Tuesday, September 14, 2021

ತಮಿಳು ಮೂಲದ ಕನ್ನಡ ‘ಪ್ರೇ(ಮಿ)ಮ’ಕುಮಾರ್!

 

ತಮಿಳು ಮೂಲದ ಕನ್ನಡಪ್ರೇ(ಮಿ)ಕುಮಾರ್!


ಇವರು
ಆರ್. ಪ್ರೇಮ್ ಕುಮಾರ್. ನನ್ನ ಪ್ರಮುಖ ಲೇಖನಿಮಿತ್ರರಲ್ಲಿ ಒಬ್ಬರಾದ ತಮಿಳುನಾಡಿನ ಊಟಿ ಮೂಲದ ಪ್ರೇಮ್ ಕುಮಾರ್ ತಮ್ಮ ಸೇವೆಯನ್ನು ಆರಂಭಿಸಿದ್ದು ಕರ್ನಾಟಕದ ಬೆಳಗಾವಿಯಲ್ಲಿ. ಮುಂದೆ ಅಸ್ಸಾಂ, ಗುಜರಾತ್ ಗಳಲ್ಲಿ ಕೆಲಸಮಾಡಿ ಗಾಜನೂರು ನವೋದಯ ಪ್ರಿನ್ಸಿಪಾಲರಾಗಿ ಬಂದು ಏಳೆಂಟು ವರ್ಷ ಕೆಲಸಮಾಡಿ ಇದೀಗ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ನವೋದಯ ವಿದ್ಯಾಲಯಕ್ಕೆ ವರ್ಗವಾಗಿದ್ದಾರೆ. ಅದರಲ್ಲಿ ಏನು ವಿಶೇಷ? ಅದನ್ನು ಇಲ್ಲಿ ಹೇಳುವ ಅವಶ್ಯಕತೆಯಾದರೂ ಏನು ಅನ್ನುವಿರಾ? ಕೇಳಿ

ಅವರ ಬಗ್ಗೆ ಇಲ್ಲಿ ಹೇಳಲು ಕಾರಣವಾಗಿದ್ದು ಅವರು ನಮ್ಮ ನಾಡು ನುಡಿ, ಭಾಷೆ ಮತ್ತು ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಹೊಂದಿದ್ದ ಪ್ರೀತಿ ಮತ್ತು ಕಾಳಜಿ. ನಾವಿಬ್ಬರೂ ಏನನ್ನಾದರೂ ಮಾತನಾಡಬೇಕಾದಾಗ ನಾನು ಇಂಗ್ಲಿಷ್ ನಲ್ಲಿ ಪ್ರಶ್ನೆಕೇಳಿದರೆ ತಕ್ಷಣ ನನ್ನ ಕೆನ್ನೆಗೆ ಹೊಡೆದಂತೆ ಕನ್ನಡದಲ್ಲಿ ಉತ್ತರ ಕೊಡುತ್ತಿದ್ದ ಇವರು ಮೂಲತಃ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ. ಭಾಷೆಯ ಸಾಹಿತ್ಯ ಓದು ಅವರಿಗೆ ಎಷ್ಟರಮಟ್ಟಿಗೆ ಇತ್ತೆಂದರೆ ಮಿಲ್ಟನ್ನನ್ನ ಮಹಾಕಾವ್ಯಪ್ಯಾರಡೈಸ್ ಲಾಸ್ಟ್ ಬಹುಮುಖ್ಯ ಭಾಗಗಳನ್ನು ಅರ್ಧರಾತ್ರಿಯಲ್ಲಿ ಎಬ್ಬಿಸಿ ಕೇಳಿದರೂ ಪಟಪಟ ಹೇಳುವಷ್ಟು, ವ್ಯಾಖ್ಯಾನಿಸುವಷ್ಟು!

ಪ್ರೇಮ್ ಕುಮಾರ್ ಒಬ್ಬ ಉತ್ತಮ ಆಡಳಿತಗಾರರಾಗಿದ್ದುದರ ಜೊತೆಗೆ ಒಬ್ಬ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವಂಥವರು.  ಒಬ್ಬ ಉತ್ತಮ ಭಾಷಣಕಾರರಾದ ಅವರು ತಮ್ಮ ಭಾಷಣಕ್ಕೆ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಬಲ್ಲವರು. ವಿದ್ಯಾರ್ಥಿಗಳು ನೆನಪಿಟ್ಟುಕೊಳ್ಳಲು ಅನುಕೂಲವಾಗುವಂತೆ ಟಿಪ್ಪಣಿರೂಪದಲ್ಲಿ ಅವರು ಮಾಡುತ್ತಿದ್ದ ಭಾಷಣಶೈಲಿಯನ್ನು ನಾನು ಅನೇಕ ವೇಳೆ ಅಳವಡಿಸಿಕೊಂಡದ್ದಿದೆ.

ತಮಿಳಿಗಿಂತ ಇಂಗ್ಲಿಷ್ ಭಾಷೆಯ ಮೇಲೆ ಹೆಚ್ಚು ಪ್ರಭುತ್ವ ಹೊಂದಿದ್ದ ಇವರು ತಮ್ಮ ಕವಿಮನಸ್ಸಿನ ಕಾರಣಕ್ಕೆ ನನಗೆ ಹತ್ತಿರವಾದವರು. ಇಂಗ್ಲಿಷಿನಲ್ಲಿ ಅವರು ಬರೆದಿದ್ದ ಹಲವು ಕವಿತೆಗಳಲ್ಲಿ ಇದ್ದ ಭಾವತೀವ್ರತೆ ನನ್ನನ್ನು ಅಚ್ಚರಿಗೊಳಿತ್ತುಅವುಗಳೆಲ್ಲವನ್ನು ಕೂಡಿಸಿ ಸಂಗ್ರಹವೊಂದನ್ನು ಹೊರತರಲು ನಾನು ಪದೇ ಪದೇ ಹೇಳುತ್ತಿದ್ದೆ. ನಾನು ಮತ್ತು ನನ್ನಂಥವರ ಒತ್ತಡದಿಂದ ಕೆಲಸವನ್ನು ಮಾಡಿ ಕಳೆದ ವರ್ಷ ಅವರು ಪ್ರಕಟಿಸಿದ ಮೊದಲ ಕೃತಿ ‘Love Beyond’ ಕವನ ಸಂಕಲನದ ಮೂಲಕ ಒಬ್ಬ ಒಳ್ಳೆಯ ಕವಿಯೆಂದು ಗುರುತಿಸಲ್ಪಟ್ಟವರು.

ನನ್ನನ್ನು ಇನ್ನೂ ಚಕಿತಗೊಳಿಸಿದ್ದು ಕನ್ನಡ ಸಾಹಿತ್ಯದ ಬಗ್ಗೆ ಅವರಿಗಿದ್ದ ಪ್ರೀತಿ. ಕನ್ನಡದ ಬಹುಮುಖ್ಯ ಕೃತಿಗಳನ್ನು ಓದಬೇಕೆಂದು ಅವರು ಉತ್ಕಟ ಆಸೆ ಇಟ್ಟುಕೊಂಡಿದ್ದರು. ಆದರೆ ಭಾಷೆಯ ಕಾರಣಕ್ಕೆ ಅವರ ಆಸೆಯನ್ನು ನಾನು ಅವರ ಮಟ್ಟದಲ್ಲಿ ಪೂರೈಸಲು ಆಗಲಿಲ್ಲ.  ನಮ್ಮ ಕನ್ನಡ ಮೇಷ್ಟ್ರೇ ಓದದಿರುವ ಹಲವು ಮುಖ್ಯ ಕೃತಿಗಳನ್ನು ಅವರು ಓದಲು ನನಗೆ ಕೇಳುತ್ತಿದ್ದರು. ಕುವೆಂಪು ಅವರ ಶ್ರೀರಾಮಾಯಣ ದರ್ಶನಂನ ಇಂಗ್ಲಿಷ್ ಆವೃತ್ತಿಯನ್ನು ನಾನು ಕೊಟ್ಟ ಹದಿನೈದು ದಿನಗಳೊಳಗೆ ಓದಿ ಅದರ ಬಗ್ಗೆ ಗಂಭೀರವಾದ ಚರ್ಚೆಯನ್ನು ಅವರು ನನ್ನೊಡನೆ ಮಾಡಿದ್ದರು. ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗವನ್ನು ನಾನು ಓದಲೇಬೇಕು ಎಂದು ಹಟಮಾಡಿ ನಾನು ಅದರ ಇಂಗ್ಲಿಷ್ ಆವೃತ್ತಿಯನ್ನು ಹುಡುಕಿಕೊಡುವವರೆಗೂ ನನ್ನ ಬಿಡದೆ ತರಿಸಿಕೊಂಡು ಓದಿದ್ದರು.

ಸ್ಥಳೀಯ ಭಾಷೆ ಸಂಸ್ಕೃತಿಗಳ ಬಗ್ಗೆ ತಕ್ಕಮಟ್ಟಿನ ಅರಿವು ಇಲ್ಲದಿದ್ದರೆ ಮಕ್ಕಳ ವ್ಯಕ್ತಿತ್ವ ವಿಕಸನ ಕುಂಠಿತವಾಗುತ್ತದೆ ಎಂದು ಸರಿಯಾಗಿ ಗುರುತಿಸಿದ್ದ ಇವರು ಗಾಜನೂರು ವಿದ್ಯಾಲಯದಲ್ಲಿ ಹನ್ನೊಂದು ಹನ್ನೆರಡನೆಯ ತರಗತಿಗಳಿಗೆ ಕನ್ನಡ ಅಧ್ಯಾಪಕರು ಇಲ್ಲದಿದ್ದಾಗ ಸ್ಥಳೀಯವಾಗಿ ಯಾರನ್ನಾದರೂ ವ್ಯವಸ್ಥೆಮಾಡಲು ನಮ್ಮನ್ನೆಲ್ಲ ಕಟ್ಟಿಕೊಂಡು ನಮಗಿಂತಲೂ ಹೆಚ್ಚು ಕಾಳಜಿವಹಿಸಿ ಗೋಳಾಡಿದ್ದರು!

ಅವರು ತನಿಖಾಧಿಕಾರಿಯಾಗಿ ಖಾಸಗೀ ಶಾಲೆಗಳಿಗೆ ಅದರಲ್ಲೂ ಇಂಗ್ಲಿಷ್ ಮಾಧ್ಯಮದ ಖಾಸಗೀ ಶಾಲೆಗಳಿಗೆ ಹೋದಾಗ, ಅದು ಬೆಂಗಳೂರು ಇರಲಿ, ಹೈದರಾಬಾದ್ ಇರಲಿ ವೆಲ್ಲೂರು ಇರಲಿ ಅವರು ಒತ್ತುಕೊಟ್ಟು ಗಮನಿಸುತ್ತಿದ್ದು, ಪ್ರಶ್ನೆಕೇಳುತ್ತಿದ್ದುದು ನೆಲದ ಸ್ಥಳೀಯ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಕ್ಕಮಟ್ಟಿನ ಜ್ಞಾನವಾದರೂ ಇದೆಯಾ ಎಂಬುದನ್ನು. ನಮ್ಮ ರಾಜ್ಯದ ಅನೇಕ ಖಾಸಗೀ ಶಾಲೆಗಳಿಗೆ ವಿಶೇಷವಾಗಿ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಿಗೆ ಅವರು ಹೋಗಿ ಬಂದು ನನ್ನೊಡನೆ ಮಾತನಾಡುವಾಗ ಬಹಳಷ್ಟು ಶಾಲೆಗಳ ಮಕ್ಕಳಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಿಚಯವೇ ಆಗುತ್ತಿಲ್ಲವೆಂದು ನೋವಿನಿಂದ ಹೇಳುತ್ತಿದ್ದರು. ಕೊನೆಯ ಪಕ್ಷ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿತಂದುಕೊಟ್ಟ ಸಾಹಿತಿಗಳ ಹೆಸರಾದರೂ ಗೊತ್ತಿಲ್ಲದಿದ್ದರೆ ಹೇಗೆ? ಎಂದು ಅವರು ಕೇಳುವ ಪ್ರಶ್ನೆಗೆ ನಾನು ಅಪರಾಧಿಯಂತೆ ಸುಮ್ಮನೆ ಉತ್ತರ ಕೊಡಲಾಗದೆ ಕೂತದ್ದಿದೆ!


ಬಹುಶಃ ಇದೇ ಕಾರಣದಿಂದ ಇರಬೇಕು. ತಾವು ಪ್ರಾಚಾರ್ಯರಾಗಿರುವ ಶಾಲೆಯಲ್ಲಿ ಮಕ್ಕಳಿಗೆ ರೀತಿಯಸಾಂಸ್ಕೃತಿಕ ಬಡತನಉಂಟಾಗದಂತೆ ಏನಾದರೂ ಮಾಡಬೇಕೆಂದು ಅವರು ಹವಣಿಸುತ್ತಲೆ ಇದ್ದರು. ಧಾರವಾಡದ ಬೇಂದ್ರೆ ಪ್ರತಿಷ್ಠಾನದಿಂದ ತಂಡವನ್ನು ಕರೆಸಿ, ಬೇಂದ್ರೇ ವೇಷಧಾರಿಯನ್ನು ನೋಡಿ, ಅವರ ಬಗ್ಗೆ ಉಪನ್ಯಾಸ ಕೇಳುವಂತೆ ಮಾಡಿ, ಅವರ ಹಾಡುಗಳನ್ನು ಸವಿಯುಂತೆ ಮಾಡಿ ಮಕ್ಕಳ ಮನಸ್ಸಿನಲ್ಲಿ .ರಾ.ಬೇಂದ್ರೆ ಅಚ್ಚಳಿಯುವಂತೆ ಅವರು ಮಾಡಿದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿತ್ತು. ಅದೇ ಮಾದರಿಯಲ್ಲಿ ಕುವೆಂಪು ಸೇರಿದಂತೆ ಪ್ರಮುಖ ಸಾಹಿತಿಗಳ ಬಗ್ಗೆ ಪರಿಚಯ ಕಾರ್ಯಕ್ರಮ ಮಾಡಲು ಅವರು ಬಹಳ ಉತ್ಸುಕರಾಗಿದ್ದು ಅವರ ವೇಗಕ್ಕೆ ತಕ್ಕಂತೆ ನಾವೇ ಕೆಲಸ ಮಾಡಲಿಲ್ಲವಾಗಿ ಅವುಗಳ ಬಹಳ ನಡೆಯಲು ಸಾಧ್ಯವಾಗಲಿಲ್ಲ.

ಅವರ ಕನ್ನಡದ ಕಾಳಜಿಯ ಕಾರ್ಯಗಳಲ್ಲಿ ಅತ್ಯಂತ ಪ್ರಮುಖವಾದದ್ದು ಮತ್ತು ಬಹಳದಿನಗಳ ಕಾಲ ಉಳಿಯುವಂಥದ್ದು ಅವರು ಗಾಜನೂರಿನ ನವೋದಯ ವಿದ್ಯಾಲಯದ ಆವರಣದಲ್ಲಿ ರೂಪಿಸಿದ ‘Writers Memorial’. ವಿದ್ಯಾಲಯ ಆವರಣಕ್ಕೆ ಬರುವವರಿಗೆ ನಮ್ಮ ನೆಲದ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಹೆಮ್ಮೆ ಬರುವಂತೆ ಏನನ್ನಾದರೂ ಮಾಡಬೇಕೆಂದು ಸದಾ ಯೋಚಿಸುತ್ತಿದ್ದ ಅವರು ನನ್ನ ಜೊತೆ ಹಲವು ಸಾರಿ ಚರ್ಚಿಸಿ ಯೋಜನೆಯನ್ನು ರೂಪಿಸಿದರು. ಅದಕ್ಕೆ ಬೇಕಾದ ಹಣಕಾಸಿಗಾಗಿ ಅವರು ಪಟ್ಟ ಕಷ್ಟ ಹೇಳತೀರದು. ಆದರೂ ಹಟಕ್ಕೆ ಬಿದ್ದು ಅದನ್ನು ಮುಗಿಸಿಯೇ ತೀರಬೇಕೆಂದು ಪಟ್ಟು ಹಿಡಿದು ಮುಗಿಸಿದರು. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಎಂಟೂ ಜನ ಸಾಹಿತಿಗಳ ಪುತ್ಥಳಿಗಳೂ ಸೇರಿದಂತೆ ಅನೇಕ ಆಕರ್ಷಕ ಅಂಶಗಳನ್ನು ಹೊಂದಿರುವ ಸ್ಥಳಕ್ಕೆಪುಸ್ತಕಲೋಕಎಂದು ಹೆಸರನ್ನು ಕೊಡುವ ಭಾಗ್ಯ ನನಗೆ ಬಂದಿತುಈ ಪುಸ್ತಕ ಲೋಕವನ್ನು ರೂಪಿಸುವಲ್ಲಿ ಅವರೊಂದಿಗೆ ಕೈಜೋಡಿಸಿ ಅದನ್ನು ಆಗುಮಾಡಿದ ಗಾಜನೂರಿನ ನವೋದಯ ವಿದ್ಯಾಲಯದ ಅಧ್ಯಾಪಕರು ಮತ್ತು ಸಿಬ್ಬಂದಿ ಅದರಲ್ಲಿಯೂ ವಿಶೇಷವಾಗಿ ಅಲ್ಲಿನ ಕಲಾಶಿಕ್ಷಕರು (ಅವರೇ ಸ್ವತಃ ಇಲ್ಲಿನ ಜ್ಞಾನಪೀಠ ಪುರಸ್ಕೃತರ ಪುತ್ಥಳಿ ರೂಪಿಸಿದವರು) ಅಭಿನಂದನಾರ್ಹರು.

ಇಂತಹ ಸಾಹಿತ್ಯ ಸಂಸ್ಕೃತಿಗಳ ಒಡನಾಡಿ ಆರ್. ಪ್ರೇಮ್ ಕುಮಾರ್ ಇದೀಗ ಜವಾಬ್ದಾರಿ ವಹಿಸಿಕೊಂಡಿರುವ ಚಿಕ್ಕಮಗಳೂರು ನವೋದಯದಲ್ಲೂ ಇಂಥದೇ ಕೆಲಸ ಮಾಡಲು ಅವರಿಗೆ ಸಾಧ್ಯವಾಗಲಿ.

ಅವರು ಗಾಜನೂರು ಬಿಡುವಾಗ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಸ್ಪೂರ್ತಿದಾಯಕವಿದಾಯಭಾಷಣವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ಕಿಸಿ

https://youtu.be/juerreYmqws


ಡಾ. ರಾಜೇಂದ್ರ ಬುರಡಿಕಟ್ಟಿ

Tuesday, September 14, 2021

9 comments:

  1. Prem Kumar sir is a God gift to their students. We are blessed to listen to his speech.Nice write up sir.Thank you sir.

    ReplyDelete
  2. True sir. Prem Kumar sir is really great. Another two years with him in our school, we would have completely beautified Vidyalaya campus. Good time working with him.

    Also, well written sir.

    ReplyDelete
    Replies
    1. Working with Shri Prem Kumar Sir for three years was a great learning experience for me due to my interests for literature. His passion for literature has no linguistic barrier. Whatever love he possesses for English language and literature, with the same compassion he listened to and read Kannada literary works in English translation. Many times he expressed his regret for not being able to read and write this beautiful language. I am fortunate to get opportunities to translate many of his poems into Kannada. A seasoned academician and administrator, he builds a team in his place of work and identifies the positive side of every employee and brings out the best out of him/ her. Creates opportunities for all his colleagues and students.His love for the field of education and student community in immense. A compassionate teacher, his staff meetings also are superb classes. Any person who enters his chamber never leaves without learning something new. A true human whose presence makes a great change and absence is felt more. Sir, may your services enrich your new Vidyalaya, staff, students and the community around as you it has been always wherever you are. With regards, Jayabharathi K, TGT Science, JNV Mysuru.

      Delete
  3. Prem Kumar Sir is a true inspiration to many students like me. I am blessed to have him as my teacher. I salute you sir

    ReplyDelete
  4. More than Tamilian or Kannadiga Sir is a wonderful human being by heart... Always looks for an opportunity to better someone's life ... When he is around you feel everything is possible to achieve under the sun such a positive soul.. Thank u sir keep blessings us :-)

    ReplyDelete
  5. I am fortunate to be a student of premkumar sir in JNV doddabllapr, and he was our House master as well..
    Such a great inspection for many of us..

    ReplyDelete
  6. ಶ್ರೀ ಪ್ರೇಮಕುಮಾರ್ ಅವರ ಬಗ್ಗೆ ಬರೆದ ತುಂಬಾ ಪ್ರಸ್ತುತ ಮತ್ತು ಒಳ್ಳೆಯ ಲೇಖನ ಇದು. ನನಗೆ ಅವರ ಪರಿಚಯವಾದದ್ದು ನಾಲ್ಕಾರು ವರ್ಷಗಳ ಹಿಂದೆ ನನ್ನ ನಾದಿನಿ ಮತ್ತು ಹೊಂಗಿರಣ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಶೋಭಾ ಅವರು ಮೂಲಕ.
    ಪ್ರತಿವರ್ಷ ಶ್ರೀ ಪ್ರೇಮಕುಮಾರ್ ಅವರು ನಮ್ಮ ಕಿನ್ನರ ಮೇಳ ನಾಟಕವನ್ನು ವಿದ್ಯಾರ್ಥಿಗಳಿಗೆ ಆಯೋಜಿಸುತ್ತಿದ್ದಾರೆ. ಶಾಲೆ ಯಲ್ಲಿ ಯಾವುದೇ ಪಠ್ಯ,. ಅಥವಾ ಪರೀಕ್ಷೆ ಇರಲಿ, ಅದನ್ನು ಹೊಂದಿಸಿ ಕೊಂಡು ನಾವು ಕೇಳಿದಾಗ ಪ್ರದರ್ಶನ ಏರ್ಪಡಿಸುವವರು ಅವರು. ಇದು ಕಲೆ ಮತ್ತು ಸಂಸ್ಕೃತಿ ಯ ಬಗ್ಗೆ ಅವರಿಗಿರುವ ಆಸಕ್ತಿ ಮತ್ತು ಕಾಳಜಿ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸ್ಟೇ ಸೀಮಿತವಾಗಬಾರದು, ಉಳಿದ ಕ್ಷೇತ್ರಗಳಿಗೂ ತೆರೆದುಕೊಂಡು ತಮ್ಮನ್ನು ತೆರೆದುಕೊಂಡು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಎಂಬುದು ಅವರ ನಂಬುಗೆ. ಇಂಥ ಶಿಕ್ಷಕರು ಪ್ರತಿ ಶಾಲೆಯಲ್ಲೂ ಇದ್ದರೆ, ನಮ್ಮ ಶಿಕ್ಷಣ ಕ್ಷೇತ್ರ ಉಜ್ವಲ ವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಶ್ರೀ ಪ್ರೇಮಕುಮಾರ್ ಅವರು ದಕ್ಷತೆಯಿಂದಾಗಿ ನವೋದಯ ಶಾಲೆಗಳಲ್ಲಿ ಬಹಳ influencial ಅವರು. ಕೇವಲ ತಮ್ಮ ಶಾಲೆಯಲ್ಲಿ ಸ್ಟೇ ಅಲ್ಲ,. ಅವರಿಂದಾಗಿ ಸುಮಾರಾಗಿ ಎಲ್ಲ ನವೋದಯ ಶಾಲೆಗಳಲ್ಲೂ ನಮ್ಮ ನಾಟಕಗಳನ್ನು ಆಯೋಜಿಸಲು ನೆರವಾಗಿದ್ದಾರೆ ಅವರು.
    ಶ್ರೀ ಪ್ರೇಮಕುಮಾರ್ ಅವರು ಸೇವೆ ಹೀಗೇ ಮುಂದುವರೆಯಲಿ ಎಂದು ಆಶಿಸುತ್ತೇನೆ ಮತ್ತು ಅವರ ಕುರಿತ ಬರಹಕ್ಕೆ ಕೃತಜ್ಞತೆಗಳು.
    ಕೆ.ಜಿ.ಕೃಷ್ಣಮೂರ್ತಿ
    ಕಿನ್ನರ ಮೇಳ ತುಮರಿ

    ReplyDelete
  7. I am proud to be associated with Mr Premkumar. His concern for needy people is something very special. Very silently he carried counseling to many individuals to bring them to the main stream. He has varied facets of his personality. But his contributions are mostly unpublished. Probably this is the reason he has been able to do lot more.

    ReplyDelete
  8. Besides being a prolific writer, great teacher, selfless social worker and a motivational speaker Prem Kumar sir is a rare personality cult whose presence makes a magnetic effect on people who associates with. Although my associations with him was short and intermittent he has been a great book of learning for me.

    ReplyDelete