿಗಳಿವೆಯಾದರೂ ಅವುಗಳಲ್ಲಿ ಏನನ್ನೂ ಇಡಲಾಗಿಲ್ಲ. ಎಲ್ಲ ಖಾಲೀ ಇವೆ. ಪ್ರಯತ್ನಿಸಿದರೆ ಕುಪ್ಪಳಿಯ ಕುವೆಂಪು ಮನೆಯನ್ನು ಮಾಡಿದಂತೆ ಬಹಳಷ್ಟು ಆಕರ್ಷಣೀಯ ವಸ್ತುಸಂಗ್ರಹಾಲಯವನ್ನಾಗಿ ಅದನ್ನು ಮಾಡಬಹುದು ಅನ್ನಿಸಿತು.

ಹಲವು ಔಚಿತ್ಯಗಳ ಕಸ್ತೂರ್ಬಾನಿವಾಸ

ಕೃತಿಮಂದಿರವನ್ನು ನೋಡಿಕೊಂಡು ಆ ಮನೆಯ ಹಿಂಬಾಗಿಲಿನಿಂದಲೇ ಇರುವ ಕಾಲುದಾರಿಯ ಮೂಲಕ ಕೃತಿಮಂದಿರದ ಹಿಂದೆಯೇ ಇರುವ ಇನ್ನೊಂದು ಮನೆಗೆ ನಾವು ಹೋಗಲೇಬೇಕು. ಬಹಳಷ್ಟು ಜನ ಇದನ್ನು ಗಮನಸಿದೇ ಅಥವಾ ಗೊತ್ತಿಲ್ಲದೆ ಅದನ್ನು ನೋಡದೇ ಬಂದುಬಿಡುತ್ತಾರೆ. ಅದೆಂದರೆ ಇಡೀ ಸ್ವತಂತ್ರ ಹೋರಾಟದ ಪಯಣದಲ್ಲಿ ಗಾಂಧೀಜಿಯ ಜೊತೆಗಿದ್ದು ಕೊನೆಗೆ ಈಗಿನ ಮಹಾರಾಷ್ಟ್ರದ ಪುಣೆಯ ಆಗಾಖಾನ್‌ ಸೆರೆಮನೆಯಲ್ಲಿ ತಮ್ಮ ಕೊನೆಯುಸಿರನ್ನು ಎಳೆದ ಗಾಂಧೀಜಿಯವರ ಹೆಂಡತಿ ಕಸ್ತೂರ್ಬಾ ಅವರು ಹುಟ್ಟಿದ ಮನೆ.

ಗಾಂಧೀಜಿ ಅವರು ತಮ್ಮ ಜೀವನ ಚರಿತ್ರೆಯಲ್ಲಿ ಹೆಂಡತಿಯೊಂದಿಗಿನ ತಮ್ಮ ಸಂಬಂಧದ ಬಗ್ಗೆ ಸಾಕಷ್ಟು ವಿವರಣೆಯನ್ನು ನೀಡಿದ್ದಾರೆ. ಅವರ ವಾಸ್ತವದಲ್ಲಿ ಹೆಂಡತಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವ ಒಳ್ಳೆಯ ಗಂಡನೇನೂ ಆಗಿರಲಿಲ್ಲ ಎಂಬುದು ಅವರ ವಿವರಗಳಿಂದಲೇ ತಿಳಿಯುತ್ತದೆ. ಅವರ ಮಧ್ಯೆ ಎಲ್ಲ ಗಂಡಹೆಂಡತಿಯರ ನಡುವೆ ನಡೆಯುವಂತೆ ಸಾಕಷ್ಟು ಜಗಳಗಳು ನಡೆಯುತ್ತಿದ್ದವು. ಒಂದು ಸಲ ಯಾವುದೋ ಕಾರಣಕ್ಕೆ ಜಗಳ ಮಿತಿಮೀರಿ ಗಾಂಧೀಜಿ ತಾಳ್ಮೆ ಕಳೆದುಕೊಂಡು ಹೆಂಡತಿಯ ತಲೆಯ ಕೂದಲನ್ನು ಹಿಡಿದು ಆಕೆಯನ್ನು ದರದರ ಎಳೆದುಕೊಂಡು ಮನೆಯಿಂದ ಹೊರಹಾಕುವ ಘಟನೆಯಂತೂ ನನಗೆ ಈಗಲೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ.

ಕಸ್ತೂರ್ಬಾ ಅವರ ಮನೆಕೂಡ ಒಂದು ಹಳೆಯ ಕಾಲದ ಎರಡು-ಮೂರು ಅಂತಸ್ತುಗಳ ಮನೆ. ಇದಕ್ಕೂ ಕೂಡ ಸರಿಯಾದ ದಾರಿಗಳಿಲ್ಲ. ಮುಡುಕಿಯಂತ ಅಂಕುಡೊಂಕಿನ ದಾರಿಯಲ್ಲಿ ಸುತ್ತುಬಳಸಿ ನಡೆಯುತ್ತಾ ಇದಕ್ಕೆ ಹೋಗಬೇಕು. ಈ ಮನೆಯ ಮುಂದೆ ಕೂಡ ಹಾಕಲಾಗಿರುವ ʻಕಸ್ತೂರ್ಬಾ ಗಾಂಧಿ ಅವರು ಹುಟ್ಟಿದ ಮನೆʼ ಎಂಬ ಬೋರ್ಡು ಓದಿಕೊಂಡು ಮನೆಯ ಒಳಗೆ ಕಾಲಿಡುತ್ತಿದ್ದಂತೆಯೇ ಅಲ್ಲಿನ ಮೇಲ್ವಿಚಾರಕ ನನ್ನನ್ನು ಪ್ರೀತಿಯಿಂದ ಮಾತನಾಡಿಸಿ ಮನೆಯ ಪ್ರತಿಯೊಂದು ಕೊಠಡಿಗೂ ಕರೆದುಕೊಂಡು ಹೋಗಿ ಅವುಗಳ ಪರಿಚಯ ಮಾಡಿಸಿದ. ಕಸ್ತೂರ್ಬಾ ಅವರ ಮನೆಯಲ್ಲಿ ಕೂಡ ಅವರು ತಾಯಗರ್ಭದಿಂದ ಹೊರಬಂದ ಸ್ಥಳವನ್ನು ಸ್ವಸ್ತಿಕ್‌ ಮಾರ್ಕಿನಿಂದ ಗುರುತು ಮಾಡಲಾಗಿದೆ. ಅದರ ಹಿಂದೆ ಗೋಡೆಗೆ ಕಸ್ತೂರ್ಬಾ ಅವರ ಫೋಟೋವೊಂದನ್ನು ಹಾಕಲಾಗಿದೆ. ಅಲ್ಲಿ ಹೋಗಿ ಆ ಮಹಾಚೇತನಕ್ಕೆ ನಮಸ್ಕಾರ ಮಾಡಿ ಮನೆಯ ವಿವಿಧ ಕೋಣೆಗಳನ್ನು ನೋಡಲು ಹೋದೆ.

ಈ ಮನೆಕೂಡ ತುಂಬಾ ಚಿಕ್ಕಚಿಕ್ಕದಾದ ಆದರೆ ಬಹಳಷ್ಟು ಕೋಣೆಗಳಿರುವ ದೊಡ್ಡಮನೆಯೇ. ಈ ಮನೆ ಮತ್ತು ಗಾಂಧೀಜಿಯವರ ಮನೆ ಎರಡಕ್ಕೂ ಅನ್ವಯಿಸಿ ಹೇಳಬಹುದಾದ ಕೆಲವು ಮಾತುಗಳೆಂದರೆ ಈ ಎರಡೂ ಮನೆಗಳ ಅನೇಕ ಕೊಠಡಿಗಳಿಗೆ ಕಿಟಕಿಗಳಿಲ್ಲ. ಆದಾಗ್ಯೂ ಕರೆಂಟು ಇಲ್ಲದ ಆ ಕಾಲದಲ್ಲಿ ಹಗಲು ಸೂರ್ಯನ ಬೆಳಕು ಸಹಜವಾಗಿ ಒಳಬರುವಂತೆ ಕೊಠಡಿಗಳ ವಿನ್ಯಾಸಗಳಿವೆ. ರಾತ್ರಿವೇಳೆ ದೀಪಗಳನ್ನು ಇಡಲು ನಮ್ಮಲ್ಲಿ ಹಳೆಯ ಮನೆಗಳಲ್ಲಿ ಇರುವಂತೆ ಗೋಡೆಗಳಲ್ಲಿ ಚಿಕ್ಕಚಿಕ್ಕ ಗೂಡುಗಳನ್ನೂ ಕಟ್ಟಿಗೆಯ ಕಂಬಗಳಲ್ಲಿ ಕಟ್ಟಿಗೆಯ ಕೈಗಳನ್ನೂ ಮಾಡಿದ್ದಾರೆ. ಬ್ಯಾಂಕ್‌ ಲಾಕರ್‌ ಗಳು ಇಲ್ಲದ ಆ ಕಾಲದಲ್ಲಿ ಮನೆಯ ಒಡವೆ ಮುಂತಾದ ಬೆಲೆಬಾಳುವ ವಸ್ತುಗಳನ್ನು ಇಡಲು ಅಲ್ಲಲ್ಲಿ ಗೋಡೆಗಳಲ್ಲಿ ಗುಪ್ತಗುಂಡಿಗಳಿವೆ. 

ಈ ಎರಡೂ ಮನೆಗಳಲ್ಲಿನ ಬಹುಮುಖ್ಯವಾಗಿ ಗಮನಿಸಬೇಕಾದ ಒಂದು ಅಂಶವೆಂದರೆ ಆ ಕಾಲದಲ್ಲಿಯೇ ಗೋಡೆಯ ಒಳಭಾಗದಲ್ಲಿ ನೀರುಹರಿಯುವ ಚಿಕ್ಕಕಾಲುವೆಗಳನ್ನು ಮಾಡಿ ಆ ನೀರು ಮನೆಯ ಮುಂದಿನ ಹಜಾರದಲ್ಲಿ ನಿರ್ಮಿಸಲಾದ ಒಳಬಾವಿಯನ್ನು ಬಂದು ಸೇರುವಂತೆ ಮಾಡಿರುವುದು! ಈಗಿನ ಮಳೆಕೊಯ್ಲು ಯೋಜನೆಯ ಪ್ರಾಚೀನ ರೂಪವಾದ ಇದನ್ನು ಆ ಕಾಲದಲ್ಲಿಯೇ ಈ ಮನೆಗಳಲ್ಲಿ ಅಳವಡಿಸಿರುವುದು ನಿಜಕ್ಕೂ ಆಶ್ಚರ್ಯವನ್ನುಂಟುಮಾಡುತ್ತದೆ. ಕಸ್ತೂರ್ಬಾ ಅವರ ಮನೆಯ ಹಜಾರದಲ್ಲಿನ ಬಾವಿಯನ್ನು ತೆರದು ನೋಡಿದಾಗ ಅದು ಇರುವ ಆಳವನ್ನು ನೋಡಿ ನಾನು ನಿಜಕ್ಕೂ ಬೆರಗಾದೆ!

ಕಸ್ತೂರ್ಬಾ ಅವರ ಮನೆಯ ಸಂದರ್ಶಕರ ಪುಸ್ತಕದಲ್ಲಿ ವಿವರ ಬರೆಯಲು ಅವಕಾಶವಿದ್ದಿಲ್ಲವಾದ್ದರಿಂದ ಅಲ್ಲಿ ನನ್ನ ಹೆಸರು ವಿವರಗಳನ್ನು ಮಾತ್ರ ಬರೆದೆ. ಆದರೆ ಗಾಂಧೀಜಿಯವರ ಮನೆಯ ಸಂದರ್ಶಕರ ಪುಸ್ತಕದಲ್ಲಿ ವಿವರ ಬರೆಯಲು ಅವಕಾಶವಿತ್ತು. ಈ ಮನೆಯ ಭೇಟಿಯಿಂದ ನನಗಾದ ಆನಂದವನ್ನೂ ಸಾರ್ಥಕ್ಯದ ಭಾವನೆಗಳನ್ನೂ ನನ್ನ ಟಿಪ್ಪಣಿಯಲ್ಲಿ ಬರೆದು ಸಹಿಹಾಕಿ ಅಲ್ಲಿಯೇ ಇದ್ದ ಮಹಾತ್ಮ ಮತ್ತು ಕಸ್ತೂರ್ಬಾ ಅವರ ಮೂರ್ತಿಗಳಿಗೆ ಮತ್ತೊಮ್ಮೆ ನಮಸ್ಕರಿಸಿ ಅಲ್ಲಿಂದ ಹೊರಟೆ. ಹೊರಡುವ ಮುನ್ನ ಮನೆಯ ಮುಂದೆ ನಿಂತು ಇನ್ನೊಮ್ಮೆ ಫೋಟೋ ತೆಗೆದುಕೊಳ್ಳುವುದನ್ನು ಮರೆಯಲಿಲ್ಲ.

ಆಗಲೇ ಮಧ್ಯಾಹ್ನದ ಊಟದ ಸಮಯವಾಗಿತ್ತು. “ಮತ್ತೇನನ್ನಾದರೂ ನೋಡಬೇಕೆ ಅಥವಾ ಬಸ್‌ ನಿಲ್ದಾಣಕ್ಕೆ ಬಿಡಲೇ?” ಎಂದು ನನ್ನ ಆಟೋದವ ಕೇಳಿದ. ನೋಡಲು ಹಜೂರ್‌ ಪ್ಯಾಲೇಸ್‌ ನಂತಹ ಒಂದೆರಡು ಸ್ಥಳಗಳು ಮಾತ್ರ ಉಳಿದಿದ್ದವು. ಆದರೆ ಸೋಮನಾಥಕ್ಕೆ ನಾನು ಸಂಜೆ ಆರೇಳು ಗಂಟೆಗಳ ಒಳಗೆ ತಲುಪಿ ಅಲ್ಲಿ ಸೋಮನಾಥನ ದರ್ಶನ ಮಾಡಿಕೊಂಡು ಅಲ್ಲಿಗೆ ಆರೇಳು ಕಿಲೋಮೀಟರ್‌ ದೂರದಲ್ಲಿರುವ ವೇರಾವಲ್‌ ಗೆ ಹೋಗಿ ಅಲ್ಲಿಂದ ಗುಜರಾತ್‌ ರಾಜಧಾನಿ ಗಾಂಧೀನಗರಕ್ಕೆ ಹೊರಡುವ ರೈಲು ಹಿಡಿಯಬೇಕಿತ್ತು. ಆದ್ದರಿಂದ, “ಮತ್ತೇನೂ ಬೇಡ ಬೀಚ್‌ ಒಂದನ್ನು ತೋರಿಸಿ ಬಸ್‌ ನಿಲ್ದಾಣಕ್ಕೆ ಬಿಟ್ಟುಬಿಡು” ಎಂದು ಅವನಿಗೆ ಹೇಳಿದೆ. ಅವನು ನನ್ನನ್ನು ಗಾಂಧೀಜಿ ಮನೆಯ ಹತ್ತಿರವೇ ಇರುವ ಬೀಚ್‌ ಗೆ ಕರೆದೊಯ್ದ. ವಿಶಾಲ ಅರಬ್ಬೀ ಸಮುದ್ರದ ದೊಡ್ಡದೊಡ್ಡ ತೆರೆಗಳು ಬಂದು ದಂಡೆಗೆ ಅಪ್ಪಳಿಸುವ ನಯನಮನೋಹರ ದೃಶ್ಯವನ್ನು ಕಣ್ತುಂಬಿಕೊಂಡು ನನ್ನ ಪೋರಬಂದರಿನ ಪ್ರವಾಸವನ್ನು ಮುಗಿಸಿದೆ.

ಗುಜರಾತಿ ಊಟದ ಗಮ್ಮತ್ತು!

ಬಸ್‌ ಹತ್ತುವ ಮೊದಲು ಗುಜರಾತಿ ಶೈಲಿಯ ಊಟದ ಹೋಟೆಲ್‌ ಒಂದಕ್ಕೆ ಹೋದೆ. ಮೊಟ್ಟೆಯನ್ನೂ ತಿಂದು ಗೊತ್ತಿಲ್ಲದ ನನಗೆ ಕೆಲವು ಕಡೆ ಆಹಾರದ ಸಮಸ್ಯೆ ಆಗುವುದಿದೆ. ಭಾರತದ ಪೂರ್ವಕರಾವಳಿ ಅಂದರೆ ಬಂಗಾಳಕೊಲ್ಲಿಗೆ ಹೊಂದಿಕೊಂಡಿರುವ ರಾಜ್ಯಗಳು ಓಡಿಸ್ಸಾ ಪಶ್ವಿಮ ಬಂಗಾಳ, ಆಂದ್ರದ ರಾಯಲಸೀಮಾ, ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳು ಮುಖ್ಯವಾಗಿ ಮಾಂಸಾಹಾರಿಗಳೆಂದು ಕರೆಯಲ್ಪಡುವ ಮಿಶ್ರಾಹಾರಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳು. ಇಲ್ಲಿ ನನ್ನಂಥವನಿಗೆ ಆಹಾರದ ಕೆಲಸಮಸ್ಯೆಗಳು ಆಗಿದ್ದು ನಿಜ. ಆದರೆ ಪಶ್ವಿಮ ಕರಾವಳಿಗೆ ಅಂದರೆ ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಿರುವ ಗುಜರಾತ್‌, ರಾಜಸ್ತಾನ, ಮೇಲಿನ ಪಂಜಾಬ್‌ ಮುಂತಾದ ರಾಜ್ಯಗಳು ಶಾಖಾಹಾರಿಗಳನ್ನು ಹೆಚ್ಚಾಗಿ ಹೊಂದಿರುವ ರಾಜ್ಯಗಳು. ಈ ಪ್ರದೇಶಗಳಲ್ಲಿ ಸುತ್ತಾಡುವಾಗ ನನಗೆ ಆಹಾರದ ಆತಂಕ ಇರುವುದೇ ಇಲ್ಲ.

ಈ ಹೊಟೆಲ್‌ನಲ್ಲಿ ಗುಜರಾತಿ ಶೈಲಿಯ ಊಟಕ್ಕೆ ಆರ್ಡರ್‌ ಮಾಡಿದೆ. ನಮ್ಮಲ್ಲಿ ಅನ್ನದ ಜೊತೆಗೆ ಎರಡು ಚಪಾತಿ ಅಥವಾ ಹೊಟ್ಟೆ ಊದಿಸಿಕೊಂಡ ಎರಡು ಪೂರಿಕೊಡುವುದು ವಾಡಿಕೆ. ಆದರೆ ಇಲ್ಲಿ ಗುಜರಾತಿನಲ್ಲಿ ಸಾಮಾನ್ಯವಾಗಿ ಐದು-ಆರು ರೊಟ್ಟಿ ಎರಡು ತರದ ಪಲ್ಯ ಸ್ವಲ್ಪ ಅನ್ನ ಸಾರು  ಸೇರಿದ ಒಂದು ಸಾಮಾನ್ಯ ಊಟವಾಗಿರುತ್ತದೆ. ಇದು ಗೊತ್ತಿಲ್ಲದ ನಾನು ಅವನು ಮೊದಲು ತಂದು ಹಾಕಿದ ಎರಡು ರೊಟ್ಟಿಯೇ ಅಂತಿಮ ಎಂದೂ ಆಮೇಲೆ ಅವನು ಅನ್ನವನ್ನು ತರಬಹುದೆಂದೂ ತಿಳಿದು ಆ ರೊಟ್ಟಿಯ ಜೊತೆಗೆ ಕೊಟ್ಟಿದ್ದ ಎರಡೂ ರೀತಿಯ ಪಲ್ಯಗಳನ್ನೂ ತಿಂದು ಮುಗಿಸಿದ್ದೆ. ಅವನು ಮತ್ತೆ ಎರಡು ರೊಟ್ಟಿ ತಂದು ಹಾಕಿದ. ಅವಕ್ಕೆ ಹೊಸದಾಗಿ ಪಲ್ಯ ತರಿಸಿಕೊಂಡು ತಿನ್ನಬೇಕಾಯಿತು. ಅಲ್ಲಿಗೆ ಹೊಟ್ಟೆ ತುಂಬಿತ್ತು.

ನೀರು ಕುಡಿಯಲು ಹೊಟ್ಟೆಯಲ್ಲಿ ಸ್ವಲ್ವ ಜಾಗ ಇದೆ ಅನ್ನಿಸಿತು. ನೀರು ಕುಡಿಯುಲು ನಾನು ತಲೆ ಮೇಲೆತ್ತಿದಾಗ ನನಗೆ ಗೊತ್ತಿಲ್ಲದಂತೆ ಅವನು ಮತ್ತೆ ಎರಡು ರೊಟ್ಟಿಗಳನ್ನು ನನ್ನ ತಟ್ಟೆಗೆ ತಂದು ಹಾಕಿಹೋಗಿದ್ದ! ಅದಕ್ಕೆ ಪಲ್ಯ ಕೇಳುವ ಮೊದಲೇ ಅವನೇ ಪಲ್ಯವನ್ನೂ ತಂದು ಹಾಕಿದ. ಒಟ್ಟು ಆರು ರೊಟ್ಟಿಯಾಯಿತು. ಊಟದ ತಟ್ಟೆಯಲ್ಲಿ ಆಹಾರ ಬಿಡುವುದಕ್ಕೆ ನನಗೆ ಬಹಳ ಹಿಂಸೆಯಾಗುತ್ತದೆ. ಹಾಗಂತ ಹೊಟ್ಟೆತುಂಬಿದ ಮೇಲೆ ತಿನ್ನುವುದು ಇನ್ನೊಂದು ತರದ ಹಿಂಸೆ. ಮೊದಲಿನ ರೊಟ್ಟಿಗಳನ್ನು ಇಷ್ಟಪಟ್ಟು ತಿಂದಿದ್ದ ನನಗೆ ಇವನ್ನು ಕಷ್ಟಪಟ್ಟು ತಿನ್ನಬೇಕಾಯಿತು. ತಿಂದು ಮುಗಿಸುವುದರೊಳಗೆ ಸಾಕುಸಾಕಾಗಿ ಹೋಯಿತು. ಊಟದ ಸೀಟಿನಿಂದ ಎಬ್ಬಿಸಲು ಯಾರದ್ದಾದರೂ ಸಹಾಯ ತೆಗೆದುಕೊಳ್ಳಬೇಕೋ ಎನ್ನಿಸತೊಡಗಿದಾಗಲೂ ಅವನು ಮತ್ತೆ ಬಂದು ʻಅನ್ನ ತರಲೇ ಎಂದು ಕೇಳಬೇಕೆ? ʼ “ಅಯ್ಯೋ ಭಗವಂತ! ಬೇಡಪ್ಪ” ಎಂದು ಹೊರಬಂದೆ.

ಪೋರಬಂದರಿನ ಬಸ್‌ ನಿಲ್ದಾಣಕ್ಕೆ ಬಂದಿಳಿದಾಗ ಸೋಮನಾಥಕ್ಕೆ ಹೊರಡುವ ನನ್ನ ಬಸ್ಸಿಗೆ ಇನ್ನೂ ಅರ್ಧಗಂಟೆ ಇತ್ತಾದ್ದರಿಂದ ಬಸ್‌ ನಿಲ್ದಾಣದ ಸುತ್ತಾ ಒಂದು ಸುತ್ತುಹಾಕುವಾಗ ಗಾಂಧೀಜಿ ಅವರ ಜೀವನದ ಪ್ರಮುಖ ಘಟನೆಗಳ ಚಿತ್ರಾವಳಿಗಳನ್ನು ಅಲ್ಲಲ್ಲಿ ಅಳವಡಿಸಿದ್ದು ನೋಡುತ್ತಾ ನಿಂತೆ. ಪೋರಬಂದರಿನ ಅರ್ಧದಿನದ ಪ್ರವಾಸ ಚಿಟಿಚಿಟಿಮಳೆಯ ನಡುವೆಯೂ ಸಾಕಷ್ಟು ಖುಷಿಯನ್ನೇ ಕೊಟ್ಟಿತು.

*****

ಡಾ. ರಾಜೇಂದ್ರ ಬುರಡಿಕಟ್ಟಿ

೦೩-೧೦-೨೦೨೫



ಕೊಂದವರುಳಿವರೇ ಕೂಡಲಸಂಗಮದೇವಾ....

 ಕೊಂದವರುಳಿವರೇ ಕೂಡಲಸಂಗಮದೇವಾ....

ಭಾರತದ ಒಳಗೆ ಗಾಂಧೀಜಿಯನ್ನು ಕೊಲ್ಲುವ ವಿಫಲ ಯತ್ನಗಳೂ ಎಷ್ಟೇ ನಡೆಯಲಿ ಭಾರತದ ಹೊರಗೆ ನಾವು ಹೋದಾಗ ಒಂದಿಷ್ಟು ಮರ್ಯಾದೆ ಗೌರವಗಳು ಸಿಗಬೇಕಾದರೆ ನಾವು ಅಲ್ಲಿ ನಮ್ಮ ಐಡೆಂಟಿಟಿಗಾಗಿ ಗಾಂಧಿಯ ಹೆಸರನ್ನು ಹೇಳಬೇಕಾಗುತ್ತದೆಯೇ ಹೊರತು ಗಾಂಧಿಯನ್ನು ಕೊಂದವರ ಹೆಸರನ್ನಲ್ಲ. 

ಹೀಗೆ ಜಗತ್ತಿನ ಜನಮಾನಸದಲ್ಲಿ ಬೇರ್ಪಡಿಸಲಾಗದಂತೆ ಬೆರೆತುಹೋಗಿರುವ ಗಾಂಧೀಜಿಯೆ  ಐಡಿಯಾಲಜಿಗೆ ಮಾತ್ರವೇ ವಿಶ್ವಶಾಂತಿ ಬಾಯಾರಿಕೆಯ ವಿದೇಶಿ ಯುವಜನತೆಯನ್ನು ಭಾರತಕ್ಕೆ ಸೆಳೆಯುವ ಶಕ್ತಿ ಇರುವುದೇನೋ... 


ನಿನ್ನೆ ಗುಜರಾತಿನಲ್ಲಿ, ಗಾಂಧೀಜಿ ತಮ್ಮ ಜೀವನದ ಬಹುಭಾಗವನ್ನು ಬದುಕಿದ, ಮತ್ತು ಉಪ್ಪಿನ ಸತ್ಯಾಗ್ರಹ ಸೇರಿದಂತೆ ಬಹುಮುಖ್ಯ ಚಳವಳಿಗಳನ್ನು ನಿಂತು ಮುನ್ನೆಡೆಸಿದ, ಸಾಬರಮತಿ ಆಶ್ರಮದಲ್ಲಿ ಗಾಂಧೀಜಿಯ ಮನೆ ʼಹೃದಯಕುಂಜʼದಲ್ಲಿ ಗಾಂಧೀಜಯಂತಿ ಕಾರ್ಯಕ್ರಮದ ನಂತರ ಅವರು ಸಾರ್ವಜನಿಕರನ್ನು ಭೇಟಿಮಾಡುತ್ತಿದ್ದ, ಮತ್ತು ಮಹತ್ವದ ವಿಷಯಗಳನ್ನು ಕುರಿತು ಚರ್ಚಿಸುತ್ತಿದ್ದ ಅವರ ಕೋಣೆಯಲ್ಲಿ ಜಪಾನಿನಿಂದ ಬಂದಿದ್ದ ಈ ಯುವಕ ಯುವತಿಯರು ಸಿಕ್ಕರು.

 ಅವರೊಡಗಿನ ಒಂದಿಷ್ಟು ಮಾತುಗಳು ಇಲ್ಲಿ ಗಾಂಧಿಯನ್ನು ಕೊಲ್ಲುವ ಪ್ರಯತ್ನಗಳು ಎಷ್ಟು ಭರದಿಂದ ನಡೆಯುತ್ತಿವೆಯೋ ಅಷ್ಟೇ ಭರದಿಂದ ವಿದೇಶದಲ್ಲಿ ಅವರನ್ನು ಬೆಳೆಸುವ ಪ್ರಯತ್ನಗಳೂ ಆಗುತ್ತಿವೆ ಎಂಬುದನ್ನು ನನ್ನ ಅರಿವಿಗೆ ತಂದವು. ಅದೇ ಕ್ಷಣ ಬಸವಣ್ಣನವರ ವಚನದ ʼಕೊಂದವರುಳಿವರೇ ಕೂಡಲಸಂಗಮದೇವಾ..ʼ ಎಂಬ ಸಾಲು ಮನದ ಮೂಲೆಯಲ್ಲಿ ಹಾದು ಹೋಯಿತು....

ರಾಜೇಂದ್ರ ಬುರಡಿಕಟ್ಟಿ

ಅಕ್ಟೋಬರ್‌ ೩, ೨೦೨೫